• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ‘ಪಿಎಸ್​​ಐ ಆತ್ಮಹತ್ಯೆ ಕೇಸ್​​​ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು‘ - ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​.ಕೆ ಕುಮಾರಸ್ವಾಮಿ

‘ಪಿಎಸ್​​ಐ ಆತ್ಮಹತ್ಯೆ ಕೇಸ್​​​ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು‘ - ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​.ಕೆ ಕುಮಾರಸ್ವಾಮಿ

ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​.ಕೆ ಕುಮಾರಸ್ಚಾಮಿ

ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​.ಕೆ ಕುಮಾರಸ್ಚಾಮಿ

ಬಿಜೆಪಿ ಪಕ್ಷದ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಹಿಂಬಾಲಕರನ್ನು ಬಿಟ್ಟು ಆಡಳಿತವನ್ನು ಮಾಡಲು ಹೊರಟರೇ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

  • Share this:

ಹಾಸನ(ಆ.01): ಚನ್ನರಾಯಪಟ್ಟಣದ ಸಬ್ ಇನ್ಸ್​​ಪೆಕ್ಟರ್​​​ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಬೇಕು. ಈ ಮೂಲಕ ಪ್ರಕರಣಸ ಸತ್ಯಾಂಶ ಹೊರಬರಬೇಕು. ಈ ಕೂಡಲೇ ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜೆಡಿಎಸ್​​​​ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.


ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಪಿಎಸ್​​​ಐ ಆತ್ಮಹತ್ಯೆಯೂ ಇಡೀ ಜಿಲ್ಲೆಯ ಪೊಲೀಸರು ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ರಾಜಕೀಯ ಮತ್ತು ಮೇಲಾಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಪಿಎಸ್​​ಐ ಆತ್ಮಹತ್ಯೆ ಮಾಡಿಕೊಂಡಿರುವುದು ಸತ್ಯ ಎಂದರು.


ಇನ್ನು, ಜಿಲ್ಲೆಯಲ್ಲಿ ಕೆಳಮಟ್ಟ ಮಾತ್ರವಲ್ಲದೇ ಮೇಲ್ಮಟ್ಟದ ಅಧಿಕಾರಿಗಳಿಗೂ ರಾಜಕೀಯ ಒತ್ತಡ ಇದೆ. ಸರ್ಕಾರ ಎಸ್​ಐ ಆತ್ಮಹತ್ಯೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಬಾರದು. ಈ ಕೇಸ್​​ ಉನ್ನತ ಮಟ್ಟದ ತನಿಖಾ ಸಂಸ್ಥೆಯೇ ವಿಚಾರಣೆ ನಡೆಸಿ ಸತ್ಯಾಂಶ ಬಯಲು ಮಾಡಬೇಕು. ಈ ಕೂಡಲೇ ಗೃಹ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.


ಇನ್ನು, ಜಿಲ್ಲಾ ಉಸ್ತುವಾರಿ ನೂತನ ಸಚಿವರಾಗಿ ಕೆ. ಗೋಪಾಲಯ್ಯ ನೇಮಕವಾದ ಬೆನ್ನಲ್ಲೇ ಈ ಘಟನೆ ನಡೆದಿದೆ. ಜೆ.ಸಿ. ಮಾಧುಸ್ವಾಮಿಯವರು ಇಲ್ಲಿ ಜಿಲ್ಲಾ ಮಂತ್ರಿಯಾಗಿ 10 ತಿಂಗಳು ಇದ್ರು. ಜನಪ್ರತಿನಿಧಿಗಳಿಗೆ, ಎಲ್ಲಾರಿಗೂ ಸ್ಪಂದಿಸುತ್ತಿದ್ದರು. ಇತ್ತಿಚಿಗೆ ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ ಏನಾಗಿದೆ? ಪಕ್ಷದ ಹಿಂಬಾಲಕರು ಕ್ಷೇತ್ರಕ್ಕೆ ಬಂದು ಕೆಳ ಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳವರೆಗೂ ಎಲ್ಲಾ ರೀತಿಯ ಒತ್ತಡವನ್ನು ಹಾಕಿ ನಮ್ಮ ಕಾರ್ಯಕರ್ತರಿಗೆ ಗುತ್ತಿಗೆ ಕೊಡಬೇಕು ಎಂದರು.


ನಾವು ಹೇಳಿದ ಕೆಲಸವನ್ನೇ ಮಾಡಬೇಕು ಹಾಗೂ ಏನು ಕ್ರಿಯೆ ಯೋಜನೆ ಮಾಡಲಾಗಿದೆ. ನಮಗೆ ಹೇಳದೇ ಕೆಲಸ ನಿರ್ವಹಿಸುವಾಗಿಲ್ಲ ಎಂದೆಲ್ಲಾ ಕಿರುಕುಳ ನೀಡಲಾಗುತ್ತಿರುವುದಾಗಿ ದೂರಿದರು.


ಈ ಎಲ್ಲಾ ಬಗ್ಗೆ ಅಧಿಕಾರಿಗಳು ನಮ್ಮ ಬಳಿ ಬಂದು ತಮ್ಮ ಅಸಹಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಈಗೆ ಮುಂದುವರೆದರೇ ಜಿಲ್ಲೆಯಲ್ಲಿ ಆಡಳಿತ ನಡೆಯುವುದು ಹೇಗೆ? ಕಾನೂನು ವ್ಯವಸ್ಥೆ ಏನಾಗುವುದು? ಹಿಂದೆ ಸಕಲೇಶಪುರದಲ್ಲಿ ಮುನ್ಸಿಪಾಲ್ಟಿಯಲ್ಲಿ ಜೂ. ಇಂಜಿನಿಯರ್ ಮಹಿಳಾ ಅಧಿಕಾರಿ ಇದ್ದು, ಒತ್ತಡಕ್ಕೆ ಒಳಗಾಗಿ ಸುಳ್ಳು ಮಾಹಿತಿ ಕೊಟ್ಟು ಅವರನ್ನು ಬದಲಾವಣೆ ಮಾಡಿಸಿದರು ಎಂದೇಳಿದರು.


ಈ ಬಗ್ಗೆ ಡಿಸಿ ಬಳಿ ಚರ್ಚೆ ಮಾಡಿದ್ದು, ನಂತರ ಬದಲಾವಣೆ ಮಾಡಲು ಒಪ್ಪಿಗೆ ನೀಡಿರುವುದಾಗಿ ತಮ್ಮ ಅಸಹಯಕತೆ ಹೇಳಿಕೊಂಡರು. ಯಾರು ಅಸಹಯಕತೆ ಹೇಳದೇ ತನಿಖೆ ಮಾಡಬೇಕು ಎಂದು ಸಲಹೆ ನೀಡಿದರು. ಉನ್ನತ ಮಟ್ಟದ ಮತ್ತು ಕೆಳ ಮಟ್ಟದ ಅಧಿಕಾರಿಗಳಿಗೆ ರಕ್ಷಣೆ ಕೊಡದಿದ್ದರೇ ನಿಷ್ಪಕ್ಷ ಪಾತವಾಗಿ ಕೆಲಸ ಮಾಡುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ


ಬಿಜೆಪಿ ಪಕ್ಷದ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಹಿಂಬಾಲಕರನ್ನು ಬಿಟ್ಟು ಆಡಳಿತವನ್ನು ಮಾಡಲು ಹೊರಟರೇ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

Published by:Ganesh Nachikethu
First published: