ಜೆಡಿಎಸ್​ನಲ್ಲಿ ಒಂದೇ ಸ್ಥಾನಕ್ಕೆ 29 ಆಕಾಂಕ್ಷಿಗಳು; ಜೂನ್ 17ರಂದು ಅಭ್ಯರ್ಥಿ ಆಯ್ಕೆ

ಟಿಕೆಟ್ ಆಕಾಂಕ್ಷಿಗಳ ಪೈಕಿ ಕೋನರೆಡ್ಡಿ, ಕುಪೇಂದ್ರ ರೆಡ್ಡಿ, ಶರವಣ, ವೈಎಸ್ವಿ ದತ್ತ ಸೇರಿದಂತೆ 29 ಜನರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡುವಂತೆ ಇವತ್ತಿನ ಜೆಡಿಎಲ್ಪಿ ಸಭೆಯಲ್ಲಿ ಶಾಸಕರು ಸಲಹೆ ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

  • Share this:
ಬೆಂಗಳೂರು(ಜೂನ್ 15): ವಿಧಾನ ಪರಿಷತ್ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳಕ್ಕೆ ದಕ್ಕಲಿರುವ ಒಂದೇ ಒಂದು ಸ್ಥಾನಕ್ಕೆ ಆಕಾಂಕ್ಷಿತರ ದಂಡೇ ನೆರೆದಿದೆ. ತಮ್ಮನ್ನು ಅಭ್ಯರ್ಥಿಯನ್ನಾಗಿ ಆರಿಸುವಂತೆ ಬರೋಬ್ಬರಿ 29 ಜೆಡಿಎಸ್ ನಾಯಕರು ಅರ್ಜಿ ಹಾಕಿದ್ದಾರೆ. ಇವತ್ತು ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಪರಿಷತ್ ಸ್ಥಾನಕ್ಕೆ ಪ್ರಯತ್ನಿಸುತ್ತಿರುವವರಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಹಿರಿಯ ಮುಖಂಡರಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಇವತ್ತು ನಡೆದ ಜೆಡಿಎಲ್​ಪಿ ಸಭೆಯಲ್ಲಿ ಎಲ್ಲಾ ಶಾಸಕರೂ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ದೆಯಾದ ರೀತಿಯಲ್ಲೇ ಜೆಡಿಎಸ್​ನ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಪರಿಷತ್ ಟಿಕೆಟ್ ಕೊಡಬೇಕು ಎಂಬ ಅಭಿಪ್ರಾಯವೂ ಈ ಸಭೆಯಲ್ಲಿ ವ್ಯಕ್ತವಾಯಿತು.

ಟಿಕೆಟ್ ಆಕಾಂಕ್ಷಿಗಳ ಪೈಕಿ ಕೋನರೆಡ್ಡಿ, ಕುಪೇಂದ್ರ ರೆಡ್ಡಿ, ಶರವಣ, ವೈಎಸ್​ವಿ ದತ್ತ ಅವರೂ ಇದ್ದಾರೆ. ಇವತ್ತಿನ ಸಭೆಯಲ್ಲಿ ಎಲ್ಲಾ ಜೆಡಿಎಸ್ ಶಾಸಕರ ಅಭಿಪ್ರಾಯ ಸಂಗ್ರಹಣೆ ಆಗಿದೆ. ಆದರೆ, ಅಂತಿಮ ನಿರ್ಧಾರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರೇ ತೆಗೆದುಕೊಳ್ಳಲಿದ್ದಾರೆ. ಜೂನ್ 17, ಬುಧವಾರದಂದು ವಿಧಾನಪರಿಷತ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪರಿಷತ್ ಚುನಾವಣೆ: 4 ಸ್ಥಾನಗಳಿಗೆ 10 ಅಭ್ಯರ್ಥಿಗಳು - ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಟ್ಟಿ ಸಿದ್ಧಜೂನ್ 29ರಂದು ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದ್ಯದ ಬಲಾಬಲದ ಆಧಾರದ ಮೇಲೆ 4 ಸ್ಥಾನಗಳು ಬಿಜೆಪಿಗೆ ಒಲಿಯಬಹುದು. ಕಾಂಗ್ರೆಸ್​ಗೆ 2 ಮತ್ತು ಜೆಡಿಎಸ್​ಗೆ 1 ಸ್ಥಾನಗಳು ಸಿಗಬಹುದು.
First published: