• Home
  • »
  • News
  • »
  • state
  • »
  • ಶ್ರೀರಂಗಪಟ್ಟಣ ಪುರಸಭೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಜೆಡಿಎಸ್; ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು

ಶ್ರೀರಂಗಪಟ್ಟಣ ಪುರಸಭೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಜೆಡಿಎಸ್; ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು

ಜೆಡಿಎಸ್​ ಅಭ್ಯರ್ಥಿಗಳು

ಜೆಡಿಎಸ್​ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಹೊರತು ಪಡಿಸಿ ಉಳಿದೆಲ್ಲಾ ತಾಲೂಕಿನ ಪಟ್ಟಣ ಪುರಸಭೆ ಹಾಗೂ ಮಂಡ್ಯ ನಗರಸಭೆಗಳಲ್ಲಿ  ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದೆ. 

  • Share this:

ಮಂಡ್ಯ (ನ.6): ಉಪಚುನಾವಣೆ ಬಳಿಕ ಸ್ಥಳೀಯ ಸಂಸ್ಥೆ ಗಳಲ್ಲಿ ಅಧಿಕಾರ ಹಿಡಿಯಬಹುದೆಂಬ  ಬಿಜೆಪಿ ಆಶಾಭಾವನೆ ಇದೀಗ ನುಚ್ಚು ನೂರಾಗಿದೆ. ಶ್ರೀರಂಗಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವ  ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮತ್ತೆ ಪ್ರಾಬಲ್ಯ ಮೆರೆದಿದೆ. ಈ ಮೂಲಕ  ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಹೊರತು ಪಡಿಸಿ ಉಳಿದೆಲ್ಲಾ ತಾಲೂಕಿನ ಪಟ್ಟಣ ಪುರಸಭೆ ಹಾಗೂ ಮಂಡ್ಯ ನಗರಸಭೆಗಳಲ್ಲಿ  ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದೆ. ಶ್ರೀರಂಗಪಟ್ಟಣ ಪುರಸಭೆಯ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಎರಡು ಸ್ಥಾನಕ್ಕೆ ವಿರೋಧ ಪಕ್ಷದಿಂದ ಯಾರು ನಾಮಪತ್ರ ಸಲ್ಲಿಸದ ಕಾರಣ ಇಬ್ವರು ಅವಿರೋಧವಾಗಿ ಆಯ್ಕೆಯಾಗಿದ್ದು ಪಟ್ಟಣ ಪುರಸಭೆಯ ಅಧಿಕಾರದ ಗದ್ದುಗೆ ಎರಿದ್ದಾರೆ.


ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ  ಹಾಗೂ ಉಪಾಧ್ಯಕ್ಷ ಸ್ಥಾನ  ಸಾಮಾನ್ಯಕ್ಕೆ ಮೀಸಲಾಗಿ ದ್ದರಿಂದ ಜೆಡಿಎಸ್ ಪಕ್ಷದ 19 ನೇ ವಾರ್ಡ್ ನ ನಿರ್ಮಲ ಅಧ್ಯಕ್ಷೆಯಾಗಿ ಹಾಗೂ 10 ನೇ ವಾರ್ಡ್ ಪ್ರಕಾಶ್ ನಾಮಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ.


ಎರಡು ವರ್ಷದ  ಹಿಂದೆ  ಪಟ್ಟಣ ಪುರಸಭೆ 23 ಸದಸ್ಯ ಸ್ಥಾನಕ್ಕೆ ಚುನಾವಣೆಗೆ ನಡೆದಿತ್ತು. ಇದರಲ್ಲಿ 12 ಜೆಡಿಎಸ್​, 08 ಕಾಂಗ್ರೆಸ್, 02, ಪಕ್ಷೇತರ ಹಾಗೂ ಒಬ್ಬ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಮೀಸಲಾತಿ ಕಾರಣ ದಿಂದ ಕಳೆದ  ಎರಡು ವರ್ಷದಿಂದ ಯಾವುದೇ ಅಧಿಕಾರವಿರಲಿಲ್ಲ. ಸರ್ಕಾರ ಕಡೆಗೂ ಮೀಸಲಾತಿ ಪ್ರಕಟಿಸಿದ ಕಾರಣ ಹೈಕೋರ್ಟ್ ಈ ಕುರಿತು ನ10ರೊಳ ಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸು ವಂತೆ ಸೂಚಿಸಿತು.


ಇದನ್ನು ಓದಿ: ಸಂಸದೆ ಸುಮಲತಾ ಮತಚಲಾಯಿಸಿದರೂ ಕೈ ತಪ್ಪಿದ ಅಧಿಕಾರ; ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್​ ಪ್ರಾಬಲ್ಯ


ಇಂದು  ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 23 ಸದಸ್ಯರುಸೇರಿದಂತೆ 1 ಸಂಸದೆ ಹಾಗೂ 1 ಕ್ಷೇತ್ರದ ಶಾಸಕರ ಮತ ಸೇರಿ 25 ಮತಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಊರ್ಜಿತವಾಗಿತ್ತು. 12 ಜೆಡಿಎಸ್​ ಸದಸ್ಯರು ಹಾಗೂ 1 ಶಾಸಕರ ಮತ ಸೇರಿ 13 ಮತಗಳು ಜೆಡಿಎಸ್​ಗೆ ಸರಳ ಬಹುಮತ ಇದ್ದರೂ ಕಾಂಗ್ರೆಸ್ ಪಕ್ಷದವರು ಕೆಲ ಜೆಡಿಎಸ್ ಸದಸ್ಯರು ಪಕ್ಷೇತರ ಸದಸ್ಯರು, ಹಾಗೂ ಬಿಜೆಪಿ ಸದಸ್ಯರ ಬೆಂಬಲದ ಜೊತೆಗೆ ಸಂಸದೆಯ ಮತದ  ಮೂಲಕ ಅಧಿಕಾರ ಹಿಡಿಯುವ ಯೋಜನೆ ರೂಪಿಸಿತು. ಆದರೆ  ಆ ಯೋಜನೆ ಸಫಲವಾಗದ ಕಾರಣ ಇಂದು ಕಾಂಗ್ರೆಸ್ ಪಕ್ಷದ ಯಾವ ಸದಸ್ಯರು  ನಾಮಪತ್ರ ಸಲ್ಲಿಸಿರಲಿಲ್ಲ. ಜೆಡಿಎಸ್ ಪಕ್ಷದಿಂದ ಸದಸ್ಯರಿಗೆ ವಿಪ್ ಜಾರಿ ಮಾಡಿದ ಕಾರಣ  ಸದಸ್ಯರು ಹೊರಗೆ ಜಿಗಿಯಲು ಬಿಡಲಿಲ್ಲ. ಕಡೆಗೆ ಪಕ್ಷೇತರ ಇಬ್ಬರು  ಪಕ್ಷೇತರ ಸದ್ಯಸರು ಹಾಗೂ ಓರ್ವ ಬಿಜೆಪಿ  ಸದಸ್ಯೆಯ ಬೆಂಬಲದಿಂದ ಜೆಡಿಎಸ್ ನ‌ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು.


ಪಟ್ಟಣ ಪುರಸಭೆಯ ಅಧಿಕಾರಕ್ಕಾಗಿ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ರಣತಂತ್ರ ರೂಪಿಸಿದ್ದು ಪಟ್ಟಣದಲ್ಲಿ ಗಲಾಟೆಯಾಗುವ ಮುನ್ನೆಚ್ಚರಿಕೆಯಿಂದ ತಾಲೂಕು ಆಡಳಿತ ಪುರಸಭೆ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಪುರಸಭೆಯಲ್ಲಿ  ಜೆಡಿಎಸ್ ಅಧಿಕಾರ  ಹಿಡಿದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಿಸಿದರು. ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಪಕ್ಷದ ಪರವಾಗಿ ಮತ ಹಾಕಿದ ಮತ್ತು ಸಹಕರಿಸಿದವರಿಗೆ ಧನ್ಯವಾದ ಹೇಳಿದರು. ನೂತನ ಅಧ್ಯಕ್ಷೆ ಮತ್ತು  ಉಪಾಧ್ಯಕ್ಷರು ಶಾಸಕರ ನೇತೃತ್ವದಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

Published by:Seema R
First published: