ಡಕಾಯಿತರಿಗೆ ಅವಮಾನ ಮಾಡಬೇಡಿ: ಸದನದಲ್ಲಿ ಶಿವಲಿಂಗೇಗೌಡ ಹಾಸ್ಯದ ಮಾತಿಗೆ ವ್ಯಂಗ್ಯವಾಗಿಯೇ ತಿರುಗೇಟು ನೀಡಿದ ಸ್ಪೀಕರ್!

ಮಧ್ಯಾಹ್ನದ ನಂತರ ಮಾತು ಆರಂಭಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು  ವಿರೋಧ ಪಕ್ಷವನ್ನು, ಆಪರೇಷನ್​ ಕಮಲ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಆಡು ಭಾಷೆಯಲ್ಲಿ ಹಾಸ್ಯದ ಧಾಟಿಯಲ್ಲಿ ರಸವತ್ತಾಗಿ ವಿವರಿಸಿದ್ದು, ಎಲ್ಲರ ಗಮನ ಸೆಳೆಯಿತು.

HR Ramesh | news18
Updated:July 19, 2019, 6:57 PM IST
ಡಕಾಯಿತರಿಗೆ ಅವಮಾನ ಮಾಡಬೇಡಿ: ಸದನದಲ್ಲಿ ಶಿವಲಿಂಗೇಗೌಡ ಹಾಸ್ಯದ ಮಾತಿಗೆ ವ್ಯಂಗ್ಯವಾಗಿಯೇ ತಿರುಗೇಟು ನೀಡಿದ ಸ್ಪೀಕರ್!
ಶಿವಲಿಂಗೇಗೌಡ
  • News18
  • Last Updated: July 19, 2019, 6:57 PM IST
  • Share this:
ಬೆಂಗಳೂರು: ಇಂದು ನಡೆದ ವಿಧಾನಸಭೆ ಅಧಿವೇಶನ ಕಲಾಪ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು. ವಿಶ್ವಾಸಮತ ಯಾಚಿಸುವಂತೆ ವಿರೋಧ ಪಕ್ಷವಾದ ಬಿಜೆಪಿ ಪಟ್ಟುಹಿಡಿದಿದ್ದರ ನಡುವೆಯೂ ಮೈತ್ರಿ ಪಕ್ಷಗಳ ನಾಯಕರು ಪ್ರಸ್ತುತ ರಾಜಕಾರಣವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ, ಸಮಯ ಕಳೆಯುವಲ್ಲಿ ಬಹುತೇಕ ಯಶಸ್ವಿಯಾದರು.

ಮಧ್ಯಾಹ್ನದ ನಂತರ ಮಾತು ಆರಂಭಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು  ವಿರೋಧ ಪಕ್ಷವನ್ನು, ಆಪರೇಷನ್​ ಕಮಲ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಆಡು ಭಾಷೆಯಲ್ಲಿ ಹಾಸ್ಯದ ಧಾಟಿಯಲ್ಲಿ ರಸವತ್ತಾಗಿ ವಿವರಿಸಿದ್ದು, ಎಲ್ಲರ ಗಮನ ಸೆಳೆಯಿತು.

ಸದನದಲ್ಲಿ ಮಾತು ಆರಂಭಿಸಿದ ಶಿವಲಿಂಗೇಗೌಡ ಅವರು, ಸ್ಪಷ್ಟ ಬಹುಮತ ಇರದಿದ್ದರೂ ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ನಾವು ಅಧಿಕಾರಿಕ್ಕೆ ಬಂದ ದಿನದಿಂದಲೂ ಇಲ್ಲಿಯವರೆಗೂ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಡಲಿಲ್ಲ. ಇಲ್ಲಿ ಇರುವ ಯಾವೊಬ್ಬ ಶಾಸಕರು ಒಂದು ದಿನವೂ ನೆಮ್ಮದಿಯಾಗಿ ಇಲ್ಲ. ನಮ್ಮನ್ನು ಕಂಡರೆ ಜನ ಚಂಬಲ್​ ಡಕಾಯಿತರಂತೆ ನೋಡುತ್ತಿದ್ದಾರೆ. ನಮ್ಮ ಹೆಂಡತಿ-ಮಕ್ಕಳು ಕೂಡ ನಮ್ಮನ್ನು ನೋಡಿ ಹೆದರುವಂತಾಗಿದೆ ಎಂದು ಹೇಳಿದರು. ಆಗ ಮಾತನಾಡಿದ ಸ್ಪೀಕರ್ ರಮೇಶ್​ ಕುಮಾರ್​ ಪಾಪ ಡಕಾಯಿತರಿಗೆ ಅವಮಾನ ಮಾಡಬೇಡಿ ಎಂದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಇದನ್ನು ಓದಿ: ಏನಿದು ರಾಷ್ಟ್ರಪತಿ ಆಡಳಿತ, ಯಾವ ಸಂದರ್ಭದಲ್ಲಿ ಹೇರಲಾಗುತ್ತದೆ; ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ಆದೇಶವೇನು?

ಮತ್ತೆ ಮಾತನಾಡಿದ ಶಿವಲಿಂಗೇಗೌಡ, ಯಾವಾಗ ಈ ಸರ್ಕಾರ ಬಿದ್ದು ಹೋಗುತ್ತದೆಯೋ ಎಂಬಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ನಾನು ಬೆಂಗಳೂರಿನಿಂದ ಅರಸೀಕೆರೆಗೆ ಹೋಗುವಾಗ ಬಾಲಕೃಷ್ಣ ಕಾಲ್​ ಮಾಡಿ ಎಂಟಿಬಿ ನಾಗರಾಜ್​ ಅವರನ್ನು ಮನವೊಲಿಸಲಾಯಿತು ಎಂದರು. ಆ ಕೂಡಲೇ ನಾನು ನೆಮ್ಮದಿಯಿಂದ ಅಲ್ಲಿಂದಲೇ ಚಿಕ್ಕತಿರುಪತಿಗೆ ಹೋಗಿ, ಅಪ್ಪಾ ಈ ಸರ್ಕಾರ ಉಳಿದರೆ ನಿನ್ನ ದೇಗುಲ ಅಭಿವೃದ್ಧಿ ಒಂದು ಕೋಟಿ ಅನುದಾನ ನೀಡುವುದಾಗಿ ಕೇಳಿಕೊಂಡೆ. ಆಗ ಕಾರಿನಲ್ಲಿ ಮರಳುವಾಗ ನರಿಯೊಂದು ಎಡದಿಂದ ಬಲಕ್ಕೆ ಹೋಯಿತು. ನನಗೆ ಖುಷಿಯಾಯಿತು. ಕೂಡಲೇ ಬಾಲಕೃಷ್ಣನಿಗೆ ಕರೆ ಮಾಡಿ, ನರಿ ಎಡದಿಂದ ಬಲಕ್ಕೆ ಹೋಯಿತು. ಕುಮಾರಣ್ಣನ ಸರ್ಕಾರ ಭದ್ರ, ಏನು ಆಗುವುದಿಲ್ಲ. ಶುಭ ಸೂಚನೆ ಎಂದು ಹೇಳಿದೆ. ಆಗ ಬಾಲಕೃಷ್ಣ, ಅಣ್ಣಾ ಎಂಟಿಬಿ ವಿಮಾನ ಹತ್ತಿ ಬಾಂಬೆಗೆ ಹಾರಾಯಿತು ಎಂದಾಗ ನನಗೆ ದಿಗಿಲಾಯಿತು. ಅರೇ ನರಿ ಶುಭ ಸೂಚನೆಯೂ ಸುಳ್ಳಾಯಿತ್ತಲ್ಲಾ ಎಂದುಕೊಂಡೆ ಎಂದು ಹೇಳಿದಾಗ ಮತ್ತೆ ಎಲ್ಲರೂ ಜೋರಾಗಿ ನಕ್ಕರು.

ಪಾಪ, ಶ್ರೀಮಂತ ಪಾಟೀಲ್ ಅಜ್ಜ. ಬಹಳ ಮುಗ್ಧ ಅಜ್ಜ. ಆಯಪ್ಪಾನಿಗೆ ಏನೂ ಗೊತ್ತಿಲ್ಲ. ಅಂತಹ ವ್ಯಕ್ತಿಯನ್ನು ಇವರು ಹೊಡ್ಕೊಂಡು ಹೋದ್ರಲಾ ಅದು ಸರಿನಾ. ರೆಸಾರ್ಟ್​ನಲ್ಲಿ ಆ ಅಜ್ಜ ನಮ್ಮ ಜೊತೆಗೆ ಇದ್ದರು. ರೆಸಾರ್ಟ್​ನಿಂದಲೇ ಹಾರಿಸಿಕೊಂಡು ಹೋದ್ರಲ್ಲಾ, ಬಹುಶಃ ಇಂತಹ ಐಡಿಯಾ ಇವರಿಗೆ ಬಿಟ್ಟರೇ ಇನ್ಯಾರಿಗೂ ಬರಲು ಸಾಧ್ಯವಿಲ್ಲ. ಈಗಾಗಲೇ 15 ಜನರನ್ನು ಹಾರಿಸಿಕೊಂಡು ಹೋಗಿದ್ದಿರಲ್ಲಾ ಅವರಷ್ಟೇ ಸಾಕಿರಲಿಲ್ಲವಾ ನಿಮಗೆ ಈ ಸರ್ಕಾರ ಬೀಳಿಸಲು. ಇನ್ನು ಒಬ್ಬ ಸದಸ್ಯರನ್ನು ಏಕೆ ನೀವು ಆರಿಸಿಕೊಂಡು ಹೋದಿರಿ ಎಂದು ಹಾಸ್ಯದ ಧಾಟಿಯಲ್ಲೇ ಬಿಜೆಪಿ ನಾಯಕರನ್ನು ಟೀಕಿಸಿದರು.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ