ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಎಲ್​ಸಿ ಪುಟ್ಟಣ್ಣ; ಸಿಎಂ ಬಿಎಸ್​ವೈ ಘೋಷಣೆ

ಉಪಚುನಾವಣೆ ಫಲಿತಾಂಶದ ನಂತರ ಜೆಡಿಎಸ್‌ನ ಇನ್ನು ಕೆಲವರು ಬಿಜೆಪಿಗೆ ಬರಬಹುದು. ಬರುತ್ತೇವೆ ಎಂದು ಹಿಂದೆ ಕೆಲವರು ಹೇಳಿದ್ದರು‌. ಚುನಾವಣೆ ಫಲಿತಾಂಶದ ನಂತರ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಉಪಚುನಾವಣೆ ಫಲಿತಾಂಶದ ನಂತರ ವಲಸೆ ಶುರು, ಎಂದು ಎಂಎಲ್​ಸಿ ಪುಟ್ಟಣ್ಣ ಸೂಚನೆ ಕೊಟ್ಟರು.

Latha CG | news18-kannada
Updated:November 26, 2019, 11:02 AM IST
ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಎಲ್​ಸಿ ಪುಟ್ಟಣ್ಣ; ಸಿಎಂ ಬಿಎಸ್​ವೈ ಘೋಷಣೆ
ಜೆಡಿಎಸ್​ ಎಂಎಲ್​ಸಿ ಪುಟ್ಟಣ್ಣ
  • Share this:
ಮೈಸೂರು(ನ.26): ವಿಧಾನಪರಿಷತ್​ ಚುನಾವಣೆಗೆ ಉಚ್ಚಾಟಿತ  ಜೆಡಿಎಸ್​ ಎಂಎಲ್​ಸಿ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ಮೂರು ಬಾರಿ ಜೆಡಿಎಸ್​​ ಪ್ರತಿನಿಧಿಸಿದ್ದರು. ಪುಟ್ಟಣ್ಣ ಗೆಲ್ಲುವ ಅಭ್ಯರ್ಥಿ. ಹೀಗಾಗಿ ಅವರನ್ನೇ ಬಿಜೆಪಿ  ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದೇನೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಪುಟ್ಟಣ್ಣ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಎಸ್​ವೈ ಹೇಳಿದರು. 

ಈ ವೇಳೆ ಮಾತನಾಡಿದ ಎಂಎಲ್​ಸಿ ಪುಟ್ಟಣ್ಣ, "ನಾನು ಶೀಘ್ರದಲ್ಲೆ ಬಿಜೆಪಿ ಸೇರುತ್ತೇನೆ. ಟಿಕೆಟ್ ಘೋಷಣೆ ಮಾಡಿದ್ದು ಸಂತೋಷ ತಂದಿದೆ. ನನಗೆ ಈ ಚುನಾವಣೆಯಲ್ಲಿ ಯಾವುದೇ ಫೈಟ್ ಇರುವುದಿಲ್ಲ. ನಾನು ವೈಯಕ್ತಿಕ ವರ್ಚಸ್ಸಿನಿಂದ ಮೂರು ಬಾರಿ ಗೆದ್ದಿದ್ದೇನೆ. ಜೆಡಿಎಸ್‌ ಬಿಟ್ಟ ಮಾತ್ರಕ್ಕೆ ಈ ಚುನಾವಣೆಯಲ್ಲಿ ಬೇರೆ ಪರಿಣಾಮ ಉಂಟಾಗಲ್ಲ. ಬಿಜೆಪಿ ಅಭ್ಯರ್ಥಿ ಆಗಿರುವುದಕ್ಕೆ ನನ್ನ ಶಕ್ತಿ ಹೆಚ್ಚಿದೆ," ಎಂದರು.

ಜನವರಿಯಲ್ಲಿ ಶಬರಿಮಲೆ ಪ್ರವೇಶಿಸಿದ್ದ ಬಿಂದುಗೆ ಖಾರದ ಪುಡಿ ಎರಚಿದ ಅಯ್ಯಪ್ಪ ಭಕ್ತರು; ಆಸ್ಪತ್ರೆಗೆ ದಾಖಲು

"ಉಪಚುನಾವಣೆ ಫಲಿತಾಂಶದ ನಂತರ ಜೆಡಿಎಸ್‌ನ ಇನ್ನು ಕೆಲವರು ಬಿಜೆಪಿಗೆ ಬರಬಹುದು. ಬರುತ್ತೇವೆ ಎಂದು ಹಿಂದೆ ಕೆಲವರು ಹೇಳಿದ್ದರು‌. ಚುನಾವಣೆ ಫಲಿತಾಂಶದ ನಂತರ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಉಪಚುನಾವಣೆ ಫಲಿತಾಂಶದ ನಂತರ ವಲಸೆ ಶುರು," ಎಂದು ಎಂಎಲ್​ಸಿ ಪುಟ್ಟಣ್ಣ ಸೂಚನೆ ಕೊಟ್ಟರು.

ಬೆಂಗಳೂರಿನಲ್ಲಿ ಹುಳಿಮಾವು ಕೆರೆ ಕೋಡಿ ಹೊಡೆದ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, "ಇಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ. ಪ್ರಕರಣದಲ್ಲಿ ಅಧಿಕಾರಗಳ ನಿರ್ಲಕ್ಷ್ಯ ಕಾಣುತ್ತಿದೆ. ಇದರ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತಪ್ಪಿಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ. ಕೆರೆಗಳು ತುಂಬಿದಾಗ ಪರಿಶೀಲನೆ ನಡೆಸುವುದು ಅಧಿಕಾರಿಗಳ ಕರ್ತವ್ಯ. ಆ ಕರ್ತವ್ಯದಲ್ಲಿ ಲೋಪ ಉಂಟಾದಂತೆ ಕಾಣುತ್ತಿದೆ. ನಾನು ಸ್ಥಳ ಪರಿಶೀಲನೆ ಮಾಡಿ ಪರಿಶೀಲನೆ ಮಾಡುತ್ತೇನೆ," ಎಂದು ಹೇಳಿದರು.

ಜೆಡಿಎಸ್​ನವರು ಕೋತಿಗಳು, ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ; ಜಿ ಪರಮೇಶ್ವರ್ ವ್ಯಂಗ್ಯ

ಇದೇ ವೇಳೆ, ಸಿಎಂ ಬಿಎಸ್​ವೈ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಇನ್ನು ಮೂರುವರೆ ವರ್ಷ ವಿಪಕ್ಷ ನಾಯಕನಾಗೇ ಇರಬೇಕು. ಅಧಿಕಾರ ಇಲ್ಲದ ಹತಾಶೆಯಿಂದ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಜನರಿಗೆ ಚುನಾವಣೆ ಬೇಡ. ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯೂ ಇಲ್ಲ. ಸಿದ್ದರಾಮಯ್ಯರ ಇಂತ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಾನು ಗಂಭೀರವಾಗಿ ಹೇಳುತ್ತಿದ್ದೇನೆ 15ಕ್ಕೆ 15 ಸ್ಥಾನ ಬಿಜೆಪಿ ಗೆಲ್ಲಲಿದೆ. ನಾನು ಇದನ್ನು ಪ್ರಚಾರಕ್ಕಾಗಿ  ಹೇಳುತ್ತಿಲ್ಲ. ಅಳೆದು ತೂಗಿ ಈ ಮಾತನ್ನ ಹೇಳುತ್ತಿದ್ದೇನೆ ಎಂದರು.
First published: November 26, 2019, 10:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading