ರಾಜ್ಯದಲ್ಲಿ 2023ರಲ್ಲಿ ಜೆಡಿಎಸ್​ ಪಕ್ಷ ಸ್ವತಂತ್ರ್ಯವಾಗಿ ಸರ್ಕಾರ ರಚಿಸಲಿದೆ; ಹೆಚ್​.ಡಿ. ಕುಮಾರಸ್ವಾಮಿ ಭರವಸೆ

ಆರಂಭದಲ್ಲಿ ಬಿಜೆಪಿಯವರು ಗ್ರಾಮ ಸ್ವರಾಜ್ಯ ಮಾಡುತ್ತೇವೆ ಎಂದಿದ್ದರು. ಆದರೆ, ಈಗ ಪಾಪದ ಹಣ ಚೆಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ನಡೆಸಿದೆ. ಹಣದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ

ಹೆಚ್​.ಡಿ. ಕುಮಾರಸ್ವಾಮಿ

 • Share this:
  ಬೆಂಗಳೂರು (ಜನವರಿ 04); ಇಂದಿನಿಂದಲೇ ಜೆಡಿಎಸ್​ ಪಕ್ಷದ ಸಂಘಟನೆ ಕೆಲಸ ಆರಂಭವಾಗಿದೆ. ಸಂಕ್ರಾಂತಿ ಹಬ್ಬದ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ನಿರ್ಧಾರ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ಮೊದಲ ಸಭೆ ನಡೆದಿದ್ದು, 2023ರಲ್ಲಿ ರಾಜ್ಯವನ್ನು ಜೆಡಿಎಸ್​ ರಾಜ್ಯವನ್ನಾಗಿ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಅಲ್ಲದೆ, ಈ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಸ್ವತಂತ್ರ್ಯವಾಗಿ ಸ್ಪರ್ಧಿಸಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ಮುಗಿದಿದ್ದು, ಫಲಿತಾಂಶಗಳು ಹೊರ ಬಿದ್ದಿವೆ. ಈ ಚುನಾವಣೆಯಲ್ಲಿ ಜೆಡಿಎಸ್​ ಸಾಧನೆ ತನಗೆ ತೃಪ್ತಿ ನೀಡಿದೆ ಎಂದು ತಿಳಿಸಿರುವ ಕುಮಾರಸ್ವಾಮಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ​ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.

  ಈ ಕುರಿತು ಇಂದು ಸುದ್ದಿಗಾರರ ಜೊತೆಗೆ ಮಾತನಾಡಿರುವ ಕುಮಾರಸ್ವಾಮಿ, "ಸಂಕ್ರಾಂತಿ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ನಿರ್ಧಾರ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ಇಂದು ಮೊದಲ ಸಭೆ ನಡೆಸಿದ್ದೇವೆ. ಜೆಡಿಎಸ್​ ಅನ್ನು ಯಾವುದೇ ಪಕ್ಷದೊಂದಿಗೆ ವಿಲೀನಗೊಳಿಸುವ ಅಥವಾ ಬೆಂಬಲಿಸುವ ಉದ್ದೇಶ ಇಲ್ಲ. ಸೀಟು ಹೊಂದಾಣಿಕೆ ವಿಚಾರವೂ ನಮ್ಮ ಮುಂದೆ ಇಲ್ಲ. ಇವತ್ತಿನ ಬಿಜೆಪಿ ಆಡಳಿತ ಮತ್ತು ಕಾಂಗ್ರೆಸ್ ನಡವಳಿಕೆಯೂ ನನಗೆ ಗೊತ್ತು.

  ಆರಂಭದಲ್ಲಿ ಬಿಜೆಪಿಯವರು ಗ್ರಾಮ ಸ್ವರಾಜ್ಯ ಮಾಡುತ್ತೇವೆ ಎಂದಿದ್ದರು. ಆದರೆ, ಈಗ ಪಾಪದ ಹಣ ಚೆಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ನಡೆಸಿದೆ. ಹಣದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಇವತ್ತಿನ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಸಿಗುತ್ತಿಲ್ಲ. ಜೆಡಿಎಸ್ ನ ಸ್ವಾಭಿಮಾನವನ್ನ ಬೇರೆ ಪಕ್ಷಕ್ಕೆ ಅಡ ಇಡಲು ಸಾಧ್ಯವಾ..? ಮುಂದಿನ 2023ರ ವೇಳೆಗೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಸ್ವಂತಂತ್ರವಾಗಿ ಅಧಿಕಾರ ಕೊಟ್ರೆ. ಏನೆಲ್ಲಾ ಕೆಲಸ ಮಾಡ್ತೀವಿ ಎಂಬ ಯೋಜನೆ ಮುಂದಿಟ್ಟಿದ್ದೇವೆ" ಎಂದು ತಿಳಿಸಿದ್ದಾರೆ.

  "ನಮ್ಮ ಪಕ್ಷ ಮುಗಿದೇ ಹೋಯ್ತು ಎಂದು ಹೇಳ್ತಾರೆ. ಬಿ ಜೆ ಪಿ ಅಧ್ಯಕ್ಷರು ಶೇ 50 ರಷ್ಟು ಸ್ಥಾನ ಗೆದ್ದಿದ್ದೇವೆ ಎಂದು ಹೇಳ್ತಾರೆ. ಕಾಂಗ್ರೆಸ್ ನವರು ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ ಎಂದು ಹೇಳ್ತಾರೆ. ಆದರೆ ನಾವು ಆ ರೀತಿ ಹೇಳೂಲ್ಲ. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿಜವಾದ ರಾಜಕೀಯ ಅಖಾಡ ಸಿದ್ದವಾಗಲಿದೆ. ಈ ಅಖಾಡ ಮುಂದಿನ ರಾಜಕೀಯ ದಿಕ್ಸೂಚಿಯಾಗಿ ಬದಲಾಗಲಿದೆ" ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

  ಇದನ್ನೂ ಓದಿ: Reliance Jio: ಹರಿಯಾಣ ಪಂಜಾಬ್​ನಲ್ಲಿ ಮೊಬೈಲ್​ ಟವರ್ ಧ್ವಂಸ ಪ್ರಕರಣ; ನ್ಯಾಯಾಲಯದ ಮೊರೆಹೋದ ರಿಲಾಯನ್ಸ್​ ಜಿಯೋ

  ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಭೇಟಿ ಕುರಿತು ಮಾತನಾಡಿರುವ ಕುಮಾರಸ್ವಾಮಿ, "ಜೆಡಿಎಸ್​ ಶಾಸಕರ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ.  ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ನಾನೇನಾದ್ರು ಬೇಡಿಕೆ ಇಟ್ಟಿದ್ನಾ..? ಹಾಗೆ ಬೇಡಿಕೆ ಇಟ್ಟಿದ್ದರೆ ಅವರೇ ಅದನ್ನು ಹೇಳಲಿ" ಎಂದು ಸ್ಪಷ್ಟಪಡಿಸಿದ್ದಾರೆ.

  ಎಂದಿನಂತೆ ಕಾಂಗ್ರೆಸ್​ ವಿರುದ್ಧವೂ ಕಿಡಿಕಾರಿರುವ ಕುಮಾರಸ್ವಾಮಿ, "ದೇವೇಗೌಡರು ಮನೆ ಬಾಗಿಲಿಗೆ ಬಂದಿದ್ದೆ ಕಾಂಗ್ರೆಸ್ ನವರು. ನಾನು ದೆಹಲಿಗೆ ಹೋಗಲ್ಲ ಎಂದು ದೇವೇಗೌಡರು ಹೇಳಿದ್ರು. ಆದರೆ ಇವರೇ ದೇವೇಗೌಡರಿಗೆ ಒತ್ತಾಯ ಮಾಡಿದ್ದು, ನಾನು ಸಿಎಂ ಆಗಲು ಇವರ ಮನೆ ಬಾಗಿಲಿಗೆ ಹೋಗಿಲ್ಲ. ಅವರೇ ನನ್ನ ಮನೆ ಬಾಗಿಲಿಗೆ ಬಂದು ಸಿಎಂ ಆಫರ್ ನೀಡಿದ್ರು. ಈಗ ನಮ್ಮ ಮೇಲೆಯೇ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
  Published by:MAshok Kumar
  First published: