ಚಾಮರಾಜನಗರ: ಜೆಡಿಎಸ್ನ (JDS) ಮತ್ತೊಂದು ವಿಕೆಟ್ ಪತನವಾಗಿರೋದು ಪಕ್ಕಾ ಆಗಿದೆ. ಅರಸೀಕೆರೆ (Arsikere) ಜೆಡಿಎಸ್ ಶಾಸಕ ಶಿವಲಿಂಗೇಗೌಡ (Shivalinge Gowda) ಕಾಂಗ್ರೆಸ್ (Congress) ಸೇರ್ಪಡೆ ಬಹುತೇಕ ಖಚಿತವಾಗಿದೆ ಅಂತ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayana) ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ಸಹ ಜೆಡಿಎಸ್ ತೊರೆಯಲು ಸಿದ್ಧರಿದ್ದಾರೆ ಅಂತ ಧ್ರುವನಾರಾಯಣ್ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ. ಕಳೆದ ಭಾರಿಯೂ ಜನರು ಅರ್ಥ ಮಾಡಿಕೊಂಡಿದ್ದರು, ಈ ಭಾರಿಯೂ ಅರ್ಥ ಮಾಡಿಕೊಂಡಿದ್ದಾರೆ. ಇದು ರಾಜ್ಯದ ಜನರಿಗೂ ಗೊತ್ತಿದೆ. ಸ್ಥಳೀಯವಾಗಿ ವಿರೋಧ ಹೇಳಿಕೆ ಮಾತ್ರ ಕೊಟ್ಟಿರಬಹುದು ಎಂದು ಆರೋಪಿಸಿದರು.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕರೆಂಟ್ ಫ್ರೀ; ರಾಜ್ಯದ ಪ್ರತಿಮನೆಗೂ 200 ಯೂನಿಟ್ ಉಚಿತ
ಇನ್ನು, ಟಿಕೆಟ್ಗಾಗಿ ಅರ್ಜಿ ಹಾಕಿರುವವರನ್ನು ಮಾತ್ರ ನಾವು ಪರಿಗಣಿಸುತ್ತೇವೆ. ಅರ್ಜಿ ಹಾಕದವರನ್ನು ನಾವ್ಯಾರು ಪರಿಗಣಿಸುವ ಪ್ರಶ್ನೆ ನಮಗೆ ಉದ್ಭವ ಆಗಲ್ಲ. ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಮೊದಲ ವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.
ಮಾಜಿ ಸಚಿವ ಎ.ಮಂಜು ಕೆಪಿಸಿಸಿಗೆ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ನಡೆದಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಬರುವ ನಿರೀಕ್ಷೆಯಿದೆ. ಅರಕಲಗೂಡು ಶಾಸಕರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಬಹಿರಂಗವಾಗಿಯೇ ಅಸಮಾಧಾನ ಇರೋದಾಗಿ ಹೇಳಿದ್ದ ಜೆಡಿಎಸ್ ಶಾಸಕ
ಕಳೆದ ಕೆಲ ಸಮಯದಿಂದ ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಿತ್ತಿಲ್ಲ. ಮಾಜಿ ಸಿಎಂ ಕುಮಾರ ಸ್ವಾಮಿ ಹಾಗೂ ಶಿವಲಿಂಗೇಗೌಡರ ಅವರ ನಡುವಿನ ಮುನಿಸು ಮುಂದುವರಿದಿದೆ ಎನ್ನಲಾಗಿದ್ದು, ಈ ಹಿಂದೆ ಜೆಡಿಎಸ್ ವರಿಷ್ಠ ನಡೆಯ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಬಹಿರಂಗವಾಗಿಯೇ ಶಿವಲಿಂಗೇಗೌಡ ಅವರು ಹೇಳಿದ್ದರು. ಇನ್ನು, ಜನವರಿ 21 ರಂದು ಹಾಸನ ನಗರಕ್ಕೆ ಬರಲಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಶಿವಲಿಂಗೇಗೌಡರು ಕೈ ಹಿಡಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 14ಕ್ಕೆ ನಾಗೇಶ್ ಕಾಂಗ್ರೆಸ್ಗೆ ಸೇರ್ಪಡೆ
ಇನ್ನು, ಜನವರಿ 14ರಂದು ಕಾಂಗ್ರೆಸ್ ಸೇರುತ್ತೇನೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ H ನಾಗೇಶ್ ಘೋಷಿಸಿದ್ದಾರೆ. ಜನವರಿ 9ರಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ತಾನಕ್ಕೆ ರಾಜಿನಾಮೆ ನೀಡಿದ್ದೇನೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಹೈ ಕಮಾಂಡ್ ಎಲ್ಲಿ ಸ್ಪರ್ಧೆ ಮಾಡಿ ಅಂದರು, ನಾನು ಸಿದ್ದನಿದ್ದೇನೆ. ಸದ್ಯಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಏನೂ ಮಾತಾಡಲ್ಲ ಎಂದು ನಾಗೇಶ್ ಹೇಳಿದರು.
ಸಿದ್ದರಾಮಯ್ಯ ಮತ್ತೊಮ್ಮೆ ಯೋಚಿಸೋದು ಒಳ್ಳೆದು
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವನ್ನು ಮತ್ತೊಮ್ಮೆ ಯೋಚಿಸೋದು ಒಳ್ಳೆಯದು ಅಂತ ಸಚಿವ ಅಶೋಕ್ ಹೇಳಿದ್ದಾರೆ. ಬಾದಾಮಿ, ಮೈಸೂರು ಚಾಮುಂಡೇಶ್ವರಿಯಲ್ಲಿ ಜನ ಓಡಿಸಿದ್ದಾರೆ.
ಕೋಲಾರದ ಜನ ಚುನಾವಣೆಗಿಂತ ಮುಂಚೆ ಓಡಿಸಲು ತಯಾರಾಗಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಪರಮೇಶ್ವರ್, ಕೆ.ಎಚ್ ಮುನಿಯಪ್ನ ಅವರನ್ನ ಸೋಲಿಸಿದ್ದರು. ಪಾಪ ಏನು ತಪ್ಪಿಲ್ಲದೇ ಅವರೆಲ್ಲ ಸೋತು ಹೋದ್ರೂ ಈಗ ಅವರು ಬಿಡ್ತಾರಾ? ಇವರನ್ನು ಸೋಲಿಸೋಕೆ ಅವರು ಸಜ್ಜಾಗಿದ್ದಾರೆ ಅಂತ ಅಶೋಕ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ