ಬೆಂಗಳೂರು (ಜ. 7): ನಾನು ಜೆಡಿಎಸ್ ಪಕ್ಷವನ್ನು ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ . ನಾನು ಜೆಡಿಎಸ್ ಬಿಡುವುದಿಲ್ಲ. ಬಹಿರಂಗವಾಗಿ ನಾನು ನಾಯಕರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರೇ ನನ್ನ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರನ್ನು ಸೋಲಿಸಿದರು ಎಂದು ಹೇಳಿದ್ದಾರೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವು ನಾಯಕರನ್ನು ಭೇಟಿ ಮಾಡಿದ್ದೆ. ನನಗೆ ಯಾರ ಮೇಲೂ ನನಗೆ ಪ್ರೀತಿ, ದ್ವೇಷ ಇಲ್ಲ. ಜೆಡಿಎಸ್ನಲ್ಲಿ ನನಗೆ ಸ್ವಾಭಿಮಾನಕ್ಕೆ ಇದುವರೆಗೂ ಧಕ್ಕೆ ಆಗಿಲ್ಲ. ಒಂದುವೇಳೆ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಸಹಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಜೆಪಿ ಭವನದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
ಬ್ಯಾಂಕ್ನಲ್ಲಿ ಲೋನ್ ಕೊಡಿಸುವ ವಿಚಾರಕ್ಕೆ ರಾಜಣ್ಣನವರ ಮನೆಗೆ ಹೋಗಿದ್ದೆ. ನಾನು ಯಾವ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲೂ ಇಲ್ಲ. ನಮ್ಮ ಪಕ್ಷದಲ್ಲಿ ಏನೇ ವಿಚಾರಗಳು ಇದ್ದರೂ ಪ್ರೀತಿಯಿಂದ ಹೇಳಿದರೆ ನಾಯಕರ ಮಾತು ಕೇಳುವೆ ಎಂದು ಜೆಡಿಎಸ್ ರೆಬೆಲ್ ಶಾಸಕ ಗುಬ್ಬಿ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ; ಬಂಧಿತ ಯುವರಾಜ್ ಜೊತೆ ಮತ್ತಷ್ಟು ಸ್ಯಾಂಡಲ್ವುಡ್ ನಟಿಯರ ನಂಟು ಪತ್ತೆ
ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ. ನಮ್ಮ ಅಪ್ಪ ನನ್ನನ್ನು ಬೆಳೆಸಿದ್ದಾರೆ. ನಾನು ಪಕ್ಷವನ್ನು ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಹಿರಂಗವಾಗಿ ನಾನು ನಾಯಕರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರೇ ನನ್ನ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಮನುಷ್ಯರಾದವರಿಗೆ ಬೇಜಾರಾಗುತ್ತದೆ. ಆತ್ಮ ಸಾಕ್ಷಿ ಇದ್ದವರಿಗೆ ಖಂಡಿತ ಬೇಜಾರಾಗುತ್ತದೆ. ನನ್ನನ್ನು ಯಾರೂ ನಾಯಕನನ್ನಾಗಿ ಬೆಳೆಸಿಲ್ಲ, ನಮ್ಮ ಅಪ್ಪ ನನ್ನನ್ನು ಬೆಳೆಸಿದರು. ಸತ್ಯ ಹೇಳೋದೇ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ ಎಂದು ಗುಬ್ಬಿ ಶ್ರೀನಿವಾಸ್ ಅಲವತ್ತುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ