• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಮೈತ್ರಿ ಸುಳಿವು ಕೊಟ್ಟ 'ದಳ'ಪತಿಗಳು! ಏನೆಲ್ಲಾ ಕಂಡೀಷನ್ಸ್ ಹಾಕಿದ್ದಾರೆ ಗೊತ್ತಾ?

Karnataka Elections: ಮೈತ್ರಿ ಸುಳಿವು ಕೊಟ್ಟ 'ದಳ'ಪತಿಗಳು! ಏನೆಲ್ಲಾ ಕಂಡೀಷನ್ಸ್ ಹಾಕಿದ್ದಾರೆ ಗೊತ್ತಾ?

ಸಿಂಗಾಪುರದಲ್ಲಿ ಆಪ್ತರೊಂದಿಗೆ ಎಚ್​​​ಡಿಕೆ

ಸಿಂಗಾಪುರದಲ್ಲಿ ಆಪ್ತರೊಂದಿಗೆ ಎಚ್​​​ಡಿಕೆ

ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್​ ಬಹುಮತ ಕನಸಿನ ಮೂಟೆಯನ್ನು ಹೊಂದಿವೆ. ಆದರೆ ಒಳಗೊಳಗೆ ಜೆಡಿಎಸ್​​​ ಜೊತೆಯಲ್ಲೂ ಸಂಪರ್ಕದಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

  • Share this:

ಬೆಂಗಳೂರು: ರಾಜ್ಯದಲ್ಲಿ ಮತದಾನ (Voter) ಮುಗಿಯುತ್ತಿದ್ದಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಿಂಗಾಪುರ್​​ಗೆ (Singapore) ತೆರಳಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಕುಮಾರಸ್ವಾಮಿ ರಾಜ್ಯಕ್ಕೆ ಮರಳುವ ಸಾಧ್ಯತೆ ಇದೆ. ಒಂದು ವೇಳೆ ಅತಂತ್ರ ಫಲಿತಾಂಶ (Result) ಬಂದರೆ ಕಿಂಗ್‌ಮೇಕರ್‌ (Kingmaker) ಆಗುವ ದಾಳ ಉರುಳಿಸಿದ್ದು, ನಮ್ಮ ಬೇಡಿಕೆ ಈಡೇರಿಸುವ ಪಕ್ಷದ ಜೊತೆಗೆ ಮೈತ್ರಿಗೆ ರೆಡಿ ಷರತ್ತನ್ನು ಜೆಡಿಎಸ್​ (JDS) ದಳಪತಿಗಳು ಇಟ್ಟಿದ್ದಾರೆ. ಇದೇ ವೇಳೆ ಎರಡು ಪಕ್ಷಗಳಿಗೆ ದಳ ನಾಯಕರು ವಿಶೇಷ ಕಂಡೀಷನ್ಸ್​ ಮುಂದಿಟ್ಟಿದ್ದಾರೆ.


ಸದ್ಯ ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್​ ಬಹುಮತ ಕನಸಿನ ಮೂಟೆಯನ್ನು ಹೊಂದಿವೆ. ಆದರೆ ಒಳಗೊಳಗೆ ಜೆಡಿಎಸ್​​​ ಜೊತೆಯಲ್ಲೂ ಸಂಪರ್ಕದಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಕೊಟ್ಟ ಹಲವು ಹೇಳಿಕೆ ಕಂಡು ಬಂದಿದೆ. ಅತಂತ್ರ,ಕುತಂತ್ರ ಎಲ್ಲಾ ಜೆಡಿಎಸ್ ಮೇಲೆ ನಡೆಯುತ್ತಿದೆ.




ಇದನ್ನೂ ಓದಿ: Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ


ಬಡವರ ಪಕ್ಷ, ಜೆಡಿಎಸ್ ಮೇಲೆ ಎಲ್ಲವೂ ನಡೆದಿದೆ. ಹಣ, ಸಮೀಕ್ಷೆ, ಮೀಡಿಯಾ ಎಲ್ಲವೂ ಸೇರಿ ಸಮೀಕ್ಷೆಗಳಲ್ಲಿ 26ಕ್ಕಿಂತ ಮೇಲೆ ಹೋಗಲೇ ಇಲ್ಲ. ನಾಳೆ ಎಲ್ಲವೂ ಗೊತ್ತಾಗಲಿದೆ. ಹಣದ ಕೊರತೆ, ಪೋಲಿಂಗ್ ಬೂತ್ ಏಜೆಂಟರಿಗೆ ಕೊಡಲೂ ಹಣ ಇರಲಿಲ್ಲ. ಪ್ರಚಾರಕ್ಕೆ ಕೂಡಾ ಹಣ ಇರಲಿಲ್ಲ. ಅತಂತ್ರ ವಿಧಾನಸಭೆ ಆದರೆ ಯಾರ ಜೊತೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಅದನ್ನು ನಮ್ಮ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಇಬ್ರಾಹಿಂ ಹೇಳಿದರು.


ಮೈತ್ರಿಕೆ ದಳಪತಿಗಳು ಮುಂದಿಟ್ಟ ಬೇಡಿಕೆಗಳೇನು?


ಫಲಿತಾಂಶ ಯಾರ ಪರ ಇರುತ್ತೋ ಗೊತ್ತಿಲ್ಲ ಆದರೆ ಅತಂತ್ರವಾದರೆ ಮೈತ್ರಿಗೆ ಒಪ್ಪಿರುವ ಜೆಡಿಎಸ್ ಹಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಮೈತ್ರಿಯಾದರೆ ನಾನೇ ಸಿಎಂ ಆಗಬೇಕು, ಸರ್ಕಾರದಲ್ಲಿ ನನ್ನದೇ ಹಿಡಿತ ಇರಬೇಕು. ಜೆಡಿಎಸ್​ಗೆ ಮಹತ್ವದ ಖಾತೆ ನೀಡಬೇಕು, ಜಲಸಂಪನ್ಮೂಲ, ವಿದ್ಯುತ್ ಖಾತೆ ಬೇಕು. ಜೆಡಿಎಸ್ ಪ್ರಣಾಳಿಕೆ ಈಡೇರಿಸಬೇಕು.

top videos


    ಸರ್ಕಾರ ರಚನೆ ಬಳಿಕ ಸಮನ್ವಯ ಸಮಿತಿ ಬೇಡ, ಮಂಡ್ಯ, ಹಾಸನದಿಂದ ದೂರ ಇರಬೇಕು. ಏನೇ ಇದ್ದರೂ ನನ್ನ ಜೊತೆ ಚರ್ಚಿಸಿ ನಿರ್ಧಾರ ಮಾಡಬೇಕು. ಮುಸ್ಲಿಂ ಮೀಸಲಾತಿ ವಾಪಸ್ ಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    First published: