Kolara: JDS ರೆಬೆಲ್ ಶಾಸಕ ಶ್ರೀನಿವಾಸಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಪಕ್ಷದಿಂದ ಉಚ್ಚಾಟನೆ!

ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಬಿಜೆಪಿಗೆ ಮತ ಹಾಕಿಸಿದ್ದು, ಕೆಪಿಸಿಸಿ ಅಧ್ಯಕ್ಷ್ಯ (KPCC President) ಡಿಕೆ ಶಿವಕುಮಾರ್ (DK Shivakumar) ಹಾಗು ವಿಪಕ್ಷ ನಾಯಕ  ಸಿದ್ದರಾಮಯ್ಯ ಎಂದು ಕೋಲಾರದಲ್ಲಿ ಜೆಡಿಎಸ್ (JDS) ರಾಜ್ಯಾಧ್ಯಕ್ಷ್ಯ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ಸಿ.ಎಂ.ಇಬ್ರಾಹಿಂ

ಸಿ.ಎಂ.ಇಬ್ರಾಹಿಂ

  • Share this:
ರಾಮನಗರ(ಜೂ.14): ಮೊನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಬಿಜೆಪಿಗೆ ಮತ ಹಾಕಿಸಿದ್ದು, ಕೆಪಿಸಿಸಿ ಅಧ್ಯಕ್ಷ್ಯ (KPCC President) ಡಿಕೆ ಶಿವಕುಮಾರ್ (DK Shivakumar) ಹಾಗು ವಿಪಕ್ಷ ನಾಯಕ  ಸಿದ್ದರಾಮಯ್ಯ ಎಂದು ಕೋಲಾರದಲ್ಲಿ ಜೆಡಿಎಸ್ (JDS) ರಾಜ್ಯಾಧ್ಯಕ್ಷ್ಯ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಮುಳಬಾಗಿಲು ಪಟ್ಟಣದಲ್ಲಿ ಜೆಡಿಎಸ್ ಮುಖಂಡರೊಬ್ಬರ ಮದುವೆ ಸಮಾರಂಭದಲ್ಲಿ ಭಾಗಿಯಾದ ಸಿಎಂ ಇಬ್ರಾಹಿಂ, ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಮೊನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ, ಬಿಜೆಪಿ ಹಾಗು ಕಾಂಗ್ರೆಸ್ (Congress) ಹೊಂದಾಣಿಕೆ ಮಾಡಿಕೊಂಡು ಮೊದಲನೇ ಮತ ಬಿಜೆಪಿಗೆ, ಎರಡನೇ ಮತ ಕಾಂಗ್ರೆಸ್ ಗೆ ಹಾಕಿಸಿದ್ದಾರೆ, ಹಾಗಾಗಿ ರಾಜ್ಯಸಭೆ ಚುನಾವಣೆ ಮೂಲಕ ಬಿಜೆಪಿ (BJP), ಕಾಂಗ್ರೆಸ್ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಂದು ತಿಳಿದುಬಂದಿದೆ. ಇದನ್ನ  ರಾಹುಲ್‌ ಗಾಂಧಿಯವರು (Rahul Gandhi) ಗಮನಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯನ್ನ (Congress Committee) ವಜಾ ಮಾಡ್ತಾರಾ ? ಎಂದು ಪ್ರಶ್ನೆ ಹಾಕಿದರು.

ರಾಜ್ಯಸಭೆ ಚುನಾವಣೆಯಲ್ಲಿ  ಓರ್ವ ಮುಸ್ಲಿಂ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಿಲ್ಲಿಸಿ ಅವರಿಗೆ ಹಲಾಲ್ ಕಟ್  ಮಾಡಿಲ್ಲ, ಜಟಕಾ ಕಟ್ ಮಾಡಿ ತೆಗೆದಿದ್ದಾರೆ, ಕರ್ನಾಟಕದ  ಕುಪೇಂದ್ರ ರೆಡ್ಡಿ ಸೋಲಿಸಿ, ಉತ್ತರ ಭಾರತದ ಲೆಹರ್ ಸಿಂಗ್ ಎಂಬ ವ್ಯಕ್ತಿಯನ್ನ ಗೆಲ್ಲಿಸಿದ್ದಾರೆ, ರೆಡ್ಡಿ ಜನಾಂಗಕ್ಕೆ ಮೋಸ ಮಾಡಿರುವ ಎರಡು ಪಕ್ಷಗಳಿಗೆ ಕೋಲಾರದಲ್ಲಿ ರೆಡ್ಡಿ ಸಮೂಹ, ಸಾರ್ವಜನಿಕರು ಬುದ್ದು ಕಲಿಸಬೇಕು.

2023 ರಲ್ಲಿ  ರಾಜ್ಯದಲ್ಲಿ ಮುಂದೆ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗೋದು ಖಚಿತ, ಅದಕ್ಕಾಗಿಯೇ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆಗೆ ಇಳಿದಿದೆ, ಮುಸ್ಲಿಂ ನಾಯಕರು ಕಾಂಗ್ರೆಸ್ ಬಿಟ್ಟು, ಜೆಡಿಎಸ್  ಸೇರಲಿದ್ದಾರೆ ಎಂದು ಭವಿಷ್ಯ ನುಡಿದರು.

ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸಗೌಡ ಅಮಾನತು

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ‌ ಮತಮಾನ ಮಾಡಿರುವ, ಶಾಸಕರಾದ  ಗುಬ್ಬೀ ಶ್ರೀನಿವಾಸ್, ಶ್ರೀನಿವಾಸಗೌಡ ಇಬ್ಬರನ್ನೂ  ಜೆಡಿಎಸ್ ನಿಂದ ಉಚ್ಚಾಟನೆ ಮಾಡಿರೊದಾಗಿ ಸಿಎಂ ಇಬ್ರಾಹಿಂ ಹೇಳಿದ್ದಾರೆ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೆ ಗುಬ್ಬಿ ಶ್ರೀನಿವಾಸ್ ಹೇಳಿಕೆಗೆ,  ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಒಂದೇ ಸಲ ಇಬ್ಬರನ್ನ ಮದುವೆಯಾಗಿದ್ದಾರೆ

"ನಾಯಿ ಮನುಷ್ಯನಿಗೆ ಕಚ್ಚುತ್ತೆ, ಆದರೆ  ಮನುಷ್ಯ ನಾಯಿಯನ್ನ ಕಚ್ಚಲ್ಲ, ಶ್ರೀನಿವಾಸಗೌಡ ಒಂದೇ  ಚುನಾವಣೆಯಲ್ಲಿ ಇಬ್ಬರಿಗೆ ಮತಹಾಕಿ, ಒಂದೇ ಸಲ ಇಬ್ಬರನ್ನ ಮದುವೆಯಾಗಿದ್ದಾರೆ. ಹಣ ಪಡೆದು ರಾಜಕೀಯ ಮಾಡ್ತಿರುವುದು ಕುಮಾರಸ್ವಾಮಿ.  ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಶಾಸಕ ಗುಬ್ಬೀ ಶ್ರೀನಿವಾಸ್, ಶ್ರೀನಿವಾಸಗೌಡ ಇಬ್ಬರನ್ನ ಪಕ್ಷದಿಂದ ಉಚ್ಚಾಟನೆ ಮಾಡಿರುವೆ,  ಸ್ಪೀಕರ್ ಗೆ ಪತ್ರ ಬರೆದು ಇಬ್ಬರ ಅನರ್ಹತೆಗೆ ಮನವಿ ಮಾಡುವೆ  ಎಂದರು. ಗತಿಯಿಲ್ಲದೆ ಜೆಡಿಎಸ್ ಟಿಕೆಟ್ ನೀಡಿಲ್ಲ, ನೀವು ಮನೆ ಬಾಗಿಲಿಗೆ ಬಂದು ಗೋಗರಿದಿದ್ದು ನೆನಪಿದೆ.

ಇದನ್ನೂ ಓದಿ: Bengaluru: ಬೆಂಗಳೂರಲ್ಲೂ ಡೆಂಗ್ಯೂ, ಕೊರೋನಾ ಪ್ರಕರಣ ಹೆಚ್ಚಳ!

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ  ಜೆಡಿಎಸ್ ಗೆ ಯಾರೂ ಗತಿಯಿಲ್ಲದೆ, ನಂಗೆ ಟಿಕೆಟ್ ನೀಡಿದರು ಎಂಬ, ಜೆಡಿಎಸ್ ರೆಬೆಲ್ ಶಾಸಕ ಶ್ರೀನಿವಾಸಗೌಡ ಮಾತಿಗೆ, ಕೋಲಾರದ ಜೆಡಿಎಸ್ ನಾಯಕರು ಕೆಂಡ ಕಾರಿದ್ದಾರೆ, ಈ ಬಗ್ಗೆ ಮಾತನಾಡಿದ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್, ಪಾಪ ಶ್ರೀನಿವಾಸಗೌಡರಿಗೆ ವಯೋ ಸಹಜ ಮರೆವು ಹೆಚ್ಚಾಗಿದೆ, ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ, ಜೆಡಿಎಸ್ ಕದ ತಟ್ಟಿದ್ದು ಶ್ರೀನಿವಾಸಗೌಡರು, ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಮಾತು ಕೇಳಿದ್ದಾರೆ.

ನಿಮ್ಮ ವಯಸ್ಸಿಗೆ ಗೌರವ ತರುವಂತಹ ಕೆಲಸ ಮಾಡಿ ಎಂದು ಕಿಡಿಕಾರಿದರು, ಇನ್ನು ಇದೇ ವೇಳೆ ಮಾತನಾಡಿದ ಕೋಲಾರ ಜೆಡಿಎಸ್ ಮುಖಂಡ ಶ್ರೀನಾಥ್, 2018 ರ ಜೆಡಿಎಸ್ ಟಿಕೆಟ್ ಗಾಗಿ ಶ್ರೀನಿವಾಸಗೌಡರು ನಮ್ಮ ಮನೆಯ ಬಾಗಿಲಿಗೆ ಬಂದಿದ್ದರು. ಶಾಸಕರಾಗಿ ಆಯ್ಕೆಯಾದರು ಇದುವರೆಗು ಅಭಿವೃದ್ದಿ ಕೆಲಸ ಮಾಡಿಲ್ಲ.

ಇದನ್ನೂ ಓದಿ: Landslide: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆ, ದತ್ತಪೀಠ ರಸ್ತೆ ಕುಸಿತ; ಆತಂಕದಲ್ಲಿ ಕಾಫಿನಾಡಿಗರು

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಕ್ಷೇತ್ರ ಜನತೆಗೆ ದ್ರೋಹ ಮಾಡಿದ್ದಾರೆ, ಕುಮಾರಸ್ವಾಮಿ ಬೇಡವೆಂದರು ನಾವೇ ಬಲವಂತ ಮಾಡಿ ವಿಧಾನಸಭೆ ಟಿಕೆಟ್ ಕೊಡಿಸಿದ್ದು ಎಂದು ಶ್ರೀನಿವಾಸಗೌಡ ವಿರುದ್ದ ಕೆಂಡಕಾರಿದ್ದಾರೆ.
Published by:Divya D
First published: