ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದ್ರೆ ನಾನು ತ್ಯಾಗ ಮಾಡಲು ಸಿದ್ದ; ಕುಪೇಂದ್ರ ರೆಡ್ಡಿ

ನಮ್ಮ ರಾಜ್ಯದ ಧ್ವನಿಯಾಗಿ ದೇವೇಗೌಡರು ರಾಜ್ಯಸಭೆಗೆ ಹೊಗಬೇಕೆಂಬುದು ನನ್ನ ಆಶಯ.  ಒಂದು ವೇಳೆ ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದರೆ, ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

news18-kannada
Updated:January 19, 2020, 3:44 PM IST
ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದ್ರೆ ನಾನು ತ್ಯಾಗ ಮಾಡಲು ಸಿದ್ದ; ಕುಪೇಂದ್ರ ರೆಡ್ಡಿ
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ
  • Share this:
ಬೆಂಗಳೂರು(ಜ.19): ಬಿಬಿಎಂಪಿ ಚುನಾವಣೆಗಾಗಿ ಜೆಡಿಎಸ್​ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕನಿಷ್ಠ 70 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ.  ಅದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾಳೆಯಿಂದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ವಾರ್ಡ್​ನಲ್ಲೂ ಪಕ್ಷದ ಕಚೇರಿ ತೆರೆಯಲು ವಾರ್ಡ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇವೆ. ವಾರ್ಡ್ ಮಟ್ಟದಲ್ಲಿ ಪಕ್ಷವನ್ನು ಸದೃಢ ಮಾಡಲು ಇಂದಿನಿಂದಲೇ ಕಾರ್ಯರ್ತರು ಕಾರ್ಯೊನ್ಮುಖ ಆಗಬೇಕು ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಜೆಡಿಎಸ್​ನಲ್ಲಿ ಸಿಕ್ಕಿದ್ದರೆ ಪಕ್ಷ ಬಿಡುತ್ತಿರಲಿಲ್ಲ; ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ

ರಾಜ್ಯಸಭಾ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನೀಡಿದ ಕುಪೇಂದ್ರ ರೆಡ್ಡಿ, ನಮ್ಮ ರಾಜ್ಯದ ಧ್ವನಿಯಾಗಿ ದೇವೇಗೌಡರು ರಾಜ್ಯಸಭೆಗೆ ಹೊಗಬೇಕೆಂಬುದು ನನ್ನ ಆಶಯ.  ಒಂದು ವೇಳೆ ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದರೆ, ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

ಇನ್ನು, ಪೌರತ್ವ ತಿದ್ದುಪಡಿ  ಕಾಯ್ದೆ ಖಂಡಿಸಿ ಜನವರಿ 24 ರಂದು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸುವುದಾಗಿ ತಿಳಿಸಿದರು. ಬೆಂಗಳೂರು ಜೆಡಿಎಸ್ ವಿಭಾಗದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲು ತಿರ್ಮಾನಿಸಲಾಗಿದೆ ಎಂದರು.

ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಕೆ.ಎಸ್. ಈಶ್ವರಪ್ಪ
First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ