ಎಚ್​ಡಿಕೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷ ಬಿಡುವ ಎಚ್ಚರಿಕೆ ನೀಡಿದ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸದ್ಯಕ್ಕೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ವರ್ತನೆ ಆದರೆ ಕಷ್ಟ. ಮುಂದೆ ತಮ್ಮ ದಾರಿ ತಾವು ನೋಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ ಎಂದು ಜೆಡಿಎಸ್ ವರಿಷ್ಠರಗೆ ಬಸವರಾಜ ಹೊರಟ್ಟಿ ಪಕ್ಷ ಬಿಟ್ಟುಹೋಗುವ  ಎಚ್ಚರಿಕೆ ನೀಡಿದರು.

HR Ramesh | news18-kannada
Updated:October 12, 2019, 4:29 PM IST
ಎಚ್​ಡಿಕೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷ ಬಿಡುವ ಎಚ್ಚರಿಕೆ ನೀಡಿದ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ
ಬಸವರಾಜ​​ ಹೊರಟ್ಟಿ
  • Share this:
ಬೆಂಗಳೂರು: ನಮ್ಮ ಮೇಲೆ ಕುಮಾರಸ್ವಾಮಿಗೆ ಸರ್ಕಾರ ಇದ್ದ ಕಾಳಜಿ ಈಗ ಇಲ್ಲವಾಗಿದೆ.  ನಮ್ಮ ಸಮಸ್ಯೆ ಕೇಳೋರು ಕೂಡ ಯಾರು ಇಲ್ಲವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್​ ಪಕ್ಷದ ಹಿರಿಯ ಮುಖಂಡ ಹಾಗೂ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಪಕ್ಷದ ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಒಂದು ಸಭೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ‌ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದೇವೆ. ಅಂದು ಮುಂದಿನ‌ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಸದ್ಯಕ್ಕೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ವರ್ತನೆ ಆದರೆ ಕಷ್ಟ. ಮುಂದೆ ತಮ್ಮ ದಾರಿ ತಾವು ನೋಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ ಎಂದು ಜೆಡಿಎಸ್ ವರಿಷ್ಠರಗೆ ಬಸವರಾಜ ಹೊರಟ್ಟಿ ಪಕ್ಷ ಬಿಟ್ಟುಹೋಗುವ  ಎಚ್ಚರಿಕೆ ನೀಡಿದರು.

ಇದನ್ನು ಓದಿ: ನೀವು ಯಡಿಯೂರಪ್ಪ ಪರ ಬ್ಯಾಟಿಂಗ್ ಮುಂದುವರೆಸಿ, ನನ್ನ ಬೆಂಬಲವೂ ಇದೆ; ಯತ್ನಾಳ್​ ಕಾಲೆಳೆದ ಸಿದ್ದರಾಮಯ್ಯ

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading