ಮಂಜುನಾಥ್ ಅಥವಾ ರಘುಗೆ ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್? ಇಂದು ಸಭೆಯಲ್ಲಿ ಅಂತಿಮ ನಿರ್ಧಾರ

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಕೆಆರ್ ಪೇಟೆಯ ಅನೇಕ ಸ್ಥಳೀಯ ಜೆಡಿಎಸ್ ಮುಖಂಡರು ಹೆಚ್.ಟಿ. ಮಂಜುನಾಥ್ ಅವರಿಗೆ ಬೆಂಬಲ ನೀಡಿದ್ದಾರೆ. ಇವರಿಗೆ ಆರ್ಥಿಕ ಬಲ ಇರುವುದು ಇನ್ನೊಂದು ಪೂರಕ ವಿಚಾರವೆನಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಮಂಜುನಾಥ್ ಪರವಾಗಿ ನಿಂತಿದ್ದಾರೆ.

news18
Updated:November 13, 2019, 10:56 AM IST
ಮಂಜುನಾಥ್ ಅಥವಾ ರಘುಗೆ ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್? ಇಂದು ಸಭೆಯಲ್ಲಿ ಅಂತಿಮ ನಿರ್ಧಾರ
ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ
  • News18
  • Last Updated: November 13, 2019, 10:56 AM IST
  • Share this:
ಮಂಡ್ಯ(ನ. 13): ಕೆಆರ್ ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಟಿಕೆಟ್​ಗಾಗಿ ಐವರು ಆಕಾಂಕ್ಷಿಗಳ ಪೈಕಿ ರೇಸ್​ನಲ್ಲಿ ಮೂವರು ಉಳಿದುಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್.ಟಿ. ಮಂಜುನಾಥ್, ಬಿ.ಎಲ್. ದೇವರಾಜು ಹಾಗೂ ಗುತ್ತಿಗೆದಾರ ವೃತ್ತಿಯ ಎ.ಟಿ. ರಘು ಅವರು ಜೆಡಿಎಸ್ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಇಂದು ಈ ಮೂವರ ಜೊತೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದರೆ. ಮೂವರು ಆಕಾಂಕ್ಷಿಗಳ ಪೈಕಿ ಹೆಚ್.ಟಿ. ಮಂಜುನಾಥ್ ಅಥವಾ ಎ.ಟಿ. ರಘು ಅವರಿಗೆ ಟಿಕೆಟ್ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಜೆಡಿಎಸ್ ಮೂಲಗಳ ಪ್ರಕಾರ ಹೆಚ್.ಟಿ. ಮಂಜುನಾಥ್ ಅವರಿಗೆ ಟಿಕೆಟ್ ಸಿಗುವ ಹೆಚ್ಚಿನ ಅವಕಾಶ ಇದೆ.

ಟಿಕೆಟ್ ಹಂಚಿಕೆಯಲ್ಲಿ ಅಭ್ಯರ್ಥಿಗಳ ಆರ್ಥಿಕ ಹಿನ್ನೆಲೆಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಿರುವ ಎಚ್.ಟಿ. ಮಂಜುನಾಥ್ ಮತ್ತು ಎ.ಟಿ. ರಘು ಅವರ ಹೆಸರು ಇದೇ ಕಾರಣಕ್ಕೆ ಮುನ್ನೆಲೆಗೆ ಬಂದಿದೆ. ಮೂರನೇ ಆಕಾಂಕ್ಷಿ ಬಿ.ಎಲ್ ದೇವರಾಜು ಅವರ ಪರವಾಗಿ ಹೆಚ್.ಡಿ. ದೇವೇಗೌಡರು ನಿಂತಿದ್ದಾರಾದರೂ ಆರ್ಥಿಕ ಬಲ ಇಲ್ಲದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಗುವ ಸಂಭವ ಇಲ್ಲವೆನ್ನಲಾಗುತ್ತಿದೆ.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಕೆಆರ್ ಪೇಟೆಯ ಅನೇಕ ಸ್ಥಳೀಯ ಜೆಡಿಎಸ್ ಮುಖಂಡರು ಹೆಚ್.ಟಿ. ಮಂಜುನಾಥ್ ಅವರಿಗೆ ಬೆಂಬಲ ನೀಡಿದ್ದಾರೆ. ಇವರಿಗೆ ಆರ್ಥಿಕ ಬಲ ಇರುವುದು ಇನ್ನೊಂದು ಪೂರಕ ವಿಚಾರವೆನಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಮಂಜುನಾಥ್ ಪರವಾಗಿ ನಿಂತಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಸಭೆಯಲ್ಲಿ ಯುಟರ್ನ್ ತೆಗೆದುಕೊಂಡ ಎಚ್​ಡಿ ಕುಮಾರಸ್ವಾಮಿ; ಎಂಎಲ್​ಸಿಗಳ ಬಳಿ ಕ್ಷಮೆ

ಇನ್ನೊಂದೆಡೆ, ಗುತ್ತಿಗೆದಾರರಾಗಿರುವ ಎ.ಟಿ. ರಘು ಬೆನ್ನಹಿಂದೆ ಹೆಚ್.ಡಿ. ರೇವಣ್ಣ ನಿಂತಿದ್ದಾರೆ. ಹಣಬಲ ಇರುವ ರಘುಗೆ ಟಿಕೆಟ್ ನೀಡಿದರೆ ಸುಲಭವಾಗಿ ಗೆಲ್ಲಬಹುದು ಎಂಬುದು ರೇವಣ್ಣ ವಾದ.

ಅತ್ತ, ಬಿ.ಎಲ್. ದೇವರಾಜು ಅವರಿಗೆ ಕಳೆದ ಬಾರಿಯ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪಿತ್ತು. ಬಿ ಫಾರಮ್ ಸಿಕ್ಕಿಯೂ ದೇವರಾಜು ಅವರು ಟಿಕೆಟ್ ವಂಚಿತರಾಗಿದ್ದರು. ಕೊನೆಯ ಕ್ಷಣದಲ್ಲಿ ಟಿಕೆಟ್ ನಾರಾಯಣಗೌಡ ಪಾಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ದೇವರಾಜು ಅವರಿಗೆ ಟಿಕೆಟ್ ನೀಡಿ ಆ ಕಳಂಕ ನೀಗಿಸಿಕೊಳ್ಳೋಣ ಎಂಬುದು ಮಾಜಿ ಪ್ರಧಾನಿಗಳ ಅಭಿಪ್ರಾಯ.

ಒಬ್ಬೊಬ್ಬ ಸ್ಪರ್ಧಿ ಹಿಂದೆ ಘಟಾನುಘಟಿಗಳ ಬೆಂಬಲ ಇದೆಯಾದರೂ ಅಂತಿಮವಾಗಿ ಆರ್ಥಿಕ ಬಲ ಇರುವ ಅಭ್ಯರ್ಥಿಗೇ ಟಿಕೆಟ್ ಒಲಿಯುವ ಸಾಧ್ಯತೆ ಇದೆ.(ವರದಿ: ರಾಘವೇಂದ್ರ ಗಂಜಾಮ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 13, 2019, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading