ಎಂಎಲ್​ಸಿ​ ಪುಟ್ಟಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ ಆದೇಶ

ಇತ್ತೀಚೆಗೆ ಪಕ್ಷದಿಂದ ದೂರ ಉಳಿದಿದ್ದ ಪುಟ್ಟಣ್ಣ, ಬಿಜೆಪಿ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಜೆಡಿಎಸ್​ ವರಿಷ್ಠ ದೇವೇಗೌಡ ಅವರ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದರು. ಕಳೆದವಾರವಷ್ಟೇ ತಾವು ಪಕ್ಷವನ್ನು ತೊರೆಯುವುದಾಗಿ ಪುಟ್ಟಣ್ಣ ತಿಳಿಸಿದ್ದರು.

Seema.R | news18-kannada
Updated:November 7, 2019, 12:30 PM IST
ಎಂಎಲ್​ಸಿ​ ಪುಟ್ಟಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ ಆದೇಶ
ಎಂಎಲ್​ಸಿ ಪುಟ್ಟಣ್ಣ
  • Share this:
ಬೆಂಗಳೂರು (ನ.06): ಜೆಡಿಎಸ್​ನ ರೆಬೆಲ್​ ಎಂಎಲ್​ಸಿ ಎಂದು ಗುರುತಿಸಿಕೊಂಡಿದ್ದ ಪುಟ್ಟಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಪಕ್ಷದಿಂದ ದೂರ ಉಳಿದಿದ್ದ ಪುಟ್ಟಣ್ಣ, ಬಿಜೆಪಿ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಜೆಡಿಎಸ್​ ವರಿಷ್ಠ ದೇವೇಗೌಡ ಅವರ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದರು. ಕಳೆದವಾರವಷ್ಟೇ ತಾವು ಪಕ್ಷವನ್ನು ತೊರೆಯುವುದಾಗಿ ಪುಟ್ಟಣ್ಣ ತಿಳಿಸಿದ್ದರು.

ಜೆಡಿಎಸ್​ ರೆಬೆಲ್​ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಪುಟ್ಟಣ್ಣ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್​​ ಪರ ಕೆಲಸ ಮಾಡಿ, ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನು ಓದಿ: ಯಡಿಯೂರಪ್ಪ ಸದ್ಯದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ, ಕೇರಳ ರಾಜ್ಯಪಾಲರಾಗಿ ನೇಮಕ: ಹೀಗಂದಿದ್ಯಾರು?

ಪುಟ್ಟಣ್ಣ ಜೆಡಿಎಸ್​ನಿಂದ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದು ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಗೊಂಡಿದ್ದರು.  ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದ ಪುಟ್ಟಣ್ಣ ಅವರು ತಮ್ಮ ಸ್ಥಾನಕ್ಕೆ  ತಾಕತ್ತಿದ್ದರೆ ರಾಜೀನಾಮೆ ನೀಡಲಿ ಎಂದು ಎಚ್​ಡಿ ರೇವಣ್ಣ ಸವಾಲು ಹಾಕಿದ್ದರು.

First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ