'ಕಳಿಸುವುದಿದ್ದರೆ ಎಲ್ಲರನ್ನೂ ಕಳಿಸಲಿ, ಪೌರತ್ವ ಕಾಯ್ದೆಗೆ ನಮ್ಮ ವಿರೋಧವಿದೆ'; ಶಾಸಕ ಶಿವಲಿಂಗೇಗೌಡ

ಜೆಡಿಎಸ್ ಪಕ್ಷ ಎಲ್ಲೂ ನೆಲೆಯನ್ನು ಕಳೆದುಕೊಂಡಿಲ್ಲ. ಕೆ.ಆರ್.ಪೇಟೆಯಲ್ಲೂ ನಮಗೆ ಇರೋದು ಇದ್ದೇ ಇದೆ. ಏನಾದ್ರೂ ಹೇಳಿದ್ರೆ,ಕೈಲಾಗದವರು ಅಂತಾರೆ. ಅದಕ್ಕೆ ಈಗ ಏನನ್ನೂ ಹೇಳೋಕೆ ಹೋಗಲ್ಲ. ಇವಿಎಂ ಬಗ್ಗೆ ನಮಗೆ ಸಂದೇಹವಿಲ್ಲ ಎಂದರು.

ಶಿವಲಿಂಗೇಗೌಡ

ಶಿವಲಿಂಗೇಗೌಡ

  • Share this:
ಬೆಂಗಳೂರು(ಡಿ.12): ಕೇಂದ್ರದ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲೂ ಸಹ ವಿರೋಧ ಪಕ್ಷಗಳು ಕೇಂದ್ರದ ನಿರ್ಧಾರಕ್ಕೆ ಕಿಡಿಕಾರುತ್ತಿವೆ. ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಯನ್ನು ಖಂಡಿಸಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಕ್ರಮವಾಗಿ ನೆಲೆಸಿದ್ದರೆ ಬೇಕಾದರೆ ಕಳಿಸಲಿ. ಬಂದು ಇಲ್ಲೇ ನೆಲೆಸಿರುವವರನ್ನು ಕಳಿಸುವುದು ಸರಿಯಲ್ಲ.  ಕಳಿಸುವುದಿದ್ದರೆ ಎಲ್ಲರನ್ನೂ ಕಳಿಸಲಿ. ಕೆಲವರನ್ನು ಬಿಟ್ಟು, ಕೆಲವರನ್ನ ಕಳಿಸಿದರೆ ಹೇಗೆ? ಎಲ್ಲರಿಗೂ ಪೌರತ್ವ ನೀಡಿ ಆದರ್ಶವಾಗಲಿ. ಎಲ್ಲರನ್ನೂ ಕಳಿಸಿ, ಇಲ್ಲವೇ ಎಲ್ಲರನ್ನೂ ಇರಲು ಬಿಡಿ. ಈ ಕಾಯ್ದೆಗೆ ಜೆಡಿಎಸ್​​ನ ತೀವ್ರ ವಿರೋಧವಿದೆ ಎಂದು ಶಾಸಕರು ಹೇಳಿದ್ದಾರೆ.

ನೇಣುಗೇರಿಸುವ ಕೆಲಸಕ್ಕೆ ಇಬ್ಬರು ಬೇಕೆಂದು ತಿಹಾರ್ ಜೈಲಿಂದ ಮನವಿ; ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರದಲ್ಲೇ ಗಲ್ಲುಶಿಕ್ಷೆ?

ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ ಶಾಸಕ ಶಿವಲಿಂಗೇಗೌಡ, ಅವರ ಆರೋಗ್ಯ ಕೆಟ್ಟಿದೆ ಅನ್ನೋದು ಗೊತ್ತಾಯ್ತು. ನಾವು ಅವರನ್ನು ಭೇಟಿ ಮಾಡಬೇಕು. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟವರು. ಅವರ ರಾಜಕೀಯ ಸೇವೆ ಇನ್ನೂ ಬೇಕಿದೆ. ಬೇಗ ಅವರು ಗುಣಮುಖರಾಗಬೇಕು. ಭಗವಂತ ಅವರಿಗೆ  ಒಳ್ಳೆಯದು ಮಾಡಲಿ ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್​ ಸೋಲು ಅನುಭವಿಸಿದ ವಿಚಾರವಾಗಿ, ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಯಾವ ಪಕ್ಷ ಅಧಿಕಾರದಲ್ಲಿರುತ್ತೆ ಅದಕ್ಕೆ ಅವಕಾಶ ಹೆಚ್ಚು. ಜನ ಯಡಿಯೂರಪ್ಪನವರನ್ನ ಬೆಂಬಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಷ್ಟೇ. ಹೇಗೆ ಗೆದ್ದರೂ , ಏನು ಮಾಡಿದರೂ ಹೇಳೋಕೆ ಆಗಲ್ಲ. ಅದು ನಿಮಗೂ ಚೆನ್ನಾಗಿ ಗೊತ್ತಿದೆ. ಮಂತ್ರಿ ಮಾಡ್ತೇವೆ ಅಂತ ಹೇಳಿ ಜನರನ್ನು ಮಂತ್ರ ಮಾಡಿದ್ದಾರೆ ಎಂದು ಕಿಡಿಕಾರಿದರು.

‘ರಾಹುಲ್​​ ಗಾಂಧಿಯೋರ್ವ ಮೂರ್ಖ; ಪಾಕಿಸ್ತಾನದ ಏಜೆಂಟ್​​ನಂತೆ ಮಾತಾಡುತ್ತಾರೆ‘; ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​​​

ಜೆಡಿಎಸ್ ಪಕ್ಷ ಎಲ್ಲೂ ನೆಲೆಯನ್ನು ಕಳೆದುಕೊಂಡಿಲ್ಲ. ಕೆ.ಆರ್.ಪೇಟೆಯಲ್ಲೂ ನಮಗೆ ಇರೋದು ಇದ್ದೇ ಇದೆ. ಏನಾದ್ರೂ ಹೇಳಿದ್ರೆ,ಕೈಲಾಗದವರು ಅಂತಾರೆ. ಅದಕ್ಕೆ ಈಗ ಏನನ್ನೂ ಹೇಳೋಕೆ ಹೋಗಲ್ಲ. ಇವಿಎಂ ಬಗ್ಗೆ ನಮಗೆ ಸಂದೇಹವಿಲ್ಲ ಎಂದರು.
Published by:Latha CG
First published: