JDS MLA Slaps: ಪ್ರಿನ್ಸಿಪಾಲ್ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ ಶ್ರೀನಿವಾಸ್: ವಿಡಿಯೋ ವೈರಲ್

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್​​​ ಶಾಸಕ ಎಂ ಶ್ರೀನಿವಾಸ್ ಅವರು ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಶಾಸಕ ಶ್ರೀನಿವಾಸ್ ಎಲ್ಲೆ ಮೀರಿದ ವರ್ತನೆಗೆ ಜನರು ಛೀಮಾರಿ ಹಾಕಿದ್ದಾರೆ.

ಪ್ರಿನ್ಸಿಪಾಲ್​ಗೆ ಹೊಡೆದ ಶಾಸಕ

ಪ್ರಿನ್ಸಿಪಾಲ್​ಗೆ ಹೊಡೆದ ಶಾಸಕ

  • Share this:
ಮಂಡ್ಯ: ಸಾರ್ವಜನಿಕ ಜೀವನದಲ್ಲಿ ಇಲ್ಲವೇ ಕರ್ತವ್ಯವ ವೇಳೆ ಜನಪ್ರತಿನಿಧಿಗಳ (People Representative) ವರ್ತನೆ (Behaviour) ಸಾಕಷ್ಟು ಸಲ ಚರ್ಚೆಗೆ ಗ್ರಾಸವಾಗುತ್ತೆ. ಒಳ್ಳೆಯ ಉದ್ದೇಶವಿದ್ದರೂ ವರ್ತಿಸುವ ರೀತಿ ಟೀಕೆಗೆ ಗುರಿಯಾಗುತ್ತೆ. ಶಾಸಕರು (MLAs) ಇಲ್ಲವೇ ಸಚಿವರು (Ministers) ಸರ್ಕಾರಿ ಅಧಿಕಾರಿಗಳಿಗೆ (Govt Officials)  ತರಾಟೆ ತೆಗೆದುಕೊಳ್ಳುವುದು. ಕೆಲಸ ಸರಿಯಾಗಿ ಮಾಡದವರಿಗೆ ಕ್ಲಾಸ್​​​ ತೆಗೆದುಕೊಳ್ಳುವುದು ಕಾಮನ್​​. ಆದರೆ ಶಿಷ್ಠಾಚಾರವನ್ನು ಮೀರಿ ದೈಹಿಕ ಹಲ್ಲೆ ಮಾಡುವಂತಿಲ್ಲ. ದೈಹಿಕ ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಕಾನೂನು ಸಾಮಾನ್ಯರಿಂದ ಹಿಡಿದು ಶಾಸಕರು, ಸಚಿವರಿಗೂ ಅನ್ವಯಿಸುತ್ತೆ. ಆದರೆ ಮಂಡ್ಯದಲ್ಲಿ ನಡೆದಿರುವ ಘಟನೆ ಏನು ಆಗಬಾರದಿತ್ತು ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಂತಿದೆ. ಶಾಸಕರು ಕಾಲೇಜ್​​ವೊಂದರ ಪ್ರಿನ್ಸಿಪಾಲ್​​ ಕಪಾಳಕ್ಕೆ ಹೊಡೆಯುವ ಘಟನೆಯ ವಿಡಿಯೋ ಸದ್ಯ ರಾಷ್ಟ್ರ ಮಟ್ಟದಲ್ಲಿ ವೈರಲ್​ ಆಗಿದೆ. ಏನಿದು ಘಟನೆ ಎಂಬುವುದರ ಮಾಹಿತಿ ಇಲ್ಲಿದೆ.

ಏನಿದು ಘಟನೆ?

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್​​​ ಶಾಸಕ ಎಂ ಶ್ರೀನಿವಾಸ್ ಅವರು ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕಂಪ್ಯೂಟರ್ ಲ್ಯಾಬ್‌ಗಾಗಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಪಷ್ಟ ಉತ್ತರ ನೀಡದ ಕಾರಣಕ್ಕೆ ಸಹೋದ್ಯೋಗಿಗಳ ಎದುರೇ ಶಾಸಕರು ಪ್ರಿನ್ಸಿಪಲ್​ ಮೇಲೆ ಹಲ್ಲೆ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಶಾಸಕ ಎಂ ಶ್ರೀನಿವಾಸ್ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಶಾಸಕ ಶ್ರೀನಿವಾಸ್ ಎಲ್ಲೆ ಮೀರಿದ ವರ್ತನೆಗೆ ಜನರು ಛೀಮಾರಿ ಹಾಕಿದ್ದಾರೆ.





ಪ್ರತ್ಯಕ್ಷದರ್ಶಿಗಳ ಪ್ರಕಾರ, ಐಟಿಐ ಕಾಲೇಜು ಪ್ರಾರಂಭದ ಸಮಯದಲ್ಲಿ ಪ್ರಾಂಶುಪಾಲ ನಾಗನಾಡ್ ಅವರು ಲ್ಯಾಬ್‌ನಲ್ಲಿನ ಕೆಲಸದ ಡೇಟಾವನ್ನು ನೀಡಲು ಪರದಾಡಿದ್ದಾರೆ. ಇದರಿಂದ ಶಾಸಕ ಶ್ರೀನಿವಾಸ್ ಕೋಪಗೊಂಡರು. ಅವರ ಸಹೋದ್ಯೋಗಿಗಳು ಮತ್ತು ಮಹಿಳೆ ಸೇರಿದಂತೆ ಸ್ಥಳೀಯ ರಾಜಕಾರಣಿಗಳ ಮುಂದೆ ಎರಡು ಬಾರಿ ಕಪಾಳಮೋಕ್ಷ ಮಾಡಿದರು. ಜನರು ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವಾಗ ಪ್ರಾಂಶುಪಾಲರು ಆಘಾತಕ್ಕೊಳಗಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಡಿಸಿ ಗಮನಕ್ಕೆ ತರುವುದಾಗಿ ಭರವಸೆ

ಈ ಘಟನೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸರಕಾರಿ ನೌಕರರ ಸಂಘದ ಮಂಡ್ಯ ಜಿಲ್ಲಾ ಅಧ್ಯಕ್ಷ ಶಂಭುಗೌಡ ತಿಳಿಸಿದ್ದಾರೆ. ಗೌಡರು ಸಂಘದ ತುರ್ತು ಸಭೆ ಕರೆದು ಪ್ರಾಂಶುಪಾಲರ ಮೇಲಿನ ಹಲ್ಲೆಯ ವಿವರ ಪಡೆದರು. ಅವರು ಹೆಚ್ಚುವರಿಯಾಗಿ ಪ್ರಿನ್ಸಿಪಾಲ್ ನಾಗಾನಂದ್ ಅವರನ್ನು ಭೇಟಿ ಮಾಡಿದರು ಮತ್ತು ಘಟನೆಯ ವಿವರಗಳನ್ನು ಪಡೆದರು. ಅವರಿಗೆ ಸಂಪೂರ್ಣ ಸಹಾಯದ ಭರವಸೆ ನೀಡಿದರು.

ಇದನ್ನೂ ಓದಿ: Diganth Health Report: 3 ಗಂಟೆಗಳ ಕಾಲ ಆಪರೇಷನ್ ಬಳಿಕ ದಿಗಂತ್ ಹೇಳಿದ್ದೇನು? ಈಗ ಹೇಗಿದ್ದಾರೆ ‘ಮನಸಾರೆ’ ನಟ?

ಪ್ರಿನ್ಸಿಪಾಲ್​ ಅವರದ್ದು ತಪ್ಪೇ ಇರಬಹುದು, ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಶಾಸಕರಿಗಿದೆ. ಹಲ್ಲೆ ಮಾಡುವ ಅಧಿಕಾರ ಅವರಿಗಿಲ್ಲ. ತಮ್ಮಗಿದ್ದ ಅಸಮಾಧಾನವನ್ನು ಮಾತಿನಲ್ಲೇ ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬಹುದಿತ್ತು. ಆದರೆ ಹಿಡಿತ ಇಲ್ಲದಂತೆ ಕಪಾಳಕ್ಕೆ ಹೊಡೆಯಲು ಮುಂದಾಗಿದ್ದು ಅಕ್ಷಮ್ಯ. ವಿಡಿಯೋ ನೋಡಿದ ನೆಟ್ಟಿಗರು ಸಹ ಶಾಸಕರ ವರ್ತನೆಯನ್ನು ಖಂಡಿಸಿದ್ದಾರೆ.
Published by:Kavya V
First published: