• Home
  • »
  • News
  • »
  • state
  • »
  • Pancharatna Rathayatre: ಜೆಡಿಎಸ್‌ ಪಂಚರತ್ನ ಯಾತ್ರೆ ಮುಂದೂಡಿಕೆ; ರಾಜ್ಯದಲ್ಲಿ ಮತ್ತೆ ಆಣೆ ಪ್ರಮಾಣ ಸದ್ದು

Pancharatna Rathayatre: ಜೆಡಿಎಸ್‌ ಪಂಚರತ್ನ ಯಾತ್ರೆ ಮುಂದೂಡಿಕೆ; ರಾಜ್ಯದಲ್ಲಿ ಮತ್ತೆ ಆಣೆ ಪ್ರಮಾಣ ಸದ್ದು

ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ

ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದು, ಪಂಚರತ್ನ ಯೋಜನೆ ಜಾರಿಯಾಗಬೇಕೆಂದ್ರೆ ಜೆಡಿಎಸ್ (JDS) ಪಕ್ಷಕ್ಕೆ ಬಹುಮತ ಅಗತ್ಯ ಅಂತಾ ಹೇಳಿದರು.

  • News18 Kannada
  • Last Updated :
  • Karnataka, India
  • Share this:

ಜೆಡಿಎಸ್ ಪಂಚರತ್ನ ಯಾತ್ರೆಗೆ (JDS Pancharatna Yatre) ಮಳೆ ಅಡ್ಡಿ (Rainfall) ಹಿನ್ನೆಲೆ ವಾರದ ಮಟ್ಟಿಗೆ‌ ಯಾತ್ರೆಯನ್ನು ಮುಂದೂಡಲಾಗಿದೆ ಎಂದು ಕೋಲಾರದ ಮುಳಬಾಗಿಲಿನಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (Former CM HD Kumaraswamy) ಹೇಳಿದ್ರು. ಮಳೆ ಕಾರಣ ಸಮಾವೇಶ ನಡೆಸಲು ಸಾಧ್ಯವಾಗುತ್ತಿಲ್ಲ. ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆ (Rain Prediction) ಬರಲಿದ್ದು, ಕಾರ್ಯಕ್ರಮ ಅಸ್ತವ್ಯಸ್ತವಾಗಲಿದೆ ಎಂಬ ಮುಖಂಡರ ಸಲಹೆ ಮೇರೆಗೆ ರಥಯಾತ್ರೆ ಮುಂದೂಡಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಇನ್ನು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದು, ಪಂಚರತ್ನ ಯೋಜನೆ ಜಾರಿಯಾಗಬೇಕೆಂದ್ರೆ ಜೆಡಿಎಸ್ (JDS) ಪಕ್ಷಕ್ಕೆ ಬಹುಮತ ಅಗತ್ಯ ಅಂತಾ ಹೇಳಿದರು.


ರಾಜ್ಯದಲ್ಲಿ ಮತ್ತೆ ಆಣೆ ಪ್ರಮಾಣ ಸದ್ದು ಮಾಡ್ತಿದೆ. ಆಪರೇಷನ್ ಕಮಲ ತಪ್ಪಿಸಲು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ.


ಕೋಲಾರದ ಮುಳಬಾಗಿಲಿನಲ್ಲಿ ಮಾತನಾಡಿದ ಹೆಚ್‌ಡಿಕೆ ಕುರುಡುಮಲೆ ಗಣಪತಿ ಮೇಲೆ ಪ್ರಮಾಣ ಮಾಡಿಸ್ತೇನೆ. ಬಿಜೆಪಿಯ ಆಪರೇಷನ್ ಕಮಲ, ಆಮಿಷಗಳಿಗೆ ಬಲಿಯಾಗೋದಿಲ್ಲ ಎಂದು ಪ್ರಮಾಣ ಮಾಡಿಸುತ್ತೇವೆ ಎಂದರು.


JDS To Postpone Pancharatna Rathayatre mrq
ಪಂಚರತ್ನ ರಥಯಾತ್ರೆ


100 ಅಭ್ಯರ್ಥಿಗಳ ಪಟ್ಟಿ ಫೈನಲ್


ಜೆಡಿಎಸ್ ಪಕ್ಷದ 100 ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ.  ಇಂದು ಆಣೆ ಪ್ರಮಾಣ ಮಾಡಿಸಲು ಸಾಧ್ಯವಾಗಲಿಲ್ಲ.  ಇಂದು ಕಾರ್ಯಕ್ರಮ ರದ್ದಾಗಿದ್ದು ಕಾಕತಾಳೀಯವಾದ್ರು ಒಳ್ಳೆಯ ಬೆಳವಣಿಗೆಯಾಗಿದೆ. ಮಳೆ ನಿಂತ ಮೇಲೆ ಮತ್ತೆ ಪಂಚರತ್ನ ಕಾರ್ಯ ಆರಂಭಿಸ್ತೇವೆ. ಜೆಡಿಎಸ್ ಪಕ್ಷದ ಇನ್ನೂ 28 ಕ್ಷೇತ್ರದ ಲಿಸ್ಟ್ ಫೈನಲ್ ಮಾಡ್ತಿದ್ದೇವೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.


ಮುಳಬಾಗಿಲು ತಾಲೂಕಿನಿಂದಲೇ ಯಾತ್ರೆ ಆರಂಭ


ಇಂದು ಕುರುಡುಮಲೆ ದೇಗುಲದಲ್ಲಿ ದೇವರು ಬಲಗೈಯಿಂದ ಆಶೀರ್ವಾದ ನೀಡಿದ್ದಾರೆ. ನನ್ನ ಗಂಟಲಿನ ವೋಕಲ್ ಕಾರ್ಡ್ ಮೇಲೆ ಪೆಟ್ಟು ಬಿದ್ದಿದೆ, ಮೂರ್ನಾಲ್ಕು ದಿನ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಇದೀಗ ಪಂಚರತ್ನ ಕಾರ್ಯಕ್ರಮ ರದ್ದು  ಹಿನ್ನಲೆ, ದೇವರ ಅನುಗ್ರಹದಿಂದ ಬಿಡುವು ಸಿಕ್ಕಿದೆ.


JDS To Postpone Pancharatna Rathayatre mrq
ಪಂಚರತ್ನ ರಥಯಾತ್ರೆ


ದೇಹದ ಮೇಲೆ ದಂಡನೆ ಹಾಕಿ ತೊಂದರೆ ಕೊಟ್ಟಿದ್ದೆ, ಇನ್ನೂ ಹೆಚ್ಚು ದಿನ ಬದುಕಿರಬೇಕೆದು  ದೇವರು ನನಗೆ ಬಿಡುವು ಕೊಟ್ಟಿದ್ದಾರೆ. ಪಂಚರತ್ನ ರಥಯಾತ್ರೆ ಮತ್ತೆ ಮುಳಬಾಗಿಲು ತಾಲೂಕಿನಿಂದಲೇ ಆರಂಭಿಸುತ್ತೇವೆ ಎಂದರು.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ಹೆಚ್.ಡಿ.ಕುಮಾರಸ್ವಾಮಿ  ಟ್ವೀಟ್


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಈ ಕಾರಣಕ್ಕೆ ಮುಳಬಾಗಿಲು ತಾಲೂಕಿನ ಕುರುಡುಮಲೆಯ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ ನಂತರ ಒಂದು ವಾರ ಕಾಲ ತಾತ್ಕಾಲಿಕವಾಗಿ ಮುಂದೂಡಲಾಗಿದೆ.


JDS To Postpone Pancharatna Rathayatre mrq
ಪಂಚರತ್ನ ರಥಯಾತ್ರೆ


ವಾರದ ನಂತರ ಇದೇ ಮುಳಬಾಗಿಲು ಪಟ್ಟಣದಲ್ಲಿಯೇ ಬೃಹತ್ ಸಮಾವೇಶ ನಡೆಸಿ ಪಂಚರತ್ನ ರಥಯಾತ್ರೆಗೆ ಪುನಾ ಚಾಲನೆ ಕೊಡಲಾಗುವುದು. ಅತ್ಯುತ್ಸಾಹದಿಂದ ಮುಳಬಾಗಿಲಿಗೆ ಬಂದಿದ್ದ ಮುಖಂಡರು, ಕಾರ್ಯಕರ್ತರು, ಮಹಾಜನತೆಗೆ ಧನ್ಯವಾದಗಳು. ಅವರಿಗೆ ಆದ ತೊಂದರೆಗೆ ನನ್ನ ವಿಷಾದವಿದೆ.


ಮಳೆ ಬಿಡುವು ಕೊಟ್ಟ ಕೂಡಲೇ ಮುಳಬಾಗಿಲುನಿಂದಲೇ ರಥಯಾತ್ರೆಯನ್ನು ಮರು ಆರಂಭ ಮಾಡಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಗ್ರಾಮ ವಾಸ್ತವ್ಯ ಹೂಡಲಾಗುವುದು.


ವಿಶೇಷ ಪೂಜೆ, ಹೋಮ ಕಾರ್ಯಕ್ರಮದಲ್ಲಿ ಹೆಚ್​​ಡಿಡಿ ಭಾಗಿ


ಕುರುಡುಮಲೆ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜೆ, ಹೋಮ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರು ನಮ್ಮ ಪಕ್ಷದ ಎಲ್ಲ ಶಾಸಕರು, ಮುಂದಿನ ಚುನಾವಣೆಯ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.


ಇದನ್ನೂ ಓದಿ: H D Kumaraswamy: ಚುನಾವಣೆಗೆ ಜೆಡಿಎಸ್ ರೆಡಿ; ಪಂಚರತ್ನ ರಥಯಾತ್ರೆಯಲ್ಲಿ 120 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್​ಗೆ ಸಿದ್ಧತೆ


JDS ಪಂಚರತ್ನ ಯೋಜನೆ


1.ಉಚಿತ ಶಿಕ್ಷಣ


2.ಆರೋಗ್ಯ


3.ರೈತರ ಉನ್ನತಿ


4.ಯುವಜನತೆಗೆ ಸ್ವ ಉದ್ಯೋಗ


5.ಪ್ರತಿ ಕುಟುಂಬಕ್ಕೂ ಸ್ವಂತ ಮನೆ

Published by:Mahmadrafik K
First published: