HOME » NEWS » State » JDS MLA SR SRINIVAS PRAISED KARNATAKA CM BS YEDIYURAPPA KANNADA BREAKING LATEST ONLINE NEWS TODAY LG

ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುವ ದಿಟ್ಟ ನಾಯಕ: ಹಾಡಿ ಹೊಗಳಿದ ಜೆಡಿಎಸ್​ ಶಾಸಕ

ಮುಂದುವರೆದ ಅವರು ಬಿಜೆಪಿ ಸೇರಿದ ನೂತನ ಶಾಸಕರಿಗೆ ಲೇವಡಿ ಮಾಡಿದರು. ಒಂದು ವೇಳೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗದಿದ್ದರೆ, ಅವರ ಜೀವವೇ ಹೋಗಿ ಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಎಂದು ವ್ಯಂಗ್ಯವಾಡಿದ್ದಾರೆ.

news18-kannada
Updated:January 24, 2020, 3:35 PM IST
ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುವ ದಿಟ್ಟ ನಾಯಕ: ಹಾಡಿ ಹೊಗಳಿದ ಜೆಡಿಎಸ್​ ಶಾಸಕ
ಸಿಎಂ ಯಡಿಯೂರಪ್ಪ
  • Share this:
ತುಮಕೂರು(ಜ.24): ಸಿಎಂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟನಾಯಕರು. ಅವರು ಯಾವತ್ತೂ ವಚನ ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು  ಮಾಜಿ ಸಚಿವ, ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸನ್ ಅಭಿಪ್ರಾಯಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಗೊಂದಲಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದರೆ ಯಡಿಯೂರಪ್ಪ ಪಕ್ಷಾಂತರಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದರು.

ಹೈ ಕಮಾಂಡ್ ಟೈಟ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಯಡಿಯೂರಪ್ಪರಿಗೆ ಹಿನ್ನಡೆಯಾಗಿರಬಹುದು. ಆದರೆ ಕೊಟ್ಟ ಆಶ್ವಾಸನೆಯನ್ನು ಯಡಿಯೂರಪ್ಪನವರು ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತಾರೆ ಎಂದರು. ಅಂತಹ ದಿಟ್ಟ ನಾಯಕತ್ವ ಅವರಲ್ಲಿದೆ ಎಂದು ಹಾಡಿ ಹೊಗಳಿದ್ದಾರೆ.

ಜೆಡಿಎಸ್​ ಶಾಸಕ ಎಸ್​.ಆರ್. ಶ್ರೀನಿವಾಸನ್


ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ

ಮುಂದುವರೆದ ಅವರು ಬಿಜೆಪಿ ಸೇರಿದ ನೂತನ ಶಾಸಕರಿಗೆ ಲೇವಡಿ ಮಾಡಿದರು. "ಒಂದು ವೇಳೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗದಿದ್ದರೆ, ಅವರ ಜೀವವೇ ಹೋಗಿ ಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ," ಎಂದು ವ್ಯಂಗ್ಯವಾಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಭೆಗೆ ಗೈರಾಗಿದಕ್ಕೆ ಸ್ಪಷ್ಟನೆ ಕೊಟ್ಟ ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಕಾರ್ಯಕ್ರಮ ಯಾವತ್ತೂ ತಡವಾಗಿಯೇ ಆರಂಭವಾಗುವುದು. ಪಕ್ಷದ ನಾಯಕರು 9.30ಕ್ಕೆ ಕಾರ್ಯಕ್ರಮ ಇದ್ದರೆ 11.30 ಕ್ಕೆ ಬರುತ್ತಾರೆ. ಹಾಗಾಗಿ ನಾನು ಲೇಟಾಗಿ ಹೋಗಿದ್ದೆ. ಅಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ವೇದಿಕೆ ಮೇಲೆ ಹತ್ತಲಿಲ್ಲ. ಹಾಗಂತ ನನಗೆ ಪಕ್ಷದ ವಿರುದ್ದ ಯಾವುದೇ ಅಸಮಾಧಾನ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.(ವರದಿ: ವಿಠಲ್​ ಕುಮಾರ್)

 ಟಿಕೆಟ್​ ರಹಿತ ಪ್ರಯಾಣಿಕರಿಂದ ಈ ರೈಲ್ವೆ ಅಧಿಕಾರಿ ಸಂಗ್ರಹಿಸಿದ ದಂಡದ ಮೊತ್ತ ಕೇಳಿದರೆ ಶಾಕ್​ ಆಗ್ತೀರಾ..!

 
First published: January 24, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories