ನಮ್ಮಲ್ಲಿ ಜನ ಇಲ್ಲ, ಎಲ್ಲ ಕಡೆ ಶಂಖ ಊದಲಿಕ್ಕೆ ನಾನೇ ಹೋಗಬೇಕು: ಈಶ್ವರಪ್ಪಗೆ HDK ಟಾಂಗ್‌!

ಮಂಡ್ಯದಿಂದ ಎನ್ ಅಪ್ಪಾಜಿಗೌಡ, ತುಮಕೂರು ಆರ್ ಅನಿಲ್ ಕುಮಾರ್, ಮೈಸೂರು ಸಿಎನ್ ಮಂಜೇಗೌಡ, ಕೋಲಾರ ವಕ್ಕಲೇರಿ ರಾಮು, ಬೆಂಗಳೂರು ಗ್ರಾಮಾಂತರ ಎಚ್​.ಎಂ. ರಮೇಶ್​ಗೌಡ, ಕೊಡಗು ಎಚ್​.ಯು ಐಸಾಕ್ ಖಾನ್ ಹಾಗೂ ಹಾಸನದಿಂದ ಡಾ. ಸೂರಜ್ ರೇವಣ್ಣ ಅವರು ಜೆಡಿಎಸ್​ನಿಂದ ಸ್ಪರ್ಧೆ ಮಾಡಲಿದ್ದಾರೆ.

ಎಚ್​.ಡಿ ಕುಮಾರಸ್ವಾಮಿ.

ಎಚ್​.ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು: ನಮ್ಮ ಪಕ್ಷದ ಸ್ಥಳೀಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ, ಸಲಹೆ ಪಡೆದು 7 ಕ್ಷೇತ್ರಗಳಲ್ಲಿ ಮಾತ್ರ ವಿಧಾನ ಪರಿಷತ್​ ಚುನಾವಣೆಗೆ (Assembly Council Election) ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.‌ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಹೇಳಿದರು. ಇಂದು ಬೆಳಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ವಿಧಾನ ಪರಿಷತ್‌ ಚುನಾವಣೆಯಲ್ಲಿ ಆರರಿಂದ ಎಂಟು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಈ ಮೊದಲೇ ನಾನು ಹೇಳಿದ್ದೆ. ಈ ಕಾರಣಕ್ಕಾಗಿಯೇ ಮೈಸೂರು, ಕೊಡಗು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದೇವೆ” ಎಂದರು.

  ಕಳೆದ ಚುನಾವಣೆಯಲ್ಲಿ ನಾವು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು. ಈಗ ಏಳೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಸಮಯ ಕಡಿಮೆ ಇದೆ. ಪ್ರಬಲ ಹೋರಾಟ ನಡೆಸಿ ಜಯ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

  ಸಚಿವ ಈಶ್ವರಪ್ಪ ಅವರು ನಮ್ಮ ಬಗ್ಗೆ ಒಂದು ಮಾತು ಹೇಳಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿ ಶಂಖ ಊದಲಿಕ್ಕೆ ಜನ ಇಲ್ಲ ಎಂದು. ಹೌದು, ಅವರು ಹೇಳಿದ್ದು ನಿಜ. ಎಲ್ಲ ಕಡೆ ಶಂಖ ಊದುವುದಕ್ಕೆ ನಾನೇ ಹೋಗಬೇಕು. ಎಲ್ಲೆಲ್ಲಿ ಶಂಖ ಊದಲು ಸಾಧ್ಯವಿದೆಯೋ ಅಂತಹ ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

  ನಾವು ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ. ಕೇವಲ ಶಂಖ ಊದುವುದರಿಂದ ಏನೂ ಆಗಲ್ಲ. ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ. ನೀವು ಶಂಖ ಊದಿಕೊಳ್ರಪ್ಪ. ಆದರೆ ಈಗ ಶಂಖ ಊದುವ ಕಾಲ ಅಲ್ಲ, ಕೆಲಸ ಮಾಡಿ. ನಾವು ಅಧಿಕಾರದಲ್ಲಿ ಕೆಲವೇ ದಿನ ಅಧಿಕಾರದಲ್ಲಿ ಇದ್ದರೂ ಜನರ ಮನಸ್ಸಲ್ಲಿ ಉಳಿಯುವ ಕೆಲಸ ಮಾಡಿದ್ದೇವೆ ಎಂದು ಹೇಳುವ ಮೂಲಕ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದರು. ನೀವು ನಿಮಗೆ ಅಭಿವೃದ್ಧಿ ಮಾಡಿಕೊಂಡಿದ್ದೀರಿ ಅಷ್ಟೇ. ನಿಮ್ಮ ಹಿಂದೆ ಝಂಡ ಹಿಡಿದು ಬರುವವರ ಅಭಿವೃದ್ಧಿ ಮಾಡಿದ್ದೀರಿ. ಆದರೆ ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿದವರ ಅಭಿವೃದ್ಧಿ ಮಾಡಿದ್ದೀರ ಹೇಳಿ. ಬಕಾಸುರರ ರೀತಿ ನುಂಗೋದೇ ಅಭಿವೃದ್ಧಿಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದರು.

  ನಮ್ಮ ಗುರಿ 2023ರ ಚುನಾವಣೆ: ಕುಮಾರಸ್ವಾಮಿ

  ನಮ್ಮ ಶಕ್ತಿಗನುಸಾರವಾಗಿ ಉಪ ಚುನಾವಣೆಗಳನ್ನು ಎದುರಿಸಿದ್ದೇವೆ. ಈಗ ವಿಧಾನ ಪರಿಷತ್‌ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಗುರಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲಿದೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಹಂತಗಳಲ್ಲೂ ಪಕ್ಷ ಸಂಘಟನೆ ಮಾಡಲು ಏನೆಲ್ಲ ಕ್ರಮ ವಹಿಸಬೇಕೋ ಅದನ್ನೆಲ್ಲ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಈ ಚುನಾವಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು; ಹಿಂದೆ ಗೆದ್ದ ಕೆಲವರು ನಮ್ಮ ಪಕ್ಷದಿಂದ ದೂರ ಆಗಿದ್ದಾರೆ. ಅದು ಮುಗಿದ ಅಧ್ಯಾಯ. ಪಕ್ಷಕ್ಕೆ ಕಾರ್ಯಕರ್ತರನ್ನು ಹೊರತುಪಡಿಸಿ ಯಾರು ಅನಿವಾರ್ಯವಲ್ಲ. ಕಾರ್ಯಕರ್ತರ ದುಡಿಮೆ ಮೇಲೆ ನಾಯಕರು ಸೃಷ್ಟಿಯಾಗುತ್ತಾರೆ. ಈ ಕಾರ್ಯಕರ್ತರೇ ಮುಂದಿನ ಹಂತಕ್ಕೆ ಹೊಸ ನಾಯಕರನ್ನು ಮಾರ್ಮಿಕವಾಗಿ ತಿಳಿಸಿದರು.

  ಇದನ್ನು ಓದಿ: Bengaluru Rain Effect: ಜೆಎನ್​ಸಿ ಸೇರಿ ಬೆಂಗಳೂರಿನ ವಿವಿಧೆಡೆ ಮಳೆ ಹಾನಿ ವೀಕ್ಷಿಸಿದ ಸಿಎಂ; ಮನೆ ಹಾನಿಗೆ 5 ಲಕ್ಷ ಪರಿಹಾರ

  ಏಳು ಕ್ಷೇತ್ರಗಳಿಂದ ಜೆಡಿಎಸ್ ಸ್ಪರ್ಧೆ

  ಮಂಡ್ಯದಿಂದ ಎನ್ ಅಪ್ಪಾಜಿಗೌಡ, ತುಮಕೂರು ಆರ್ ಅನಿಲ್ ಕುಮಾರ್, ಮೈಸೂರು ಸಿಎನ್ ಮಂಜೇಗೌಡ, ಕೋಲಾರ ವಕ್ಕಲೇರಿ ರಾಮು, ಬೆಂಗಳೂರು ಗ್ರಾಮಾಂತರ ಎಚ್​.ಎಂ. ರಮೇಶ್​ಗೌಡ, ಕೊಡಗು ಎಚ್​.ಯು ಐಸಾಕ್ ಖಾನ್ ಹಾಗೂ ಹಾಸನದಿಂದ ಡಾ. ಸೂರಜ್ ರೇವಣ್ಣ ಅವರು ಜೆಡಿಎಸ್​ನಿಂದ ಸ್ಪರ್ಧೆ ಮಾಡಲಿದ್ದಾರೆ.
  Published by:HR Ramesh
  First published: