ಮುನಿಸು ಮರೆತು ಪಕ್ಷದ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ದೇವೇಗೌಡ ಮನವಿ; ಜ. 23ಕ್ಕೆ ಜೆಡಿಎಸ್​ ಸಮಾವೇಶ

ಲೋಕಸಭೆ, ವಿಧಾನಸಭೆಯಲ್ಲಿ ಆದ ನೋವು ಮರೆತು ಈಗ ಪಕ್ಷ ಸಬಲಗೊಳಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾರೂ ಒಗ್ಗೂಡಿ ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ ಎಲ್ಲರೂ ಇದಕ್ಕೆ ಒಂದಾಗಬೇಕು

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

 • Share this:
  ಬೆಂಗಳೂರು(ಜ. 21): ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಬಳಿಕ ಪಕ್ಷದ ನಾಯಕರ ಮುನಿಸು ಜೆಡಿಎಸ್​ ಪಕ್ಷವನ್ನು ಮತ್ತಷ್ಟು ಕುಗ್ಗುವಂತೆ ಮಾಡಿರುವುದು ಸುಳ್ಳಲ್ಲ. ಪಕ್ಷದಲ್ಲಿನ ನಾಯಕರ ಕಡೆಗಣನೆಯಿಂದ ಹಿರಿಯ ನಾಯಕರು ಸಭೆಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಪಕ್ಷಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. 

  ಈ ನಡುವೆ ಕೇವಲ ಕುಟುಂಬ ಸದಸ್ಯರ ಪಕ್ಷವಾಗಿ ಜೆಡಿಎಸ್​ ಹೊರ ಹೊಮ್ಮುತ್ತಿದೆ. ಇಲ್ಲಿ ಹೊರಗಿನವರಿಗೆ ಅಧಿಕಾರವಿಲ್ಲ. ಹೀಗೆ ಮುಂದುವರೆದರೆ ಪಕ್ಷ ಇನ್ನಷ್ಟು ಕುಗ್ಗಲ್ಲಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತಿರುವ ಜೆಡಿಎಸ್​ ವರಿಷ್ಠ ದೇವೇಗೌಡ ಈಗ ಶಾಸಕರು ಹಾಗೂ ಮುಖಂಡರಿಗೆ ಪತ್ರ ಬರೆದಿದ್ದು, ಪಕ್ಷ ಸಬಲೀಕರಣಕ್ಕೆ ಕೈ ಜೋಡಿಸುವಂತೆ ಆಹ್ವಾನಿಸಿದ್ದಾರೆ.

  ಮೈತ್ರಿ ಸರ್ಕಾರದ ವೇಳೆ ಪಕ್ಷದ ಶಾಸಕರು ಹಾಗೂ ಮುಖಂಡರು, ಕಾರ್ಯಕರ್ತರಿಗೆ ನೋವಾಗುವಂತೆ ನಡೆದುಕೊಂಡಿದ್ದರು . ಇದೇ ನಡೆ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೂ ಕೂಡ ಕಾರಣವಾಗಿತ್ತು. ಆಗಿನ ಆ ಪರಿಸ್ಥಿತಿ ಕುರಿತು ನಮಗೂ ವಿಷಾದವಿದೆ. ಆ ಸಂದರ್ಭದಲ್ಲಿ ಆದ ಕಹಿ ಘಟನೆ ಮರೆತು ಬಿಡಿ ಎಂದು ಮನವಿ ಮಾಡಿದ್ದಾರೆ.  ಲೋಕಸಭೆ, ವಿಧಾನಸಭೆ ಚುನಾವಣೆ ವೇಳೆ ಆದ ನೋವು ಮರೆತು ಈಗ ಪಕ್ಷ ಸಬಲಗೊಳಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ. ಎಲ್ಲರೂ ಇದಕ್ಕೆ ಒಂದಾಗಬೇಕು ಎಂದಿದ್ದಾರೆ.

  ಸದ್ಯದ ಮಟ್ಟಿಗೆ ಪಕ್ಷ ಸಂದಿಗ್ದ ಪರಿಸ್ಥಿತಿಯಲ್ಲಿ ಅದನ್ನು ಬಲಪಡಿಸುವುದು ಕಾರ್ಯಕರ್ತರಾದ ನಮ್ಮ ಜವಾಬ್ದಾರಿ. ಪಕ್ಷ ಕೂಡ ಕಾರ್ಯಕರ್ತರನ್ನೇ ತಮ್ಮ ಬಲ ಎಂದು ನಂಬಿರುವುದು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದೆ 23ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಭೆ ಆಯೋಜಿಸಲಾಗಿದೆ.

  ಇದನ್ನು ಓದಿ: ಸಿಎಎ ವಿರೋಧಿಸಿ ಕಲಬುರಗಿಯಲ್ಲಿ ಬೃಹತ್​ ಸಮಾವೇಶ; ರಾಷ್ಟ್ರೀಯ ನಾಯಕರು ಭಾಗಿ

  ಪಕ್ಷದ ಮೇಲಿನ ಮುನಿಸು ಆಂತರಿಕ ಭಿನ್ನಾಭಿಪ್ರಾಯ ಮರೆತು ಸಮಾವೇಶಕ್ಕೆ ಆಗಮಿಸಬೇಕು. ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಹಾಜರಾಗಬೇಕೆಂದು ಜೆಡಿಎಸ್​ ವರಿಷ್ಠ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
  First published: