ಕನಕಪುರ ಬಂಡೆ ಪರ ನಿಂತ ಗೌಡ; ಕಪಾಲಬೆಟ್ಟದಲ್ಲಿ ಏಸು ಶಿಲೆ ನಿರ್ಮಾಣಕ್ಕೆ ವಿರೋಧ ಇಲ್ಲ ಎಂದ ಜೆಡಿಎಸ್ ಮುಖ್ಯಸ್ಥ

ಬಿಜೆಪಿಯವರು 19 ಚರ್ಚ್​ಗಳನ್ನು ಒಡೆದರು. ಬೈಬಲ್ ಅನ್ನು ಸುಟ್ಟುಹಾಕಿದರು. ಇಬ್ಬರು ಮಕ್ಕಳನ್ನೂ ಸುಟ್ಟರು. 10 ಮಂದಿ ದಾದಿಯರನ್ನು ರೇಪ್ ಮಾಡಿದರು. ಆಗ ಯಾರೂ ಕೂಡ ಮಾತನಾಡಲಿಲ್ಲ. ನಾನು ಮಾತ್ರವೇ ಎಲ್ಲಾ ಕಡೆ ಓಡಾಟ ಮಾಡಿದ್ದು ಎಂದು ದೇವೇಗೌಡರು ಹೇಳಿಕೊಂಡಿದ್ಧಾರೆ.

news18
Updated:January 13, 2020, 4:23 PM IST
ಕನಕಪುರ ಬಂಡೆ ಪರ ನಿಂತ ಗೌಡ; ಕಪಾಲಬೆಟ್ಟದಲ್ಲಿ ಏಸು ಶಿಲೆ ನಿರ್ಮಾಣಕ್ಕೆ ವಿರೋಧ ಇಲ್ಲ ಎಂದ ಜೆಡಿಎಸ್ ಮುಖ್ಯಸ್ಥ
ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ
  • News18
  • Last Updated: January 13, 2020, 4:23 PM IST
  • Share this:
ನವದೆಹಲಿ(ಜ. 13): ಕನಕಪುರದ ಕಪಾಲಿ ಬೆಟ್ಟದಲ್ಲಿ 110 ಅಡಿ ಎತ್ತರದ ಏಸುವಿನ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ ಹೊರಟಿರುವ ಡಿಕೆಶಿ ನಿರ್ಧಾರಕ್ಕೆ ದೇವೇಗೌಡರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಟ್ಟದ ಮೇಲೆ ಡಿಕೆ ಶಿವಕುಮಾರ್ ಏಸು ಶಿಲೆ ನಿರ್ಮಿಸಲು ತೆಗೆದುಕೊಂಡಿರುವ ನಿರ್ಣಯಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿಯವರು ಸ್ಪಷ್ಟಪಡಿಸಿದ್ಧಾರೆ.

ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಏಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸುತ್ತಿರುವ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಲು ಬೆಂಗಳೂರು ಮತ್ತು ಮಂಗಳೂರಿನಿಂದ ಬಂದು ಪ್ರತಿಭಟನೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಮ್ಮ ಬಲಿದಾನಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯ ನಾಶ; ಡಿಕೆಶಿಗೆ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ

ಬಿಜೆಪಿಯ ಬಗ್ಗೆ ಮಾಧ್ಯಮಗಳಿಗೆ ಭ್ರಮೆ ಇದೆ. ಬಿಜೆಪಿಯವರು 19 ಚರ್ಚ್​ಗಳನ್ನು ಒಡೆದರು. ಬೈಬಲ್ ಅನ್ನು ಸುಟ್ಟುಹಾಕಿದರು. ಇಬ್ಬರು ಮಕ್ಕಳನ್ನೂ ಸುಟ್ಟರು. 10 ಮಂದಿ ದಾದಿಯರನ್ನು ರೇಪ್ ಮಾಡಿದರು. ಆಗ ಯಾರೂ ಕೂಡ ಮಾತನಾಡಲಿಲ್ಲ. ಈ ದೇವೇಗೌಡ ಮಾತ್ರವೇ ಎಲ್ಲಾ ಕಡೆ ಓಡಾಟ ಮಾಡಿದ್ದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಅಗಿರುವ ಅವರು ಹೇಳಿಕೊಂಡರು.

ಸಿಎಎ ವಿಚಾರವನ್ನೂ ಪ್ರಸ್ತಾಪಿಸಿದ ಅವರು ಈ ಕಾಯ್ದೆಯ ಔಚಿತ್ಯವನ್ನು ಪ್ರಶ್ನಿಸಿದರು.

ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಅವರು ಕಾನೂನು ಬರೆದು ಎಲ್ಲಾ ಧರ್ಮಗಳಿಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ 5 ಧರ್ಮೀಯರನ್ನು ಸೇರಿಸಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟರು. ಬಿಜೆಪಿಯವರು ಈ ಕಾಯ್ದೆಯನ್ನು ರಾಜಕೀಯ ಕಾರಣಕ್ಕೇ ಮಾಡಿರುವುದು. ಜಾತ್ಯತೀತತೆಯ ವಿಚಾರದಲ್ಲಿ ಬಿಜೆಪಿ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ದೇವೇಗೌಡರು ಟೀಕಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ