Hindi Diwas 2022: ರಾಜ್ಯದಲ್ಲಿ ಹಿಂದಿ ದಿವಸ್ ವಿರೋಧಿಸಿ JDS ಪ್ರೊಟೆಸ್ಟ್; ಸದನದೊಳಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪ್ಲ್ಯಾನ್

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಿ ದಿನ ಆಚರಣೆ ಮಾಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ (CM Basavaraj Bommai) ಮಾಜಿ ಸಿಎಂ ಹೆಚ್​​​.ಡಿ.ಕುಮಾರಸ್ವಾಮಿ (Former CM HD Kumaraswamy) ಪತ್ರ  ಬರೆದು ಆಗ್ರಹಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದಿ ದಿವಸ್ (Hindi Diwas) ವಿರೋಧಿಸಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಅವರ ನೇತೃತ್ವದಲ್ಲಿ ಪ್ರತಿಭಟನೆ (Protest) ನಡೆಯಲಿದೆ. ಬಲವಂತದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಪ್ರತಿಭಟನೆ (JDS Protest) ಮಾಡಲಿದ್ದು, ರಾಜ್ಯ ಜೆಡಿಎಸ್ ಕಚೇರಿಯ ಆವರಣದಲ್ಲಿ ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ಮಾಡಲಿದೆ. ಜೆಪಿ ಭವನದ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ (State And Central Government) ವಿರುದ್ಧ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಿ ದಿನ ಆಚರಣೆ ಮಾಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ (CM Basavaraj Bommai) ಮಾಜಿ ಸಿಎಂ ಹೆಚ್​​​.ಡಿ.ಕುಮಾರಸ್ವಾಮಿ (Former CM HD Kumaraswamy) ಪತ್ರ  ಬರೆದು ಆಗ್ರಹಿಸಿದ್ದರು.

ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಗೆ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದಿ ದಿವಸ್ ಆಚರಿಸುವ ಮೂಲಕ ಕನ್ನಡಿಗರ ಮೇಲೆ ಅನ್ಯ ಭಾಷೆಗಳ ಹೇರಿಕೆ ಮಾಡ್ತಿದಾರೆ ಎಂದು ಕಿಡಿಕಾರಿದರು.

ಇಂದು ಹಿಂದಿ ದಿವಸ್ ಅಂತಾರೆ, ನಾಳೆ ತಮಿಳು, ತೆಲುಗು ದಿವಸ್ ಅಂತಾರೆ. ರಾಜ್ಯ ಸರ್ಕಾರದಿಂದ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ನಡೆದಿದೆ. ಕೂಡಲೇ ಹಿಂದಿ ದಿವಸ್ ಆಚರಣೆ ಕೈಬಿಡಬೇಕು. ಬೇಕಿದ್ದರೆ ದೇಶಾದ್ಯಂತ ಕನ್ನಡ ದಿನ ಆಚರಿಸಲಿ ಎಂದು ಬೇಕ್ರಿ ರಮೇಶ್ ಹೇಳಿದರು.

ಇದನ್ನೂ ಓದಿ: Bannerghatta: ಪ್ರಸವ ವೇದನೆಯಿಂದ ನರಳುತ್ತಿದ್ದ ಸಾಕಾನೆ ಆರೈಕೆ ಮಾಡಿದ ಗಜಪಡೆ; ಬನ್ನೇರುಘಟ್ಟ ಕಾಡಿನಲ್ಲಿ ಅಪರೂಪದ ಘಟನೆ

ಅನ್ಯ ಭಾಷೆಯ ಪ್ರಚಾರಕ್ಕಾಗಿ ನಮ್ಮ ತೆರಿಗೆ ಹಣ ವ್ಯರ್ಥವಾಗಬಾರದು

ರಾಷ್ಟ್ರೀಯ ಪಕ್ಷಗಳು ಹಿಂದಿನಿಂದಲೂ ಹಿಂದಿ ಭಾಷೆಯನ್ನು ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿದೆ, ಈ ನಿಲುವನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಬಲವಾಗಿ ವಿರೋಧಿಸುತ್ತದೆ, ಬಲವಂತವಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಪ್ರಾದೇಶಿಕ ಅಸಮಾನತೆಯ ಸಂಕೇತ. ಸೆಪ್ಟೆಂಬರ್ ೧೪ ರಂದು ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯದಲ್ಲಿ ಹಿಂದಿ ದಿವಸವನ್ನು ಆಚರಣೆ ಮಾಡಬಾರದು ಕನ್ನಡಿಗರ ತೆರಿಗೆ ಹಣ ಕನ್ನಡಿಗರ ಅಭಿವೃದ್ಧಿಗೆ ವಿನಿಯೋಗಿಸಬೇಕೆ ಹೊರತು ಯಾವುದೋ ಅನ್ಯ ಭಾಷೆಯ ಪ್ರಚಾರಕ್ಕಾಗಿ ನಮ್ಮ ತೆರಿಗೆ ಹಣ ವ್ಯರ್ಥವಾಗಬಾರದು ಎಂದು ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಸದನದೊಳಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ

ಇಂದು ಮೂರನೇ ದಿನದ ವಿಧಾನಸಭೆ ಕಲಾಪ (Assembly Session) ಮತ್ತಷ್ಟು ರಂಗೇರಲಿದೆ. ಸದನದೊಳಗೆ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಹೋರಾಟ ಮಾಡಲು ನಿರ್ಧರಿಸಿದೆ. ಈ ಬಗ್ಗೆ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆ (Congress CLP Meeting) ನಡೆಸಿದ್ದು, ಸದನದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುವಂತೆ ತಮ್ಮ ಶಾಸಕರಿಗೆ  ಖಡಕ್​​ ಸಂದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಖಾಸಗಿ ಹೋಟೆಲ್​​​ನಲ್ಲಿ ನಡೆ ಸಭೆಯಲ್ಲಿ ಮಲ್ಲಿಕಾರ್ಜುನ​ ಖರ್ಗೆ, ಸುರ್ಜೆವಾಲ, ಸಿದ್ದರಾಮಯ್ಯ, ಡಿಕೆಶಿ ಹಾಗೂ, ಕಾಂಗ್ರೆಸ್​​ನ ಎಲ್ಲಾ ಶಾಸಕರು, MLCಗಳು ಭಾಗಿಯಾಗಿದ್ರು. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಭಿಯಾನ ಆರಂಭಿಸಿರೋ ಕಾಂಗ್ರೆಸ್, ಎಲ್ಲರಿಗೂ ಬಿಜೆಪಿ ಭ್ರಷ್ಟಾಚಾರದ ರೇಟ್ ​ಕಾರ್ಡ್​ ಕೊಟ್ಟಿದ್ದಾರೆ. PSI ಹಗರಣ, 40 ಪರ್ಸೆಂಟ್ ಕಮಿಷನ್ ಸೇರಿ ಹಲವು ವಿಚಾರಗಳ ಬಗ್ಗೆ ಕಾಂಗ್ರೆಸ್ ಇಂದು ಧ್ವನಿಎತ್ತಲಿದೆ.

ಇದನ್ನೂ ಓದಿ:  Karnataka Weather Report: ಉತ್ತರ ಒಳನಾಡು ಭಾಗಕ್ಕೆ ಮಳೆಯ ಅಲರ್ಟ್​; ನದಿ ಅಬ್ಬರಕ್ಕೆ ಕಾಫಿ, ಅಡಿಕೆ ತೋಟ ನಾಶ

ಇನ್ನು ಇದೇ ಸಭೆಯಲ್ಲಿ ರಾಹುಲ್​ ಭಾರತ್​​ ಜೋಡೋ ಯಾತ್ರೆ ಬಗ್ಗೆಯೂ ಚರ್ಚೆ ಮಾಡಲಾಯ್ತು. 2023ರ ಚುನಾವಣೆವರೆಗೂ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಅಭಿಯಾನ ಮಾಡುವಂತೆ ಸೂಚನೆ ಕೊಡಲಾಯ್ತು.
Published by:Mahmadrafik K
First published: