Kolara: JDS ಶಾಸಕ ಶ್ರೀನಿವಾಸಗೌಡ ಅಡ್ಡಮತದಾನ ಆರೋಪ! ಕಾರ್ಯಕರ್ತರಿಂದ ಪ್ರತಿಭಟನೆ

ರಾಜ್ಯಸಭೆ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಗೆ ಮತಹಾಕಿರೊದಾಗಿ ಶಾಸಕ ಶ್ರೀನಿವಾಸಗೌಡ ಹೇಳಿಕೆ ನೀಡಿದ್ದು, ಪಕ್ಷದ ಅಭ್ಯರ್ಥಿಗೆ ದ್ರೋಹ ಮಾಡಿದ್ದಾರೆಂದು ಕೋಲಾರದ ಮಹಾಲಕ್ಷ್ಮಿ ಲೇಔಟ್ ನಿವಾಸದ ಎದುರು  ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶ್ರೀನಿವಾಸಗೌಡ ರಾಜಿನಾಮೆಗೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ಜೆಡಿಎಸ್ ಕಾರ್ಯಕರ್ತರು

ಪ್ರತಿಭಟನೆ ನಡೆಸುತ್ತಿರುವ ಜೆಡಿಎಸ್ ಕಾರ್ಯಕರ್ತರು

  • Share this:
ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಅಡ್ಡಮತದಾನ (Cross Voting) ಮಾಡಿದ್ದೇನೆಂದು  ಕೋಲಾರ ಜೆಡಿಎಸ್ (Kolar JDS) ಶಾಸಕ ಶ್ರೀನಿವಾಸಗೌಡ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಶ್ರೀನಿವಾಸಗೌಡ ವಿರುದ್ದ ಜಿಲ್ಲೆಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್ ಮುಖಂಡರು ಹಾಗು ಕಾರ್ಯಕರ್ತರು ಶ್ರೀನಿವಾಸಗೌಡ ಮನೆ ಎದುರು ಪ್ರತಿಭಟನೆ (Protest) ನಡೆಸಿದ ಹಿನ್ನಲೆ, ಯಾವುದೇ ಅಹಿತಕರ ಘಟನೆ ನಡೆಯದಂತೆ, ಶ್ರೀನಿವಾಸಗೌಡ ಮನೆಗೆ ಪೊಲೀಸ್ ಭದ್ರತೆ (Police Protection) ಒದಗಿಸಲಾಗಿದೆ. ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್ ನ ನಿವಾಸದ ಎದುರು ಜೆಡಿಎಸ್ (JDS) ಮುಖಂಡರು, ಕಾರ್ಯಕರ್ತರು ಜಮಾಯಿಸಿ ಶಾಸಕ ರಾಜಿನಾಮೆಗೆ ಆಗ್ರಹಿಸಿದರು.

ಇನ್ನು ಶಾಸಕರಾದ ಶ್ರೀನಿವಾಸಗೌಡ ಹಾಗು ರಮೇಶ್ ಕುಮಾರ್ ವಿರುದ್ದ ಜೆಡಿಎಸ್ ಮುಖಂಡರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ಅವರವರ ಗೆಲುವಿಗಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದು, ಶ್ರೀನಿವಾಸಗೌಡ ಓರ್ವ ಧಮ್ ಇಲ್ಲದ, ಶಿಕಂಡಿ ಶಾಸಕ, ಹಾಗು ರಮೇಶ್ ಕುಮಾರ್ ಎರಡು ತಲೆಯ ಹಾವಿನಂತೆ, ಡಬಲ್ ಸ್ಟಾಂಡ್ ರಾಜಕಾರಣಿ ಎಂದು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ನಟರಾಜ್ ಆಕ್ರೋಶ ಹೊರಹಾಕಿದ್ದಾರೆ.

ತೀವ್ರ ವಾಗ್ದಾಳಿ

ಜೆಡಿಎಸ್ ಎಮ್ ಎಲ್ ಸಿ ಗೋವಿಂದರಾಜು, ಹಾಗು ಕೋಲಾರದ ಮುಂದಿನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸಿ.ಎಮ್.ಆರ್ ಶ್ರೀನಾಥ್ ಸಹ ಶಾಸಕ ಶ್ರೀನಿವಾಸ್ ಗೌಡ ವಿರುದ್ದ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆ ನಂತರವೂ ಶಾಸಕರ‌ ಮನೆಗೆ ನೀಡಿರುವ ಪೊಲೀಸ್ ಭದ್ರತೆಯನ್ನ ಮುಂದುವರೆಸಿದ್ದು, ಜೆಡಿಎಸ್ ವಲಯದಲ್ಲಿ ಶಾಸಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾಲು ಬಳಿ ಕುಳಿತು ಮನವಿ ಮಾಡಿದರು ಅವರು ಬದಲಾಗಲಿಲ್ಲ

ಶಾಸಕ ಶ್ರೀನಿವಾಸಗೌಡ ನಿವಾಸದ ಎದುರು ಪ್ರತಿಭಟನೆ ನಂತರ ಮಾತನಾಡಿದ, ಪರಿಷತ್ ಶಾಸಕ ಗೋವಿಂದರಾಜು, ಶ್ರೀನಿವಾಸಗೌಡ ಒಬ್ಬ ನಂಬಿಕೆದ್ರೋಹಿ ರಾಜಕಾರಣಿ ಎಂದು ಕಿಡಿಕಾರಿದ್ದಾರೆ. ರಾಜ್ಯಸಭೆ ಚುನಾವಣೆ ಹಿನ್ನಲೆ ಪಕ್ಷದ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಅವರು ಪೋನ್ ಕರೆ ಮಾಡಿ, ಮತದಾನ ಮಾಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: Monsoon ಆರಂಭಕ್ಕೂ ಮುನ್ನ ಕೊಡಗಿಗೆ ಆಗಮಿಸಿದ NDRF ತಂಡ; ಪ್ರವಾಹ, ಭೂಕುಸಿತ ಸ್ಥಳಗಳ ಗುರುತಿಸುವಿಕೆ

ನಾನು ಕಳೆದ ವಾರ ಶ್ರೀನಿವಾಸಗೌಡರ ಬಳಿಗೆ ಹೋಗಿ ಮನವಿ ಮಾಡಿದ್ದೆ, ಪಕ್ಷ ವಿರೋಧಿ ಚಟುವಟಿಕೆ ಮಾಡಬೇಡಿ ಎಂದು ಅವರ ಕಾಲು ಬಳಿ ಕುಳಿತು ಮನವಿ ಮಾಡಿದ್ದೆ.  ಆದರೆ ದುರಂತ ಅದಕ್ಕು ಸ್ಪಂದಿಸದೆ ಎಲ್ಲರಿಗೂ ಮೋಸ ಮಾಡಿದ್ದಾರೆ, ಇಂತಹ ಬೆಳವಣಿಗೆಯಿಂದ ನಮಗೆ ಸಾಕಷ್ಟು ದುಃಖವಾಗಿದೆ. ಕೋಲಾರ ರಾಜಕೀಯ ಇತಿಹಾಸದಲ್ಲಿ ಇದೊಂದು ಕರಾಳ ದಿನ, ಇಂತಹ ಬೆಳವಣಿಗೆ ಯಾವ ಪಕ್ಷಕ್ಕೆ ಬರವಾರದು ಎಂದು ಭಾವುಕರಾಗಿ ನುಡಿದರು.

ಶ್ರೀನಿವಾಸಗೌಡ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ಗರಂ ಆಗಿದ್ದಾರೆ, ಅಡ್ಡಮತದಾನ ಬಳಿಕ, ಪಕ್ಷದ ನಾಯಕರ ವಿರುದ್ದವೇ ಶ್ರೀನಿವಾಸಗೌಡ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Rajyasabha Elections: ಹರಿಯಾಣದಲ್ಲಿ ಹೈಡ್ರಾಮಾ! 8 ಗಂಟೆ ಮತ ಎಣಿಕೆ ವಿಳಂಬ, ಬಿಜೆಪಿ ಗೆಲುವು

ಇದರ ಮುಂದುವರಿದ ಭಾಗವಾಗಿ  ಶಾಸಕ ಶ್ರೀನಿವಾಸಗೌಡ 10-06-2022 ರಂದು ನಿಧನ ಹೊಂದಿದ್ದಾರೆಂದು ಫೇಸ್ ಬುಕ್ ನಲ್ಲಿ ಕೆಲ ಜೆಡಿಎಸ್ ಅಭಿಮಾನಿಗಳು ಪೋಸ್ಟ್ ಹಾಕಿದ್ದು, ಕುಮಾರಸ್ವಾಮಿ For ಸಿಎಂ ಎನ್ನುವ ಪೇಜ್ ನಲ್ಲಿ ಹಾಕಿದ್ದಾರೆ.  ಕೈಲಾಸ ಸಮಾರಾಧನೆ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆ ನಡೆಯುತ್ತಿದೆ.
Published by:Divya D
First published: