• Home
 • »
 • News
 • »
 • state
 • »
 • HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್​ ಸರ್ಪ್ರೈಸ್: CM Ibrahim

HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್​ ಸರ್ಪ್ರೈಸ್: CM Ibrahim

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಮುಸ್ಲಿಂ ವ್ಯಾಪಾರಿಗಳು ಐದು ತಿಂಗಳು ತಡೆದುಕೊಳ್ಳಲಿ. ನಂತ್ರ ಈ ದರಿದ್ರಗಳು ಹೋಗ್ತವೆ. ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ದರಿದ್ರ ಎಂದು ವಾಗ್ದಾಳಿ ನಡೆಸಿದರು

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೀನಿ, ನಮ್ಮ ಪಕ್ಷದ ಸಿಎಂ ಅಭ್ಯರ್ಥಿ (JDS CM Candidate) ಹೆಚ್​​.ಡಿ.ಕುಮಾರಸ್ವಾಮಿ (Former CM HD Kumaraswamy) ಆಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ದಲಿತ ಸಿಎಂ (Dalit CM) ಹೇಳಿಕೆಗೆ ಪ್ರತಿಕ್ರಿಯಿಸಿದರು. ಮುಸ್ಲಿಂ ಅಥವಾ ದಲಿತ ಸಿಎಂ ಮಾಡಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆ ಇದೆ. ಆದ್ರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ದಲಿತ, ಮುಸ್ಲಿಂ ಸಿಎಂ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು. ದಲಿತ, ಮುಸ್ಲಿಂ ಉಪಮುಖ್ಯಮಂತ್ರಿ ಮಾಡ್ತೀವಿ. ಕುಮಾರಸ್ವಾಮಿ ಪ್ರಧಾನ ಮಂತ್ರಿಯಾಗೋ (Prime Minister) ಸಾಧ್ಯತೆಗಳೂ ಇವೆ. ಜೆಡಿಎಸ್​ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ ಆಗಲಿದೆ. ಕುಮಾರಸ್ವಾಮಿ ಗ್ರಹಬಲ ನೋಡಿದ್ರೆ, ಅವರು ಕೇಂದ್ರಕ್ಕೆ ಹೋಗ್ತಾರೆ. ಡಿಸೆಂಬರ್ 18ರ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಬಿಗ್ ಸರ್ಪ್ರೈಸ್ ಸಿಗಲಿದೆ ಎಂದು ಇಬ್ರಾಹಿಂ ತಿಳಿಸಿದರು.


ಹಾಲಿ ಶಾಸಕರು, ಮಾಜಿ ಶಾಸಕರು ಜೆಡಿಎಸ್​​ಗೆ ಬರಲಿದ್ದಾರೆ. ಕೆಲ ಜಿಲ್ಲೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮುಕ್ತ ಜಿಲ್ಲೆಗಳಾಗಿವೆ. ರಮೇಶ್ ಜಾರಕಿಹೊಳಿ‌  (Former Minister Ramesh Jarkiholi) ಜೊತೆ ಕುಮಾರಸ್ವಾಮಿ ಮಾತಾಡಿದಾರೆ. ಜಾರಕಿಹೊಳಿ‌ ಕುಟುಂಬದಲ್ಲಿ ಎಷ್ಟ ಜನ ಬರ್ತಾರೆ ಅನ್ನೋದು ಕುಮಾರಸ್ವಾಮಿ ಅವರಿಗೆ ಗೊತ್ತು.


ನಾವು ಇದುವರೆಗೂ ಎಲ್ಲೂ ಕೂಡಾ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಕುಮಾರಸ್ವಾಮಿ ಕೇಂದ್ರಕ್ಕೆ ಹೋದ್ರೆ ನೀವು ಸಿಎಂ ಅನ್ನೋ ಪ್ರಶ್ನೆಗೆ ನಾನು ಆಲ್ ರೆಡಿ ಸಿಎಂ ಎಂದು ಹೇಳಿದರು.


ಗಡಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಅಸಹಾಯಕರು


ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಇಬ್ರಾಹಿಂ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಬಿಜೆಪಿ ಮಿಲಾಪಿ ಕುಸ್ತಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಈ ಬಾರಿ ಬೆಳಗಾವಿಯಲ್ಲಿ‌ ಮರಾಠರೇ ಜೆಡಿಎಸ್ ಅಭ್ಯರ್ಥಿ. ಗಡಿ ವಿಚಾರದಲ್ಲಿ ಬೊಮ್ಮಾಯಿ ಅಸಹಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


JDS state president cm ibrahim reacts on dalit and muslim cm candidate mrq
ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ


ಗೋವಾದಲ್ಲಿ ಗೋ ಹತ್ಯೆ ನಿಷೇಧ ಯಾಕಿಲ್ಲ


ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಮತಕ್ಕಾಗಿ ಮಾಡ್ತಿರೋದು ಗಿಮಿಕ್. ಗೋವಾದಲ್ಲಿ ಯಾಕೆ ಗೋ ಹತ್ಯೆ ನಿಷೇಧ ಇಲ್ಲ. ಕರ್ನಾಟಕದಲ್ಲಿ ಯಾಕೆ ಗೋ ಹತ್ಯೆ ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲಿ ಏನ್ ಬೇಕಾದರೂ ಗುಂಡಾಗಿರಿ ಮಾಡಬಹುದು ಅನ್ನೋ ಕಾರಣಕ್ಕೆ ನಿಷೇಧ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!


ಬಿಜೆಪಿ ಸರ್ಕಾರವನ್ನು ದರಿದ್ರ ಎಂದ ಇಬ್ರಾಹಿಂ


ಮುಸ್ಲಿಂ ವ್ಯಾಪಾರಿಗಳು ಐದು ತಿಂಗಳು ತಡೆದುಕೊಳ್ಳಲಿ. ನಂತ್ರ ಈ ದರಿದ್ರಗಳು ಹೋಗ್ತವೆ. ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ದರಿದ್ರ ಎಂದು ವಾಗ್ದಾಳಿ ನಡೆಸಿದರು. ದೇವಸ್ಥಾನದ ಮುಂದೆ ಧರ್ಮ ದಂಗಲ್ ವಿಚಾರಕ್ಕೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.


JDS state president cm ibrahim reacts on dalit and muslim cm candidate mrq
ಹೆಚ್​.ಡಿ ಕುಮಾರಸ್ವಾಮಿ, ರಮೇಶ್​ ಜಾರಕಿಹೊಳಿ


ಪ್ರತ್ಯೇಕ ಮುಸ್ಲಿಂ ಕಾಲೇಜ್​​ಗೆ ವಿರೋಧ ವ್ಯಕ್ತಪಡಿಸಿದ ಇಬ್ರಾಹಿಂ, ವಕ್ಫ್ ಮಂಡಳಿ ಪ್ರತೇಕ ಮುಸ್ಲಿಂ‌ ಕಾಲೇಜ್ ಬೇಡಿಕೆ ಇಟ್ಟಿರೋದು ಸರಿಯಲ್ಲ. ಎಲ್ಲ‌ ಮಕ್ಕಳಿಗೂ ಸಮಾನ ಶಿಕ್ಷಣ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ: Rowdy Sheeter: ನಾನೂ ರೌಡಿಶೀಟರ್, ನನ್ನನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಿ! ಬಿಜೆಪಿ ಸೇರಲು ಪಾನಿಪುರಿ ಮಂಜು ಪ್ರತಿಭಟನೆ!


ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಪೋಸ್ಟರ್ ರಿಲೀಸ್


ಬಿಜೆಪಿ ವಿರುದ್ಧ ಈಗಾಗಲೇ ಪೋಸ್ಟರ್‌ ಮೂಲಕ ಟಾಂಗ್ ಕೊಟ್ಟಿದ್ದ ಕಾಂಗ್ರೆಸ್, ಮತ್ತೊಮ್ಮೆ ಪೋಸ್ಟರ್ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿಯ ರೌಡಿಸಂ ರಾಜಕೀಯವನ್ನು ಬಯಲಿಗೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿಯೊಂದಿಗೆ ವೆಬ್‌ಸೈಟ್ ಬಿಡುಗಡೆಮಾಡಿದೆ ಅಂತ ಕಾಂಗ್ರೆಸ್ ಹೇಳಿಕೊಂಡಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು