ನೀವೇನು ಹರಿಶ್ಚಂದ್ರನ ಮೊಮ್ಮಕ್ಕಳಾ? ಎಲ್ಲದಕ್ಕೂ ತಡೆ ಹಾಕಿ ಮನೆ ಹಾಳು ಮಾಡಿದ್ದೀರಿ; ಅರಣ್ಯಾಧಿಕಾರಿಗಳ ವಿರುದ್ಧ ಶಾಸಕ ಶಿವಲಿಂಗೇಗೌಡ ಕಿಡಿ

ಅರಣ್ಯ ಇಲಾಖೆ ಅಧಿಕಾರಿ ಮಾತನಾಡಲು ಮುಂದಾಗುತ್ತಿದ್ದಂತೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲರಾದರು. ಅಲ್ಲಿ ಕುಡಿಯಲು ನೀರಿಲ್ಲ. ನೀವಿಲ್ಲಿ ಎಲ್ಲದಕ್ಕೂ ತಗಾದೆ ತಗೊಂಡು ಕುಳಿತಿದ್ದೀರಾ. ನಿಮ್ಮ ಅರಣ್ಯಾಧಿಕಾರಿಗಳಿಂದ ದೇಶದ ಅಭಿವೃದ್ಧಿ ಹಾಳಾಗಿದೆ, ಎಂದು ಕಿಡಿಕಾರಿದರು.

news18-kannada
Updated:January 25, 2020, 9:57 AM IST
ನೀವೇನು ಹರಿಶ್ಚಂದ್ರನ ಮೊಮ್ಮಕ್ಕಳಾ? ಎಲ್ಲದಕ್ಕೂ ತಡೆ ಹಾಕಿ ಮನೆ ಹಾಳು ಮಾಡಿದ್ದೀರಿ; ಅರಣ್ಯಾಧಿಕಾರಿಗಳ ವಿರುದ್ಧ ಶಾಸಕ ಶಿವಲಿಂಗೇಗೌಡ ಕಿಡಿ
ಜೆಡಿಎಸ್​ ಶಾಸಕ ಶಿವಲಿಂಗೇಗೌಡ
  • Share this:
ಹಾಸನ(ಜ.25): ನಿನ್ನೆ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ.

ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎತ್ತಿನ ಹೊಳೆ ಯೋಜನೆ ಪ್ರಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಯಿತು. ಈ ವೇಳೆ, ನೀರಾವರಿ ಯೋಜನೆಗೆ ಅರಣ್ಯ ಇಲಾಖೆಯ ಕೆಲವೊಂದು ನಿಯಮಗಳು ಅಡ್ಡಿಯಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಆಗ ತಮ್ಮ ಮೇಲೆ ಬಂದ ಆರೋಪಕ್ಕೆ ಸಮಜಾಯಿಷಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾದರು.

ಅರಣ್ಯ ಇಲಾಖೆ ಅಧಿಕಾರಿ ಮಾತನಾಡಲು ಮುಂದಾಗುತ್ತಿದ್ದಂತೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲರಾದರು. "ಅಲ್ಲಿ ಕುಡಿಯಲು ನೀರಿಲ್ಲ. ನೀವಿಲ್ಲಿ ಎಲ್ಲದಕ್ಕೂ ತಗಾದೆ ತಗೊಂಡು ಕುಳಿತಿದ್ದೀರಾ. ನಿಮ್ಮ ಅರಣ್ಯಾಧಿಕಾರಿಗಳಿಂದ ದೇಶದ ಅಭಿವೃದ್ಧಿ ಹಾಳಾಗಿದೆ," ಎಂದು ಕಿಡಿಕಾರಿದರು.

ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ

"ನೀವೇನು ಹರಿಶ್ಚಂದ್ರನ ಮೊಮ್ಮಕ್ಕಳಾ?," ಎಂದು ಅರಣ್ಯಾಧಿಕಾರಿಗಳಿಗೆ ಪ್ರಶ್ನಿಸಿದ ಶಿವಲಿಂಗೇಗೌಡ, "ನಮಗೆ ಎಲ್ಲವೂ ಗೊತ್ತಿದೆ. ನಿಮ್ಮ ದೆಸೆಯಿಂದ ಈ ದೇಶದಲ್ಲಿ ಒಂದೇ ಒಂದು ಪ್ರಾಜೆಕ್ಟ್ ಆಗುತ್ತಿಲ್ಲ. ನೀವು ಸಣ್ಣ-ಪುಟ್ಟದ್ದಕ್ಕೆಲ್ಲ ರೈಡ್ ಮಾಡ್ತೀರಾ. ನಿಮಗೆ ಬದಲಿ ಜಾಗ ಕೊಟ್ಟಿಲ್ಲವೇ?ಎಲ್ಲದಕ್ಕೂ ತಡೆ ಹಾಕಿ ಹಾಕಿ ಮನೆ ಹಾಳು ಮಾಡಿದ್ದೀರಾ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ನಮ್ಮಲ್ಲಿ ಆರು ಟಿಎಂಸಿ ನೀರು ಹರಿದು ಮಾರಿ ಕಣಿವೆ ಸೇರುತ್ತಿದೆ. ಅಲ್ಲಿ ನೀವೇ ಒಂದು ಚೆಕ್ ಡ್ಯಾಂ ಕಟ್ಟಿ ಎಂದು ಇವರ ಬಳಿ ಕಾಲು ಹಿಡಿಯೋದು ಒಂದೇ ಬಾಕಿ. ಪಾರ್ಲಿಮೆಂಟ್​​​​ನಲ್ಲಿ ಯಾರು ಮಾತನಾಡುತ್ತಾರೋ  ಇಲ್ಲವೋ ಗೊತ್ತಿಲ್ಲ. ಅಂತರ್ಜಲ ಕಡಿಮೆಯಾಗೋದೆ ನಿಮ್ಮಿಂದ. ಬರೀ ನೀಲಗಿರಿ ಬೆಳೆಸಿಕೊಂಡು ನಿಂತಿದ್ದೀರಿ," ಎಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದರು.

ಟರ್ಕಿಯಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ; 18 ಮಂದಿ ಸಾವು, 500 ಜನರಿಗೆ ಗಾಯಶಾಸಕ ಶಿವಲಿಂಗೇಗೌಡರ ಮಾತಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಎಂಎಲ್‌ಸಿ ಗೋಪಾಲಸ್ವಾಮಿ, ಶಾಸಕ ಬಾಲಕೃಷ್ಣ ಧ್ವನಿಗೂಡಿಸಿದರು.

 
First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ