ಬಿಜೆಪಿ ಸರ್ಕಾರ ಬೀಳಿಸಲು ಬಿಡಲ್ಲ: ಎಚ್​ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ

ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತೊಂದರೆ ಆಗಲಿದೆ. ಹಾಗಾಗಿ ಸರ್ಕಾರ ಬೀಳಿಸಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ನೆರೆಯಿಂದ ಜನರು ತತ್ತರಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರ ಬಿದ್ದರೆ, ಸಂತ್ರಸ್ತರು ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಅವರು ಮಾತನಾಡಿದ್ದಾರೆ ಅಷ್ಟೇ

news18-kannada
Updated:November 1, 2019, 3:56 PM IST
ಬಿಜೆಪಿ ಸರ್ಕಾರ ಬೀಳಿಸಲು ಬಿಡಲ್ಲ: ಎಚ್​ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ
ಹೆಚ್​ಡಿ ಕುಮಾರಸ್ವಾಮಿ -ಹೆಚ್​ ಕೆ ಕುಮಾರಸ್ವಾಮಿ
  • Share this:
ಮಡಿಕೇರಿ (ನ.1): ಆಡಳಿತದಲ್ಲಿರುವ ಬಿಜೆಪಿ ಸರ್ಕಾರವನ್ನು ಬೀಳಿಸಲು ಬಿಡುವುದಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಬಿಜೆಪಿಗೆ ಅವರು ಬೆಂಬಲವಿದೆ ಇದೇ ಹಿನ್ನೆಲೆ ಅವರು ಬ್ಯಾಟಿಂಗ್​ ನಡೆಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿತ್ತು. ಈ ಟೀಕೆ ಬೆನ್ನಲ್ಲೆ ಅವರ ಹೇಳಿಕೆಗೆ ಸಮರ್ಥಿಸಿಕೊಂಡಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ, ಸಂತ್ರಸ್ತರ ಹಿತದೃಷ್ಟಿಯಿಂದ ಮಾಜಿ ಸಿಎಂ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ. 

ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಅದರಿಂದಲೇ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎಂದು ಬಿಜೆಪಿ ಪರ ಹೇಳಿಕೆ ನೀಡುತ್ತಿದ್ದಾರೆ. ಮತ್ತೆ ಕುಮಾರಸ್ವಾಮಿ ತಮ್ಮ ಹಳೆಯ ದೋಸ್ತಿ ಸರ್ಕಾರ ಜೊತೆಗೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಹೆಚ್​ ಕೆ ಕುಮಾರಸ್ವಾಮಿ, ನಾವು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಇಲ್ಲಿನ ಕೊಡ್ಲಿಪೇಟೆಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತೊಂದರೆ ಆಗಲಿದೆ. ಹಾಗಾಗಿ ಸರ್ಕಾರ ಬೀಳಿಸಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ನೆರೆಯಿಂದ ಜನರು ತತ್ತರಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರ ಬಿದ್ದರೆ, ಸಂತ್ರಸ್ತರು ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಅವರು ಮಾತನಾಡಿದ್ದಾರೆ ಅಷ್ಟೇ ಎಂದರು.

ಜೆಡಿಎಸ್​ನ ಅಸಮಾಧಾನಿತ ವಿಧಾನಪರಿಷತ್​ ಸದಸ್ಯರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಎಂಎಲ್​​ಸಿಗಳು ಪಕ್ಷ ಬಿಡಲ್ಲ. ಅಸಮಾಧಾನದಿಂದ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮಾಡಿದ್ದಾರೆ ಅಷ್ಟೇ. ಉಪಚುನಾವಣೆ ಬಳಿಕ ರಾಜ್ಯ ರಾಜಕೀಯ ವ್ಯವಸ್ಥೆ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನು ಓದಿ: ಪರಿಹಾರಕ್ಕಾಗಿ ಡಿಸಿಎಂ ಲಕ್ಷಣ ಸವದಿ ಕಾಲಿಗೆ ಬಿದ್ದು ಗೋಳಾಡಿದ ರೈತ

ಪಠ್ಯದಿಂದ ಟಿಪ್ಪು ಇತಿಹಾಸ ತೆಗೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯದಿಂದ ವಿಷಯ ತೆಗೆದ ಕೂಡಲೇ ಇತಿಹಾಸ ಬದಲಾಗಲ್ಲ. ಬಿಎಸ್​ವೈ, ಶೆಟ್ಟರ್, ಹಲವು ಟಿಪ್ಪು ಜಯಂತಿ ಆಚರಿಸಿದ್ದಾರೆ. ಸರ್ಕಾರ ಬದಲಾದಕೂಡಲೇ ನಿಲುವು ಬದಲಾಗಿದ್ದೇಕೆ. ಅವರಿಗೆ ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.

First published: November 1, 2019, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading