ಭೂ ಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಜೆಡಿಎಸ್ ಪ್ರತಿಭಟನೆ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ರಾಜ್ಯದಲ್ಲಿ ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿ ಆಗಿದೆ. ನಿಖಿಲ್ ಕೊಡಗಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ. ರೈತರ ಬೆಳೆ ನಷ್ಟ ಆಗಿದೆ.‌ ಮನುಷ್ಯರು, ಪ್ರಾಣಿಗಳು, ವಾಹನಗಳು ಕೊಚ್ಚಿ ಹೋಗಿವೆ. ಮೋದಿ ಅವರು ಪ್ರವಾಹದ ಕುರಿತು ಮಂತ್ರಿಗಳ ಜೊತೆ ಸಭೆ ಮಾಡಿದ್ದಾರೆ. ಅದರಿಂದ ನನಗೆ ತೃಪ್ತಿ ಆಗಿಲ್ಲ. ಪ್ರತಿ ಜಿಲ್ಲೆ, ತಾಲೂಕಿಗೆ ಹೋಗಿ ನಮ್ಮ ಅಧಿಕಾರಿಗಳು ನಷ್ಟದ ಬಗ್ಗೆ ವರದಿ ನೀಡಬೇಕು ಎಂದರು.

news18-kannada
Updated:August 13, 2020, 2:55 PM IST
ಭೂ ಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಜೆಡಿಎಸ್ ಪ್ರತಿಭಟನೆ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
  • Share this:
ಬೆಂಗಳೂರು; ಈಗಾಗಲೇ ಸರ್ಕಾರದವರು ಮೂರು ತಿದ್ದುಪಡಿ ಕಾಯ್ದೆಗಳನ್ನು ಹೊರತಂದಿದ್ದಾರೆ.  ಭೂ ಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ನಮ್ಮ ಪಕ್ಷ ಉಗ್ರವಾಗಿ ವಿರೋಧ ಮಾಡುತ್ತೆ. ಈ ಕಾಯ್ದೆ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ನಾನು ನಾಳೆ ಹಾಸದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಎಚ್.ಡಿ.ದೇವೇಗೌಡ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರದ ಪ್ರತಿಭಟನೆ ಮಾಡುತ್ತೇವೆ. ಹೆಚ್.ಕೆ. ಕುಮಾರಸ್ವಾಮಿ , ರೇವಣ್ಣ ಸೇರಿದಂತೆ ಹಲವು ನಾಯಕರು ಭಾಗಿಯಾಗುತ್ತಾರೆ. ಇದು ಸಾಂಕೇತಿಕ ಪ್ರತಿಭಟನೆ , ದಿಕ್ಕಾರ, ಘೋಷಣೆ ಕೂಗಿ ಪ್ರತಿಭಟನೆ ಮಾಡಲ್ಲ. ಆದರೆ ಡಿಸಿ ಅವರಿಗೆ ಪ್ರತಿಭಟನೆಯ ಮನವಿ ಪತ್ರ ಕೊಡುತ್ತೇವೆ. ಸರ್ಕಾರದ ಜನ ವಿರೋಧಿ ಕಾಯ್ದೆ ತಿದ್ದುಪಡಿಗಳ ವಿರೋಧವಾಗಿ ನಾವು ಹೋರಾಟಕ್ಕೆ ಸಿದ್ದರಾಗಿದ್ದೇವೆ. ನಾವು ನಾಳೆಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ಪಕ್ಷದಲ್ಲಿ ಈ ಹೋರಾಟದ ಬಗ್ಗೆ ಯಾವುದೇ ಒಡಕಿಲ್ಲ. ಹೋರಾಟದಲ್ಲಿ ಶಾಸಕರು, ಎಂಎಲ್​ಸಿಗಳು ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗುತ್ತಾರೆ. ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಎಪಿಎಂಸಿ ಕಾಯ್ದೆಯಿಂದ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಸಂಸತ್ ನಲ್ಲಿ ಈ ಬಗ್ಗೆ ಹೋರಾಟ ಮಾಡ್ತೀನಿ. ಉಳಿದ ಕಾಯ್ದೆ ರಾಜ್ಯ ಸರ್ಕಾರದ ಜಾರಿಗೆ ತಂದಿದೆ. ಹೀಗಾಗಿ ಇಲ್ಲಿ ಪ್ರತಿಭಟನೆ ಮಾಡ್ತೀವಿ. ಪ್ರತಿಭಟನೆ ಅನಿವಾರ್ಯ.ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರಿನ ಕಾವಲ ಭೈರಸಂದ್ರ ಗಲಭೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಈ ರೀತಿ ಗಲಭೆ ಆಗಬಾರದಿತ್ತು. ಶಾಸಕ ಅಖಂಡ ಶ್ರೀನಿವಾಸ್ ಮನಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದು ಸಹ ಆಗಬಾರದು, ಶಾಸಕರ ಮನೆ ಮೇಲೆ ಗಲಾಟೆ ಮಾಡಿದ್ದು ತಪ್ಪು.  ಈಗ 150 ಜನರ ಬಂಧಿಸಿದ್ದಾರೆ. ಆದರೆ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಅಧಿಕಾರಿಗಳ ಬಗ್ಗೆ ನನಗೆ ವಿಶ್ವಾಸವಿದೆ. 150 ಜನರನ್ನು ಬಂಧಿಸಿದ್ದಾರೆ. ಅಷ್ಟು ಜನರು ತಪ್ಪು ಮಾಡಿಲ್ಲ. ಶಾಸಕರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು ನಮ್ಮ ರಾಜ್ಯದಲ್ಲಿ ಇದೇ ಮೊದಲು. ಈ ಹಿಂದೆ ಎಂದೂ ನಮ್ಮ ರಾಜ್ಯದಲ್ಲಿ ಈ ರೀತಿ ಆಗಿಲ್ಲ. ಅಖಂಡ ಶ್ರೀನಿವಾಸ್ ನಮ್ಮ ಪಕ್ಷದಲ್ಲಿ ಇದ್ದು ಹೋದವರು. ಪಕ್ಷ ಮುಖ್ಯ ಅಲ್ಲ. ಶಾಸಕರ ಮನೆ ಮೇಲೆ ಗಲಾಟೆ ಆಗಬಾರದು ಎಂದರು.

ಗಲಾಟೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆರಚಾಟ ವಿಚಾರವಾಗಿಯೂ ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕೀಯ ಚೆಲ್ಲಾಟ ಬೇಡ. ಯಾರೂ ಮನಸ್ಸಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ಬಿಜೆಪಿ ಸಚಿವರ ಮಾತುಗಳನ್ನೂ ಕೇಳಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಸಿಎಲ್​ಪಿ ನಾಯಕರ ಮಾತುಗಳನ್ನೂ ಗಮನಿಸಿದ್ದೇನೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರದು. ಬಿಜೆಪಿ ಸರಕಾರವೇ ಅಧಿಕಾರದಲ್ಲಿ ಇದೆ. ಘಟನೆ ಕುರಿತು ಈಗಾಗಲೇ ಸಿಎಂ ಮಾತನಾಡಿದ್ದಾರೆ. ಇದಾದ ಮೇಲೂ ಕೆಲವು ಸಚಿವರು ಮಾತನಾಡುತ್ತಿದ್ದಾರೆ. ಹೀಗಾದರೆ ಅರ್ಥ ಇರಲ್ಲ ಎಂದು ಸಲಹೆ ನೀಡಿದರು.

ಇದನ್ನು ಓದಿ: ಹಾಸನ ಜಿಲ್ಲೆಯ ಸಹಕಾರಿ ಸಾಧಕರೊಂದಿಗೆ ಪ್ರಧಾನಿ ಸಂವಾದ; ರೈತ ಸ್ನೇಹಿ ಕಾರ್ಯಕ್ಕೆ ಮೆಚ್ಚುಗೆ

ರಾಜ್ಯದಲ್ಲಿ ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿ ಆಗಿದೆ. ನಿಖಿಲ್ ಕೊಡಗಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ. ರೈತರ ಬೆಳೆ ನಷ್ಟ ಆಗಿದೆ.‌ ಮನುಷ್ಯರು, ಪ್ರಾಣಿಗಳು, ವಾಹನಗಳು ಕೊಚ್ಚಿ ಹೋಗಿವೆ. ಮೋದಿ ಅವರು ಪ್ರವಾಹದ ಕುರಿತು ಮಂತ್ರಿಗಳ ಜೊತೆ ಸಭೆ ಮಾಡಿದ್ದಾರೆ. ಅದರಿಂದ ನನಗೆ ತೃಪ್ತಿ ಆಗಿಲ್ಲ. ಪ್ರತಿ ಜಿಲ್ಲೆ, ತಾಲೂಕಿಗೆ ಹೋಗಿ ನಮ್ಮ ಅಧಿಕಾರಿಗಳು ನಷ್ಟದ ಬಗ್ಗೆ ವರದಿ ನೀಡಬೇಕು. ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯಕ್ಕೆ ತಂಡ ಕಳಿಸಿ ಅಧ್ಯಾಯ ಮಾಡಿಸಬೇಕು. ಕೇಂದ್ರ ತಂಡ ಪರಿಶೀಲನೆ ಮಾಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಕಳೆದ ಬಾರಿ ಪ್ರವಾಹ ಪರಿಹಾರದಲ್ಲಿ ನಮಗೆ ಅನ್ಯಾಯ ಆಗಿದೆ. ಈ ಬಾರಿ ಹಾಗೆ ಆಗಬಾರದು. ನಾನು ಈ ಬಗ್ಗೆ ಸಂಸತ್​ನಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
Published by: HR Ramesh
First published: August 13, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading