ನಾನು ಜೆಡಿಎಸ್ ಬಿಡಲಿಲ್ಲ, ಆ ಪಕ್ಷದಿಂದ ನನ್ನನ್ನು ಉಚ್ಚಾಟಿಸಲಾಯಿತು; ಮಾಜಿ ಸಿಎಂ ಸಿದ್ದರಾಮಯ್ಯ

ನಾವು ಎಂದಿಗೂ ಪ್ರಜಾಪ್ರ ಭುತ್ವದ ವಿರುದ್ಧವಾಗಿ ಕೆಲಸ ಮಾಡಿದವರಲ್ಲ. ಆದರೆ, ನೀವು ಬೇರೆ ಪಕ್ಷದ ಶಾಸಕರಿಗೆ ಆಮೀಷ ಒಡ್ಡಿ ಅವರನ್ನು ಬಾಂಬೆಯಲ್ಲಿ ಕೂಡಿ ಇಟ್ಟಿದ್ದಿರಾ. ಸಂವಿಧಾನ ಗೌರವವಿಸುವವರು ಯಾರೂ ಇಂತಹ ಕೆಲಸ ಮಾಡವುದಿಲ್ಲ. ಸಂವಿಧಾನ ಗೌರವಿಸದವರು ಮಾತ್ರ ಯಾವ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎಂದು ಆಪರೇಷನ್​ ಕಮಲ ವಿರುದ್ಧ ಹರಿಹಾಯ್ದರು.

HR Ramesh | news18
Updated:July 22, 2019, 4:06 PM IST
ನಾನು ಜೆಡಿಎಸ್ ಬಿಡಲಿಲ್ಲ, ಆ ಪಕ್ಷದಿಂದ ನನ್ನನ್ನು ಉಚ್ಚಾಟಿಸಲಾಯಿತು; ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
  • News18
  • Last Updated: July 22, 2019, 4:06 PM IST
  • Share this:
ಬೆಂಗಳೂರು: ನಾನು ಜೆಡಿಎಸ್​ ಪಕ್ಷದಿಂದ ನಾನೇಗೆ ಹೊರಗೆ ಬರಲಿಲ್ಲ. 2005ರಲ್ಲಿ ಜೆಡಿಎಸ್​ನಿಂದ ನನ್ನನ್ನು ಉಚ್ಚಾಟಿದಲಾಯಿತು ಎಂದು ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ನೆನಪಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಈ ಹಿಂದೆ ಪ್ರಚಾರದ ವೇಳೆ ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಚಾರವಾಗಿ ಬಿಜೆಪಿ ಸದಸ್ಯ ಸಿ.ಟಿ.ರವಿ ಆರೋಪ ಮಾಡಿದ ಬಳಿಕ ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನೇಗೆ ನಾನೇ ಜೆಡಿಎಸ್​ನಿಂದ ಹೊರಗೆ ಬರಲಿಲ್ಲ. ನನ್ನನ್ನು ಜೆಡಿಎಸ್​ನಿಂದ ಉಚ್ಚಾಟನೆ ಮಾಡಿದರು. ಆಗ ನಾನು ಅಲ್ಲಿಂದ ಹೊರಗೆ ಬಂದು, ಕಾಂಗ್ರೆಸ್ ಸೇರಲಿಲ್ಲ. ಅಹಿಂದ ಸಂಘಟನೆ ಕಟ್ಟಿದೆ. ಒಂದು ವರ್ಷದ ಬಳಿಕ ಕಾಂಗ್ರೆಸ್​ ಆಹ್ವಾನದ ಬಳಿಕ ಕಾಂಗ್ರೆಸ್​ ಸೇರಿದೆ. ಇತಿಹಾಸವನ್ನು ತಿರುಚುವ ಕೆಲಸವನ್ನು ಯಾರೂ ಮಾಡಬಾರದು. ಸದನದಲ್ಲಿ ತಪ್ಪು ಮಾಹಿತಿ ದಾಖಲಾಗಬಾರದು ಎಂದು ಸಿ.ಟಿ.ರವಿಗೆ ಇತಿಹಾಸದ ಪಾಠ ಮಾಡಿದರು.

ಇದನ್ನು ಓದಿ: ಸದನದಲ್ಲಿ ಆಪರೇಷನ್ ಕಮಲದ ಸದ್ದು; ಚರ್ಚೆ ಬೇಗ ಮುಗಿಯುವ ಬಿಜೆಪಿಯ ನಿರೀಕ್ಷೆ ಕ್ಷೀಣ

ನಾವು ಎಂದಿಗೂ ಪ್ರಜಾಪ್ರ ಭುತ್ವದ ವಿರುದ್ಧವಾಗಿ ಕೆಲಸ ಮಾಡಿದವರಲ್ಲ. ಆದರೆ, ನೀವು ಬೇರೆ ಪಕ್ಷದ ಶಾಸಕರಿಗೆ ಆಮೀಷ ಒಡ್ಡಿ ಅವರನ್ನು ಬಾಂಬೆಯಲ್ಲಿ ಕೂಡಿ ಇಟ್ಟಿದ್ದಿರಾ. ಸಂವಿಧಾನ ಗೌರವವಿಸುವವರು ಯಾರೂ ಇಂತಹ ಕೆಲಸ ಮಾಡವುದಿಲ್ಲ. ಸಂವಿಧಾನ ಗೌರವಿಸದವರು ಮಾತ್ರ ಯಾವ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎಂದು ಆಪರೇಷನ್​ ಕಮಲ ವಿರುದ್ಧ ಹರಿಹಾಯ್ದರು.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ