ಸಾ.ರಾ.ಮಹೇಶ್​​ರಂತ ನಿಷ್ಠಾವಂತ ಶಾಸಕರು ಜೆಡಿಎಸ್ ಪಕ್ಷದಲ್ಲಿರಬೇಕು ; ಬಸವರಾಜ​​​​ ಹೊರಟ್ಟಿ

ವಿಶ್ವನಾಥ್ ಅವರನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸಿದಾಗಲೇ ಅವರಿಗೆ ನೋವಾಗಿರಬೇಕು. ರಾಜಕೀಯದಲ್ಲಿ ವ್ಯತ್ಯಾಸಗಳಾಗುವುದು ಸಾಮಾನ್ಯ. ಅನರ್ಹ ಶಾಸಕ ಹೆಚ್​​.ವಿಶ್ವನಾಥ್ ಮತ್ತು ಶಾಸಕ ಸಾ.ರಾ. ಮಹೇಶ್ ನಡುವೆ ಜಗಳ ಏಕೆ ಬಂತು ಗೊತ್ತಿಲ್ಲ

G Hareeshkumar | news18-kannada
Updated:October 16, 2019, 3:22 PM IST
ಸಾ.ರಾ.ಮಹೇಶ್​​ರಂತ ನಿಷ್ಠಾವಂತ ಶಾಸಕರು ಜೆಡಿಎಸ್ ಪಕ್ಷದಲ್ಲಿರಬೇಕು ; ಬಸವರಾಜ​​​​ ಹೊರಟ್ಟಿ
ಎಂಎಲ್ಸಿ ಬಸವರಾಜ ಹೊರಟ್ಟಿ
G Hareeshkumar | news18-kannada
Updated: October 16, 2019, 3:22 PM IST
ಹುಬ್ಬಳ್ಳಿ (ಅ.15) : ಸಾ.ರಾ. ಮಹೇಶ್ ನಿಷ್ಠಾವಂತ ಜೆಡಿಎಸ್ ಶಾಸಕ. ಅವರಂತಹ ಒಳ್ಳೆಯವರು ಪಕ್ಷದಲ್ಲಿ ಇರಬೇಕು. ಎಲ್ಲರೂ ಹೀಗೆ ಪಕ್ಷ ಬಿಟ್ಟು ಹೋದರೆ ಪಕ್ಷದ ಭವಿಷ್ಯ ಕರಾಳವಾಗುತ್ತೆ‌ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ​​ ಹೊರಟ್ಟಿ ಹೇಳಿದ್ದಾರೆ.

ಅವರ ಮನವೊಲಿಸಬೇಕಾಗಿದ್ದು ಪಕ್ಷದ ಮುಖಂಡರ ಜವಾಬ್ದಾರಿ. ಅವರ ಮನಸ್ಸಿಗೆ ಆದ ನೋವನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಎಂತಹ ಪ್ರಸಂಗದಲ್ಲಿಯೂ ಸಾ.ರಾ. ಮಹೇಶ್ ಅವರು ಜೆಡಿಎಸ್ ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ರಾಜಿನಾಮೆಗೆ ಕಾರಣಗಳೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ ಎಂದರು.

ವಿಶ್ವನಾಥ್ ಅವರನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸಿದಾಗಲೇ ಅವರಿಗೆ ನೋವಾಗಿರಬೇಕು. ರಾಜಕೀಯದಲ್ಲಿ ವ್ಯತ್ಯಾಸಗಳಾಗುವುದು ಸಾಮಾನ್ಯ. ಅನರ್ಹ ಶಾಸಕ ಹೆಚ್​​.ವಿಶ್ವನಾಥ್ ಮತ್ತು ಶಾಸಕ ಸಾ.ರಾ. ಮಹೇಶ್ ನಡುವೆ ಜಗಳ ಏಕೆ ಬಂತು ಗೊತ್ತಿಲ್ಲ. ನಮ್ಮ ಪಕ್ಷದಲ್ಲಿನ ದೊಡ್ಡವರು ಅವರನ್ನು ಕರೆದು ಮಾತನಾಡಬೇಕು. ಸಾ.ರಾ. ಮಹೇಶ್ ಅವರನ್ನು ಜೆಡಿಎಸ್ ಪಕ್ಷ‌ ಕಳೆದುಕೊಳ್ಳಬಾರದು ಎಂದು ಹೇಳಿದರು.

ರಾಜೀನಾಮೆ ಕೊಟ್ಟರೆ ತನಿಖೆ ಮಾಡಬೇಕೆಂಬ ನಿಯಮವಿಲ್ಲ : ರೇವಣ್ಣ

ಶಾಸಕ ಸಾ ರಾ ಮಹೇಶ್ ರಾಜೀನಾಮೆ ಬಗ್ಗೆ ಇತ್ತ ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ , ರಾಜೀನಾಮೆ ಕೊಟ್ಟರೆ ತನಿಖೆ ಮಾಡಬೇಕೆಂಬ ನಿಯಮವಿಲ್ಲಾ, ರಾಜೀನಾಮೆ ನೀಡದೇ ಬೇಕಾದ್ರೆ ತನಿಖೆ ಮಾಡಲಿ ಈ ಬಗ್ಗೆ  ಪಕ್ಷ ತೀರ್ಮಾನ ಮಾಡುತ್ತೆ ಎಂದರು

ಇದನ್ನೂ ಓದಿ : ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ; ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ

ಹೇಮಾವತಿ ನೆರೆ ಸಂತ್ರಸ್ತರಿಗೆ ಭೂಮಿ ಮಂಜೂರಾತಿ ವಿಚಾರ, ವಿಶೇಷ ಭೂಸ್ವಾದೀನ 1654 ಎಕರೆ ಅಕ್ರಮವಾಗಿ ಮಂಜೂರಾಗಿದೆ, ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಹಾಸನ ಮತ್ತು ಸಕಲೇಶಪುರ ಉಪವಿಭಾಗಾಧಿಕಾರಿ ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಗಳು ಅಕ್ರಮದಲ್ಲಿ ಭಾಗಿಯಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ಅಮಾನತು ಮಾಡಬೇಕು, ಹಾಸನಕ್ಕೆ ಕುಡಿಯುವ ನೀರಿಗೆ 750 ಕೋಟಿ ಹಣ ಮಂಜೂರಾಗಿತ್ತು ಆದರೆ ಬಿಜೆಪಿ ಸರ್ಕಾರ ಅನುದಾನವನ್ನ ತಡೆ ಹಿಡಿದರು ಎಂದು ಹೇಳಿದರು.
Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...