ಮುಳಬಾಗಿಲು ಹಾಲು ಒಕ್ಕೂಟ ಚುನಾವಣೆ: ಜೆಡಿಎಸ್​ಗೆ ಗೆಲುವು, ಬಾಡೂಟ ಸವಿಯಲು ಮುಗಿಬಿದ್ದ ಜನ

ಬಿರಿಯಾನಿ ತಿನ್ನಲು ನೂಕುನುಗ್ಗಲು, ನೂಕಾಟ ತಳ್ಳಾಟ, ಟೇಬಲ್, ಚೇರ್ ಕೆಳಗೆ ನುಗ್ಗಿದ್ದು, ಖಾಲಿ ಬಿರಿಯಾನಿ ಪಾತ್ರೆಯೊಳಗೆ ಕೈ ಹಾಕಿ ಬಾಚಿಕೊಂಡಿದ್ದಾರೆ. ಬಾಡೂಟ ಎಂದು ಜನ ಮುಗಿಬಿದ್ದಿದ್ದು,  ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆ ಈ ರೀತಿ ಅವಾಂತರ ಸೃಷ್ಟಿಯಾಗಿದೆ.

Seema.R | news18
Updated:May 17, 2019, 7:37 PM IST
ಮುಳಬಾಗಿಲು ಹಾಲು ಒಕ್ಕೂಟ ಚುನಾವಣೆ: ಜೆಡಿಎಸ್​ಗೆ ಗೆಲುವು, ಬಾಡೂಟ ಸವಿಯಲು ಮುಗಿಬಿದ್ದ ಜನ
ಬಾಡೂಟಕ್ಕೆ ನೂಕುನುಗ್ಗಲು
Seema.R | news18
Updated: May 17, 2019, 7:37 PM IST
ಕೋಲಾರ (ಮೇ.17): ಕುತೂಹಲ ಮೂಡಿಸಿದ್ದ ಮುಳಬಾಗಿಲು ಹಾಲು ಒಕ್ಕೂಟ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಾಗಿ ಆಯೋಜಿಸಿದ್ದ ಬಾಡೂಟ ಸವಿಯಲು ಜನ ಮುಗಿ ಬಿದ್ದಿರುವ ಘಟನೆ ನಡೆದಿದೆ.

ಮುಳಬಾಗಿಲು ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತಾಲೂಕು ನಿರ್ದೇಶಕರಾಗಿ  ಕಾಡೇನಳ್ಳಿ ನಾಗರಾಜ್​ ಆಯ್ಕೆಗೊಂಡಿದ್ದರು. ಅವರಿಗೆ  ಮುಳಬಾಗಿಲು ಜೆಡಿಎಸ್ ಘಟಕ ಹಾಗೂ ಹಾಲು ಉತ್ಪಾದಕರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಾಲೂಕಿನ ಜನರಿಗೆ ಬಾಡೂಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಬಿರಿಯಾನಿ, ಮಟನ್​, ಚಿಕನ್​ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ಊಟಕ್ಕಾಗಿ ಮುಗಿ ಬಿದ್ದಿದ್ದಾರೆ. ಬಿರಿಯಾನಿ ತಿನ್ನಲು ನೂಕುನುಗ್ಗಲು, ನೂಕಾಟ ತಳ್ಳಾಟ, ಟೇಬಲ್, ಚೇರ್ ಕೆಳಗೆ ನುಗ್ಗಿದ್ದು, ಖಾಲಿ ಬಿರಿಯಾನಿ ಪಾತ್ರೆಯೊಳಗೆ ಕೈ ಹಾಕಿದ್ದು, ಹೀಗೇ ನೂರೆಂಟು ಹಾಸ್ಯಾಸ್ಪದ ಘಟನೆಗಳು ನಡೆದಿವೆ. ಬಾಡೂಟ ಎಂದು ಜನ ಮುಗಿಬಿದ್ದಿದ್ದು,  ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆ ಈ ರೀತಿ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಬಾಡೂಟ ಆಯೋಜಿಸಿರುವ ಘಟನೆ ತಿಳಿದಾಕ್ಷಣ ಸ್ಥಳಕ್ಕೆ ತಹಶೀಲ್ದಾರ್​ ಭೇಟಿ ನೀಡಿದ್ದಾರೆ. ಅಕ್ರಮವಾಗಿ ಸರ್ಕಾರಿ ಕಚೇರಿ ಮುಂದೆ ಕಾರ್ಯಕ್ರಮ ಆಯೋಜನೆ ಮಾಡಿದ ಹಿನ್ನಲೆ ಬಾಡೂಟಕ್ಕೆ ಬಳಸಿದ್ದ ಪಾತ್ರೆ ಸಾಮಾನು, ಪೆಂಡಾಲ್, ವಶಕ್ಕೆ ಪಡೆದರು.

ಇದನ್ನು ಓದಿ: ಮದುವೆಗೆ ಒಲ್ಲೆ ಎಂದ ಗಗನ ಸಖಿ ಕಿವಿ ಕತ್ತರಿಸಿದ್ದ ಪಾಗಲ್​ ಪ್ರೇಮಿ ಪೊಲೀಸರ ಮುಂದೆ ಶರಣು

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ರಾಜೇ, ಆಲಂಗೂರು ಶಿವಣ್ಣ, ಕಲ್ಲಪಲ್ಲಿ ಪ್ರಕಾಶ್, ಕಾಡೇನಹಳ್ಳಿ ನಾಗರಾಜ್ ಮತ್ತಿತರರು ಹಾಜರಿದ್ದರು.  ಮುಳಬಾಗಿಲು ಹಾಲು ಒಕ್ಕೂಟದ 13 ಸ್ಥಾನಕ್ಕೆ ಮೇ 13ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿತ ಅಭ್ಯರ್ಥಿ ಕಾಡೇನಹಳ್ಳಿ ನಾಗರಾಜ್​ 82 ಮತ ಪಡೆದು ಗೆಲುವು ಪಡೆದಿದ್ದರು.
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ