ಕೋಲಾರ(ನ.10): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ್ಯ-ಉಫಾಧ್ಯಕ್ಷ್ಯ ಚುನಾವಣೆಯಲ್ಲಿ ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಕಾಂಗ್ರೆಸ್ ಗೆ ಮುಖಭಂಗ ಉಂಟಾಗಿದೆ. 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್‍ನಿಂದ ಅಧ್ಯಕ್ಷ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಲಿತಾ ಅವರು 12 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ್ಯರಾಗಿ ಜೆಡಿಎಸ್ ನ ಆಯೆಶಾ ಆಯ್ಕೆಯಾಗಿದ್ದಾರೆ. ಇನ್ನು ಪುರಸಭೆಯಲ್ಲಿ ಕಡಿಮೆ ಬಲ ಹೊಂದಿರುವ ಕಾಂಗ್ರೆಸ್‍ನ ಕೆಲ ಸದಸ್ಯರು ಚುನಾವಣೆಗೆ ಗೈರು ಹಾಜರಾಗಿದ್ದಾರೆ. ಚುನಾವಣೆಯಲ್ಲಿ ಮತಚಲಾವಣೆ ಅಧಿಕಾರ ಹೊಂದಿದ್ದ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಸಹ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರು.
ಕೆಲ ಕಾಂಗ್ರೆಸ್ ಸದಸ್ಯರು ಚುನಾವಣೆಯಲ್ಲಿ ಭಾಗಿಯಾಗದೆ ಗೈರು ಹಾಜರಾಗಲು ಜೆಡಿಎಸ್ ಮುಖಂಡರು ಕಾರಣವೆಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಹೇಳಿಕೆ ನೀಡಿಲ್ಲ, ಇನ್ನು ವಿಧಾನಸಭೆ ಚುನಾವಣೆ ಸೋಲಿನ ನಂತರ ಪುರಸಭೆ ಗೆಲುವು ಜೆಡಿಎಸ್ ಗೆ ಹೊಸ ಹುರುಪು ತಂದಿದೆ. ಜೆಡಿಎಸ್ ಗೆಲುವು ಹಿನ್ನಲೆ ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ, ಅವರ ಬೆಂಬಲಿಗರು, ಕಾರ್ಯಕರ್ತರು, ಪುರಸಭೆ ಕಾರ್ಯಾಲಯದ ಎದುರು ಸಂಭ್ರಮಾಚರಣೆ ಮಾಡಿದರು, ಪಟಾಕಿ ಸಿಡಿಸುವುದು ನಿಷೇಧ ಇದ್ದರೂ ಪೊಲೀಸರ ಎದುರೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೋವಿಡ್ 19 ನಿಯಮಗಳನ್ನು ಲೆಕ್ಕಿಸದೆ, ಸಂಭ್ರಮದ ಗುಂಗಿನಲ್ಲಿ ಸಾಮಾಜಿಕ ಅಂತರವನ್ನು ಮರೆತು ವಿಜಯೋತ್ಸವ ಆಚರಿಸಿದರು,
ವಿಧಾನಸಭೆ ಸೋಲಿನ ನಂತರ ಮೊದಲ ಚುನಾವಣೆಯಲ್ಲಿ ಗದ್ದುಗೆ ಗೆದ್ದ ಖುಷಿಯಲ್ಲಿ ಮಾತನಾಡಿದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ನಾನು ಕ್ಷೇತ್ರದಲ್ಲೇ ಇಲ್ಲ ಎಂದು ಕೆಲವರು ಹೇಳ್ತಿದ್ದಾರೆ, ನಾನು ಮಾಡಿದ ಅಭಿವೃದ್ದಿ ಕಾರ್ಯಗಳು ಶ್ರೀನಿವಾಸಪುರ ಪಟ್ಟಣದಲ್ಲಿ ಇಂದಿಗೂ ಜೀವಂತವಾಗಿವೆ. ಅಭಿವೃದ್ಧಿ ಯಾರೇ ಮಾಡಲಿ ನನ್ನ ಬೆಂಬಲ ಇರುತ್ತೆ, ಈಗಲೂ ಜನರ ಬೆಂಬಲ ನಮ್ಮ ಕಡೆಯಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ನಾನು ಶಾಸಕನಾಗಿ ವಿಧಾನಸೌಧ ಪ್ರವೇಶ ಮಾಡುವೆ ಎಂದು ರಮೇಶ್ ಕುಮಾರ್ ಅಪ್ಪಟ ಪ್ರತಿಸ್ಪರ್ಧಿ ವೆಂಕಟಶಿವಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿರಾ ಉಪಚುನಾವಣೆ ಫಲಿತಾಂಶ: ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ, ಬಿಗಿ ಪೊಲೀಸ್ ಬಂದೋಬಸ್ತ್
ಜಿಲ್ಲೆಯಲ್ಲಿ 1 ನಗರಸಭೆ, 2 ಪುರಸಭೆಯಲ್ಲಿ ಜೆಡಿಎಸ್ ಆಡಳಿತ ಆರಂಭ, ಕಾಂಗ್ರೆಸ್ ಗೆ ತೀವ್ರ ಮುಖಭಂಗ
ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಇನ್ನು ಜಿಲ್ಲಾ ಕೇಂದ್ರ ಕೋಲಾರ ನಗರಸಭೆಯಲ್ಲೂ ಜೆಡಿಎಸ್ ನ ಸದಸ್ಯರೇ ಅಧ್ಯಕ್ಷ್ಯ ಉಪಾಧ್ಯಕ್ಷ್ಯರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಹೆಚ್ಚು ಸ್ಥಾನವನ್ನ ಗೆದ್ದಿದ್ದರೂ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ.
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ತೆನೆ ನಾಯಕರು, ಸ್ಥಳೀಯವಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ, ಜಿಲ್ಲೆಯ ಮೂರು ಕಡೆ ಅಧಿಕಾರ ಹಿಡಿಯಲು ಯಶಸ್ವಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ