ಶಮನವಾಗದ ಜೆಡಿಎಸ್ ಆಂತರಿಕ ಕ್ಷೋಭೆ; ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೊರಕ್ಕೆ, ಮತ್ತಷ್ಟು ಶಾಸಕರು ಪಕ್ಷಾಂತರ ಸಾಧ್ಯತೆ?

ಜೆಡಿಎಸ್​ ಪಕ್ಷದಿಂದ ಸತತ ಮೂರು ಬಾರಿ ಬೆಂಗಳೂರು ಶಿಕ್ಷಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಿರುವ ಪುಟ್ಟಣ್ಣ ಅವರ ಅವಧಿ 2020ರ ವೇಳೆಗೆ ಅಂತ್ಯವಾಗಲಿದೆ. ಅಲ್ಲದೆ, 2017ರಲ್ಲಿ ಜಮೀರ್ ಅಹಮದ್ ಸೇರಿದಂತೆ 9 ಜನ ಜೆಡಿಎಸ್​ ರೆಬೆಲ್​ ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾಗ ಆ ಪಟ್ಟಿಯಲ್ಲಿ ಪುಟ್ಟಣ್ಣ ಹೆಸರು ಸಹ ತಳುಕು ಹಾಕಿಕೊಂಡಿತ್ತು.

MAshok Kumar | news18-kannada
Updated:October 30, 2019, 5:31 PM IST
ಶಮನವಾಗದ ಜೆಡಿಎಸ್ ಆಂತರಿಕ ಕ್ಷೋಭೆ; ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೊರಕ್ಕೆ, ಮತ್ತಷ್ಟು ಶಾಸಕರು ಪಕ್ಷಾಂತರ ಸಾಧ್ಯತೆ?
ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ.
  • Share this:
ರಾಮನಗರ (ಅಕ್ಟೋಬರ್ 30); ಜೆಡಿಎಸ್​ ಪಕ್ಷದೊಳಗಿನ ರೆಬೆಲ್​ ಶಾಸಕರ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ ಮತ್ತೆ ಪಕ್ಷವನ್ನು ಕಟ್ಟುವ ಸಲುವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಶಾಸಕರಿಗೆ ವಿದೇಶ ಪ್ರವಾಸ ಸೇರಿದಂತೆ ಹಲವಾರು ಕಸರತ್ತುಗಳಲ್ಲಿ ತೊಡಗಿರುವ ಇದೇ ದಿನದಲ್ಲಿ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ ತಾನು ಪಕ್ಷ ಬಿಡಲು ತೀರ್ಮಾನಿಸಿದ್ದೇನೆ, ಇನ್ನೂ ಹಲವು ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ಜೆಡಿಎಸ್​ ವರಿಷ್ಠರಿಗೆ ಆಘಾತ ನೀಡಿದ್ದಾರೆ. 

ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯರು ಇಂದು ಪಕ್ಷದ ವರಿಷ್ಠರ ವಿರುದ್ಧ ಕಿಡಿಕಾರಿದ್ದು, "ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಪಕ್ಷದ ವರಿಷ್ಠರಾದ ಕುಮಾರಸ್ವಾಮಿ ತಮ್ಮ ವಿರುದ್ಧ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ" ಎಂದು ಆರೋಪಿಸಿದ್ದರು. ಅಲ್ಲದೆ, ವಿಧಾನ ಪರಿಷತ್​ನಲ್ಲಿ ತಮಗೆ ಪ್ರತ್ಯೇಕ ಹಾಸನ ನೀಡುವಂತೆಯೂ ಉಪ ಸಭಾಪತಿ ಬಳಿ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಿಗೆ ಮತ್ತೋರ್ವ  ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ ಬಹಿರಂಗವಾಗಿ ಪಕ್ಷವನ್ನು ತ್ಯಜಿಸುವ ಮಾತನ್ನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್​ ಪಕ್ಷದಿಂದ ಸತತ ಮೂರು ಬಾರಿ ಬೆಂಗಳೂರು ಶಿಕ್ಷಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಿರುವ ಪುಟ್ಟಣ್ಣ ಅವರ ಅವಧಿ 2020ರ ವೇಳೆಗೆ ಅಂತ್ಯವಾಗಲಿದೆ. ಅಲ್ಲದೆ, 2017ರಲ್ಲಿ ಜಮೀರ್ ಅಹಮದ್ ಸೇರಿದಂತೆ 9 ಜನ ಜೆಡಿಎಸ್​ ರೆಬೆಲ್​ ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾಗ ಆ ಪಟ್ಟಿಯಲ್ಲಿ ಪುಟ್ಟಣ್ಣ ಹೆಸರು ಸಹ ತಳುಕು ಹಾಕಿಕೊಂಡಿತ್ತು. ಪುಟ್ಟಣ್ಣ ವಿಧಾನ ಪರಿಷತ್​ ಉಪ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಂದು ಮಾಧ್ಯಮದಲ್ಲಿ ಬಹಿರಂಗ ಹೇಳಿಕೆ ನೀಡಿದ್ದ ಪುಟ್ಟಣ್ಣ, "ಬಿಜೆಪಿ ನನಗೆ ಯಶವಂತಪುರದಿಂದ ಎಂಎಲ್​ಎ ಟಿಕೆಟ್​ ನೀಡುವ ಭರವಸೆ ನೀಡಿದ್ದು, ನಾನು ಬಿಜೆಪಿ ಪಕ್ಷಕ್ಕೆ ಹೋಗುವ ಕುರಿತು ಆಲೋಚಿಸುತ್ತಿದ್ದೇನೆ ಎಂದು ತಿಳಿಸಿದ್ದರು. ತದನಂತರದ ದಿನಗಳಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರು ಜೆಡಿಎಸ್​ ಪಕ್ಷದಲ್ಲೇ ಉಳಿದಿದ್ದರು. ಆದರೆ, ಇದೀಗ ಅವರ ಅಧಿಕಾರ ಅವಧಿ ಮುಕ್ತಾಯದ ಅಂಚಿನಲ್ಲಿದ್ದು ಮತ್ತೆ ಪಕ್ಷ ತ್ಯಜಿಸುವ ಮಾತುಗಳನ್ನಾಡುತ್ತಿದ್ದಾರೆ.

ಜೆಡಿಎಸ್​ ಪಕ್ಷ ತೊರೆಯುವ ಕುರಿತು ರಾಮನಗರದಲ್ಲಿ ಇಂದು ಹೇಳಿಕೆ ನೀಡಿರುವ ಪುಟ್ಟಣ್ಣ, "ಪಕ್ಷದಲ್ಲಿ ಯಾರಿಗೆ ನೋವಾದರೂ, ಯಾರೇ ಸತ್ತರು ವರಿಷ್ಠರಿಗೆ ಏನೂ ಅನಿಸಲ್ಲ. ಹೀಗಾಗಿ ಪಕ್ಷದಲ್ಲಿ ಸಾಕಷ್ಟು ಜನ ಶಾಸಕರು ನೋವು ಅನುಭವಿಸಿದ್ದು, ಬಹುತೇಕ ಎಲ್ಲಾ ಶಾಸಕರೂ ಪಕ್ಷ ತ್ಯಜಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಹಿರಿಯ ನಾಯಕ ಬಸವರಾಜ ಹೊರಟ್ಟಿ ಜೊತೆಗೂ ಚರ್ಚೆ ಮಾಡಿ ಮುಂದಿನ ನಡೆಯನ್ನು ತೀರ್ಮಾನಿಸಲಾಗುವುದು" ಎಂದು ತಿಳಿಸಿದ್ದಾರೆ.

ಒಟ್ಟಾರೆ ಜೆಡಿಎಸ್​ ಪಕ್ಷದಲ್ಲಿ ಉಂಟಾಗಿರುವ ಈ ಆಂತರಿಕ ಕ್ಷೋಭೆ ವರಿಷ್ಠರಾದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಹೊಸ ತಲೆ ನೋವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ : ಶಾಲಾ ಪಠ್ಯದಿಂದಲೇ ಟಿಪ್ಪು ವಿಚಾರವನ್ನು ತೆಗೆಯುವ, ಜಯಂತಿ ರದ್ದು ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ; ಹೆಚ್​ಡಿಕೆ

First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ