ಬಿಲ್ಡರ್ಸ್ ಹಾಗೂ ದಂಧೆಕೋರರಿಂದ ಪರ್ಸಂಟೇಜ್ ಹೊಡೆದ ಮೇಲೆ ಬಿಎಸ್​ವೈ ಪುಕ್ಸಟ್ಟೆ ಸಿಎಂ ಆಗಲು ಸಾಧ್ಯವೇ?; ಜೆಡಿಎಸ್ ಟಾಂಗ್​

ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ, ನಮ್ಮಪ್ಪ ಪುಕ್ಸಟ್ಟೆ ಸಿಎಂ ಆಗಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ಭಾರೀ ಟೀಕೆಗಳಿಗೂ ಗುರಿಯಾಗಿತ್ತು. ಆದರೆ, ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಇದೀಗ ಜೆಡಿಎಸ್​ ರಾಜ್ಯ ಘಟಕ ಬಿಎಸ್​ವೈ ಹಾಗೂ ಅವರ ಮಗ ವಿಜಯೇಂದ್ರ ಅವರನ್ನು ಅಪಹಾಸ್ಯಕ್ಕೆ ಈಡುಮಾಡುತ್ತಿದೆ.

MAshok Kumar | news18-kannada
Updated:October 2, 2019, 10:24 AM IST
ಬಿಲ್ಡರ್ಸ್ ಹಾಗೂ ದಂಧೆಕೋರರಿಂದ ಪರ್ಸಂಟೇಜ್ ಹೊಡೆದ ಮೇಲೆ ಬಿಎಸ್​ವೈ ಪುಕ್ಸಟ್ಟೆ ಸಿಎಂ ಆಗಲು ಸಾಧ್ಯವೇ?; ಜೆಡಿಎಸ್ ಟಾಂಗ್​
ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು (ಅಕ್ಟೋಬರ್.02); ಬಿಲ್ಟರ್ಸ್ ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರಿಂದ ಪರ್ಸಂಟೇಜ್ ಲೆಕ್ಕದಲ್ಲಿ ಹಣ ಹೊಡೆದ ಮೇಲೆ ಸಿಎಂ ಬಿ.ಎಸ್. ಯಡಿಯೂರಪ್ಪ 'ಪುಕ್ಟಟ್ಟೆ' ಸಿಎಂ ಆಗಲು ಸಾಧ್ಯವೇ? ಎಂದು ರಾಜ್ಯ ಜೆಡಿಎಸ್ ಘಟಕ ತನ್ನ ಟ್ವಿಟರ್​ನಲ್ಲಿ ಟಾಂಗ್ ನೀಡಿದೆ.

ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ, “ನಮ್ಮಪ್ಪ ಪುಕ್ಸಟ್ಟೆ ಸಿಎಂ ಆಗಿಲ್ಲ” ಎಂದು ಹೇಳಿದ್ದರು. ಅವರ ಈ ಹೇಳಿಕೆ ಭಾರೀ ಟೀಕೆಗಳಿಗೂ ಗುರಿಯಾಗಿತ್ತು. ಆದರೆ, ಈ ಹೇಳಿಕೆಯ ಕುರಿತು ಇದೀಗ ತನ್ನ ಟ್ವಿಟರ್ ಖಾತೆಯಲ್ಲಿ ಬಿಎಸ್​ವೈ ಹಾಗೂ ಅವರ ಮಗ ವಿಜಯೇಂದ್ರ ಅವರನ್ನು ಅಪಹಾಸ್ಯಕ್ಕೆ ಈಡುಮಾಡಿರುವ ರಾಜ್ಯ ಜೆಡಿಎಸ್ ಘಟಕ,

“ಯಡಿಯೂರಪ್ಪ ಅವರು ‘ಪುಕ್ಸಟ್ಟೆ’ ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ ಬಿಜೆಪಿ ವರಿಷ್ಠ ವಿಜಯೇಂದ್ರ ಹೇಳಿದ್ದಾರೆ. ಹೌದು ವರಿಷ್ಠರೇ ವರ್ಗಾವಣೆಗೆ ದುಡ್ಡು, ಬಿಲ್ಡರ್​ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್​ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ 'ಪುಕ್ಸಟ್ಟೆ' ಆಗಲು ಸಾಧ್ಯವೇ?” ಎಂದು ಪ್ರಶ್ನೆ ಮಾಡುವ ಮೂಲಕ ಕಿಡಿಕಾರಿದೆ.


ಆರಂಭದಿಂದಲೂ ಬಿಜೆಪಿ ಜೆಡಿಎಸ್​ ಮತ್ತು ಕಾಂಗ್ರೆಸ್​ ರಾಜ್ಯ ಘಟಕಗಳು ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟಾಚಾರದ ಕುರಿತು ಒಬ್ಬರ ಮೇಲೋಬ್ಬರು ಕೆಸರೆರಚಾಟ ನಡೆಸುತ್ತಲೇ ಇದ್ದಾರೆ. ಆದರೆ, ಇದೀಗ ಸಿಎಂ ಯಡಿಯೂರಪ್ಪ ಕುರಿತು ಜೆಡಿಎಸ್ ಮಾಡಿರುವ ಟ್ವೀಟ್​ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಬಂಡವಾಳವನ್ನು ಬಿಚ್ಚಿ ಇಡ್ತೀನಿ; ಕಮಲ ಪಾಳಯಕ್ಕೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ!

First published:October 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ