news18-kannada Updated:December 15, 2020, 4:46 PM IST
ಬಸವರಾಜ್ ಹೊರಟ್ಟಿ
ಬೆಂಗಳೂರು(ಡಿಸೆಂಬರ್. 15) : ಜೆಡಿಎಸ್ ನಿಂದ ಮನವಿಯನ್ನು ಕೊಟ್ಟಿದ್ದೀವಿ. ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದ್ದು, ಕಾನೂನಾತ್ಮವಾಗಿ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಬಿಜೆಪಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಪತ್ರದ ಮೂಲಕ ನೀಡಿದ್ದೇವೆ. ಕುರ್ಚಿಬಿಡಬಾರದು ಅಂತ ಕಾಂಗ್ರೆಸ್ ಅಂದುಕೊಂಡೇ ಈ ರೀತಿ ಮಾಡಿದೆ ಎಂದು ಜೆಡಿಎಸ್ ಎಂಎಲ್ಸಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ರಾಜ್ಯಪಾಲಯ ಭೇಟಿ ಬಳಿಕ ಮಾತನಾಡಿದ ಅವರು, ಸಭಾಪತಿಗೆ ಬಹುಮತ ಇಲ್ಲ, ಹೀಗಾಗಿ ಅವರಿಗೆ ನೀವು ನಿರ್ದೇಶನ ಕೊಡಬೇಕು ಎಂದು ರಾಜ್ಯಪಾಲರ ಬಳಿ ಮನವಿ ಮಾಡಿದ್ದೇವೆ. ಕಾನೂನು ಸಲಹೆಗಾರರ ಸಲಹೆ ಕೇಳಿ ಈ ಬಗ್ಗೆ ತೀರ್ಮಾನ ಮಾಡುವ ಭರವಸೆ ಕೊಟ್ಟಿದ್ದಾರೆ. ಸರ್ಕಾರ ಈಗಾಗಲೇ ಅವರಿಗೆ ಬಹುಮತ ಇಲ್ಲ ಎಂದು ತಿಳಿಸಿದೆ. ಹೀಗಾಗಿ ಬೆಲ್ ಆಯ್ತು, ಅವರೇ ಬರ್ತಾರೆ ಅಂತಾ ಗೊತ್ತಾಗಿಲ್ಲ. ಅದಕ್ಕಾಗಿ ಉಪ ಸಭಾಪತಿಯವರು ಪೀಠದಲ್ಲಿ ಕುಳಿತ್ತಿದ್ದರು ಎಂದು ತಿಳಿಸಿದರು.
ಸರ್ಕಾರದ ಸೂಚನೆಯಂತೆ ಉಪ ಸಭಾಪತಿ ಗಳು ಪೀಠದಲ್ಲಿ ಕುಳಿತಿದ್ದರು. ಕಾಂಗ್ರೆಸ್ ನವರು ಏನು ಹೇಳೋದು ನಮ್ಮನ್ನ ಬಿಜೆಪಿಗೆ ಬಿ ಟೀಮ್ ಅಂತಾ. ನಾವೇ ಈ ಮಾತನ್ನು ಓಪನ್ ಆಗಿ ಹೇಳೆ ಬಿಟ್ಟಿದ್ದೇವೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಅಂತಾ ಅವರು ನಮ್ಮನ್ನು ಬಿ ಟೀಮ್ ಆದರೂ ಹೇಳಲಿ, ಸಿ ಟೀಮ್ ಅಂತಾ ಹೇಳಲಿ, ಈಗಾಗಲೇ ನಾವು ಅವರಿಗೆ ಬೆಂಬಲ ಕೊಟ್ಟಿರುವಾಗ ಇನ್ನೂ ಸಭಾಪತಿಗಳಿಗೆ ಏನು ಕೆಲಸ ಇರುತ್ತದೆ. ನೈತಿಕವಾಗಿ ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದರು.
ಇದನ್ನೂ ಓದಿ :
ಪ್ರತಿ ಕ್ವಿಂಟಲ್ ತೊಗರಿಗೆ 7500 ರೂಪಾಯಿ ಬೆಲೆಗೆ ಆಗ್ರಹ ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕಾಂಗ್ರೆಸ್
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿ ಸಚಿವ ಜೆ ಸಿ ಮಾಧುಸ್ವಾಮಿ, ಅವಿಶ್ವಾಸ ಮಂಡನೆ ಕೊಡ್ತಾರೆ ಅಂತಾ ಅಂದುಕೊಂಡಿದ್ದೀವಿ. ಚರ್ಚೆ ಗೆ ಅನುವು ಮಾಡಿಕೊಟ್ಟಿಲ್ಲ. ಏಕಾಏಕಿ ಕಾಂಗ್ರೆಸ್ ಸದಸ್ಯರು ಅನಾಗರಿಕ ವರ್ತನೆ ಮಾಡಿ ಸಭಾಪತಿಯವರು ನಮ್ಮ ಮನವಿಯನ್ನು ತಿರಸ್ಕೃತ ಮಾಡಿದ್ದಾರೆ. ಅವಿಶ್ವಾಸ ಚರ್ಚೆ ಮಾಡಿದರೆ ಸಭಾಪತಿ ಸ್ಥಾನ ಹೋಗುತ್ತೆ ಎಂದು ಇಂತಹ ವರ್ತನೆ ತೋರಿದ್ದಾರೆ. ರಾಜ್ಯಪಾಲರು ಕಾನೂನಾತ್ಮಕ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರನ್ನು ಸಭಾಪತಿ ಪೀಠದಿಂದ ಕಾಂಗ್ರೆಸ್ ಸದಸ್ಯರು ಎಳೆದು ಕೆಳಗಿಳಿಸಿದ್ದು ಹಾಗೂ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಕಲಾಪ ಪ್ರವೇಶಿಸಲು ಬಿಡದೆ ಬಾಗಿಲು ಹಾಕಿ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದು ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ
Published by:
G Hareeshkumar
First published:
December 15, 2020, 4:46 PM IST