ನಾನು ಕಾಂಗ್ರೆಸ್​ಗೆ ಹೋಗ್ತೀನೋ, ಸಿದ್ದೂನೇ ಈ ಕಡೆ ಬರ್ತಾರಾ ಕಾದು ನೋಡಿ ಎಂದ JDS ರಾಜ್ಯಾಧ್ಯಕ್ಷ

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ‌ ಇಬ್ರಾಹಿಂ, ಸ್ನೇಹಿತ ಸಿದ್ದರಾಮಯ್ಯ ಕರೆದ್ರೆ ಮತ್ತೆ ಕಾಂಗ್ರೆಸ್ ಗೆ ಹೋಗೊ‌ ವಿಚಾರವಾಗಿ ಪ್ರತಿಕ್ರಿಯಿಸಿ ಹೇಳಿಕೆಯಲ್ಲಿ ಸಿದ್ದರಾಮಯ್ಯ,ನನಗಿಂಗ‌ ಐದು ವರ್ಷ ದೊಡ್ಡೋರು. ನಾವೂ ಹೋಗ್ತಿವೊ,ಅವರೇ ಬರ್ತಾರಾ ಕಾದು ನೋಡಿ ಎಂದಿದ್ದಾರೆ

ಸಿಎಂ ಇಬ್ರಾಹಿಂ

ಸಿಎಂ ಇಬ್ರಾಹಿಂ

  • Share this:
ರಾಯಚೂರು(ಮೇ.21): ಕಾಂಗ್ರೆಸ್ (Congress) ಒಡೆದು ಮನೆಯಾಗಿದೆ ಎಂದು ರಾಯಚೂರಿನಲ್ಲಿ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. 20 ಪರ್ಸೆಂಟ್ 40 ಪರ್ಸೆಂಟ್ ಕಮಿಷನ್ ಸಲುವಾಗಿ ಕಾಂಗ್ರೆಸ್ ‌ಮತ್ತು ಬಿಜೆಪಿ ನಡುವೆ ಜಗಳ ಶುರುವಾಗಿದೆ. ಕಾಂಗ್ರೆಸ್ ಮತ್ತು ‌ಬಿಜೆಪಿ (BJP) ಚಿಕ್ಕ- ದೊಡ್ಡಪ್ಪನ ಮಕ್ಕಳು. ಜೆಡಿಎಸ್ ಪ್ರಾದೇಶಿಕ ಪಕ್ಷ ಕಳೆದ 36 ವರ್ಷದಿಂದ ಇದೆ. ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು. ನಮ್ಮ ದೇವರನ್ನು ನಾವು ಯಾಕೆ ಕಡೆಗಣಿಸಬೇಕು. ಮೋದಿ ನಮಗೆ ಯಾರು? ಎಂದು ಪ್ರಶ್ನಿಸಿದ್ದಾರೆ.

ನಾವು ಜೋಳದ ರೊಟ್ಟಿ ಮಾರೋಕೆ ಹೋಗಿದ್ದೀವಾ ಎಂದ ಇಬ್ರಾಹಿಂ

ಬಿಜೆಪಿ ಗುಜರಾತ್ ‌ಮಾಡಲ್ ಪ್ರಚಾರಕ್ಕೆ ಟಾಂಗ್ ಕೊಟ್ಟ ಸಿಎಂ ಇಬ್ರಾಹಿಂ ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್ ನವರು. ಪಾನ್ ಮಸಾಲೆ ಮಾಡುವರು ಗುಜರಾತ್ ‌ನವರೇ. ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಇಲ್ಲ.. ನಮ್ಮ ರಾಜ್ಯದಲ್ಲಿ ಸ್ವಯಂ ಶಕ್ತಿ ಎಂದಿದ್ದಾರೆ.

ಹತ್ತಾರು ನೀರಾವರಿ ಯೋಜನೆಗಳು ‌ನಮ್ಮ ದೇವೇಗೌಡರು ಮಾಡಿದ್ದಾರೆ. ನೀರಾವರಿ ಯೋಜನೆಗಳು ಉಪಯೋಗಿಕೊಳ್ಳಬೇಕು ಆಗ ನಾವೇ ನಂ.ಒನ್‌ ಆಗುತ್ತೇವೆ. ನಾನು ಮತ್ತೆ ಕಾಂಗ್ರೆಸ್ ಗೆ ಹೋಗ್ತಿನಾ..ಇಲ್ಲಾ ಸಿದ್ದರಾಮಯ್ಯನೇ ಬರ್ತಾರಾ ಕಾದು ನೋಡಿ.. ಎಂದಿದ್ದಾರೆ.

ಹೀಗಂತ ಬಾಂಬ್ ಸಿಡಿಸಿದ ಸಿಎಂ ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ‌ ಇಬ್ರಾಹಿಂ, ಸ್ನೇಹಿತ ಸಿದ್ದರಾಮಯ್ಯ ಕರೆದ್ರೆ ಮತ್ತೆ ಕಾಂಗ್ರೆಸ್ ಗೆ ಹೋಗೊ‌ ವಿಚಾರವಾಗಿ ಪ್ರತಿಕ್ರಿಯಿಸಿ ಹೇಳಿಕೆಯಲ್ಲಿ ಸಿದ್ದರಾಮಯ್ಯ,ನನಗಿಂಗ‌ ಐದು ವರ್ಷ ದೊಡ್ಡೋರು. ನಾವೂ ಹೋಗ್ತಿವೊ,ಅವರೇ ಬರ್ತಾರಾ ಕಾದು ನೋಡಿ. ಸ್ನೇಹಿತರು‌‌ ಚೆನ್ನಾಗಿರ್ಲಿ ಅಷ್ಟೆ. ಮೂರ್ನಾಲ್ಕು ದಿನದಲ್ಲಿ ನಮ್ಮನೇಗೆ ಸಿದ್ದರಾಮಯ್ಯ ಊಟಕ್ಕೆ ಬರ್ತಾರೆ. ಈ ಬಗ್ಗೆ ದೇವೆಗೌಡರಿಗೂ ಹೇಳಿದ್ದೇನೆ ಎಂದಿದ್ದಾರೆ.

ಜ್ಞಾನ ವ್ಯಾಪಿ‌ ಸರ್ವೆ ವಿವಾದದ ವಿಚಾರ

ಯಾವುದೋ ಊರಲ್ಲಿರೋದು,ನಮ್ಮೂರ ಸಾಬರಿಗ್ಯಾಕ್ರಿ ಎಂದ ಸಿಎಂ ಇಬ್ರಾಹಿಂ ಈ ವಿಚಾರ ಕಡೆಗಣಿಸಿದ್ದಾರೆ. ಕರ್ನಾಟಕದಲ್ಲಿ‌ ಜ್ಞಾನವ್ಯಾಪಿ‌ ಇಲ್ಲ,ಜ್ಞಾನ ಬಾಪಿನೂ ಇಲ್ಲ
ನಂದು ಕರ್ನಾಟಕ. ನನಗೆ ಅದಕ್ಕು ಸಂಬಂಧವಿಲ್ಲ. 1.36 ಕೋಟಿ ಸಾಬರು ಸೇರಿ‌ ಆರುವರೆ ಕೋಟಿ ಕನ್ನಡಿಗರು, ಜನ ತಾಯಿ ಮಕ್ಕಳ ಹಾಗಿದ್ದಿವಿ. ಅಲ್ಲಿ ಹಾಳು ಬಿದ್ದು ಹೋಗ್ಲಿ,ನಾವೂ ತಿರುಗಿ ನೋಡಲ್ಲ. ನಮ್ಮ ನಾಡು,ನಮ್ಮ ಊರು ಅಷ್ಟೆ ಎಂದಿದ್ದಾರೆ.

ಇದನ್ನೂ ಓದಿ: Moring Digest: ಮೋದಿ ಮಾತು ಮೆಚ್ಚಿದ ಕಿಚ್ಚ, ಧಾರವಾಡದಲ್ಲಿ ಅಪಘಾತಕ್ಕೆ 7 ಬಲಿ! ಈತ ನೋಡಿ ಬರ್ಗರ್ ತಿಂದೇ ಬದುಕ್ತಾನಂತೆ!

ಕಾಂಗ್ರೆಸ್ ನವರಿಗೆ ಬಸ್ ಸ್ಟಾಂಡ್ ಬಸವಿ ಹುಡುಕಿ ಅಭ್ಯಾಸ ಎಂದ ಸಿಎಂ ಇಬ್ರಾಹಿಂ
ಬಿಎಸ್ ವೈ ಕೂಡ ಅದನ್ನೆ ಮಾಡಿದ್ರು. ಬಾಂಬೆ ಕರೆದೊಯ್ದು ವಿಡಿಯೋ ಮಾಡಿಸಿದ್ರು
ಅವರೆಲ್ಲಾ ಸ್ಟೇ ತಗೊಂಡಿದ್ದಾರೆ. ಏನಿದೆ ವಿಡಿಯೋದಲ್ಲಿ.? ಆಟ್ ಲಿಸ್ಟ್ ನೀವಾದ್ರೂ ನೋಡಿ‌ ಸಾಹಿಬ್ರೆ ಅಂತ ಮ್ಯಾಜಿಸ್ಟ್ರೇಟ್ ಅವರಿಗಾದ್ರೂ ಕೇಳ್ಬೇಕು.

ಇದರಿಂದ ರಾಜ್ಯಕ್ಕೆ ಅವಮಾನವಾಗಿದೆ. ಬಿಜೆಪಿ ವರ್ಕರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಕೌನ್ಸಿಲ್ ನಲ್ಲಿ ಪ್ರಸ್ತಾಪಿಸಿದ್ದೆ. ಆವತ್ತು ನಾನು ಮಾತನಾಡಿದ್ರೆ ಆತ ಸಾಯ್ತಿರ್ಲಿಲ್ಲ. ನಮಗೂ ಈಶ್ವರಪ್ಪಗೂ ಗಲಾಟೆ ಆಯ್ತು ಎಂದಿದ್ದಾರೆ.

ಇದನ್ನೂ ಓದಿ: SSLCಯಲ್ಲಿ Rank ಪಡೆದಿದ್ದೀರಾ? ಹಾಗಾದ್ರೆ ನಿಮಗೆ BBMP ಕೊಡುತ್ತಿದೆ ಬಿಗ್ ಆಫರ್! ಏನದು ಅಂತ ತಿಳಿದುಕೊಳ್ಳಲು ಇಲ್ಲಿ ಓದಿ

ಎರಡು ರಾಷ್ಟ್ರೀಯ ಪಕ್ಷದ ಹಲವರು ಜೆಡಿಎಸ್ ಗೆ ಬರೊ ಸೂಚನೆ ನೀಡಿದ ಸಿಎಂ ಇಬ್ರಾಹಿಂ, ಕ್ಯಾರೆ ಕಾಸಿಮ್ ಅಂದ್ರೆ, ಹುವಾ ಸಾಬ್ ಕಾಮ್ ಅನ್ಬೇಕು. ಕೊಪ್ಪಳ, ಗಂಗಾವತಿ,ಕುಷ್ಟಗಿ,ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿಗಳು ಯಾರಿರ್ತಾರೆ ನೋಡಿ ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದಾರೆ.
Published by:Divya D
First published: