• Home
  • »
  • News
  • »
  • state
  • »
  • Ravindra Srikantaiah: ದೆವ್ವ ಕರೆದ್ರೆ ಆಣೆ ಮಾಡ್ಬೇಕಾ? ಸುಮಲತಾ ಬಗ್ಗೆ ಇದೆಂಥಾ ಮಾತಾಡಿದ್ರು ರವೀಂದ್ರ ಶ್ರೀಕಂಠಯ್ಯ!

Ravindra Srikantaiah: ದೆವ್ವ ಕರೆದ್ರೆ ಆಣೆ ಮಾಡ್ಬೇಕಾ? ಸುಮಲತಾ ಬಗ್ಗೆ ಇದೆಂಥಾ ಮಾತಾಡಿದ್ರು ರವೀಂದ್ರ ಶ್ರೀಕಂಠಯ್ಯ!

ರವೀಂದ್ರ ಶ್ರೀಕಂಠಯ್ಯ, ಎಂಪಿ ಸುಮಲತಾ

ರವೀಂದ್ರ ಶ್ರೀಕಂಠಯ್ಯ, ಎಂಪಿ ಸುಮಲತಾ

ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದ ಸುಮಲತಾಗೆ ತಿರುಗೇಟು ಕೊಟ್ಟಿರೋ ಅವರು, ನಾವು ನಿತ್ಯ ದೇವರ ಪೂಜೆ ಮಾಡುವವರು, ದೆವ್ವದ ಜೊತೆ ಯಾರದ್ರೂ ಆಣೆ ಪ್ರಮಾಣಕ್ಕೆ ಹೋಗ್ತಾರಾ? ಸಂಸದೆ ಮಾತು ಕೇಳಿದ್ರೆ ದೆವ್ವದ ಬಾಯಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ ಎಂದು ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದ್ರು.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ರಾಜ್ಯದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್​  (Politics) ಜೋರಾಗಿದೆ. ಕಮಿಷನ್​ ಆರೋಪ ಮಾಡಿದ್ದ ಜೆಡಿಎಸ್ ನಾಯಕರಿಗೆ (JDS Leaders) ಸಂಸದೆ ಸುಮಲತಾ (MP Sumalatha) ಪಂಥಾಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸುಮಲತಾಗೆ  ತಿರುಗೇಟು ನೀಡಿದ್ದಾರೆ. ದೆವ್ವ ಕರೆದ್ರೆ ಆಣೆ ಮಾಡಬೇಕಾ? ದೆವ್ವ ಕರೆಯುತ್ತೆ ಅಂತ ಆಣೆ ಪ್ರಮಾಣಕ್ಕೆ (Oath) ಹೋಗೋಕಾಗುತ್ತಾ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.


ದೆವ್ವದ ಬಾಯಲಿ ಭಗವದ್ಗೀತೆ ಕೇಳಿದ ರೀತಿ


ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದ ಸುಮಲತಾಗೆ ತಿರುಗೇಟು ಕೊಟ್ಟಿರೋ ಅವರು, ನಾವು ನಿತ್ಯ ದೇವರ ಪೂಜೆ ಮಾಡುವವರು, ದೆವ್ವದ ಜೊತೆ ಯಾರದ್ರೂ ಆಣೆ ಪ್ರಮಾಣಕ್ಕೆ ಹೋಗ್ತಾರಾ? ಸಂಸದೆ ಮಾತು ಕೇಳಿದ್ರೆ ದೆವ್ವದ ಬಾಯಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ ಎಂದು ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದ್ರು.


ಸುಮಲತಾ ಅಂಬರೀಶ್ ಹೇಳಿದ್ದೇನು? 


ಮದ್ದೂರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಮತ್ತು ಬೆಂಬಲಿಗರು ಕಮಿಷನ್ ಪಡೆದಿದ್ದಾರೆ. ಪಡೆದಿಲ್ಲ ಎನ್ನುವುದಾದರೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಶಾಸಕರಾದ ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಂಸದೆ, ಆಣೆ ಪ್ರಮಾಣಕ್ಕೆ ನಾನು ಸಿದ್ಧಳಿದ್ದೇನೆ ಎಂದು ಆಹ್ವಾನ ನೀಡಿದ್ದರು.


JDS MLA Reacts MP Sumalatha Ambareesh Commission allegations mrq
ಸಂಸದೆ ಸುಮಲತಾ


ಇದನ್ನೂ ಓದಿ:  MP Sumalatha: ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಬಾಲಕಿಗೆ ನ್ಯಾಯ ಕೊಡಿಸಿ; ಕಣ್ಣೀರು ಹಾಕಿ ಸಿಎಂ ಬಳಿ ಸುಮಲತಾ ಮನವಿ


ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ


ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಸಂಸದೆ ಸುಮಲತಾ ಕಿಡಿಕಾರಿದ್ದರು. ಜಿಲ್ಲೆಯ ಬೂದನೂರು ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ಬಾರಿ ಮಳೆಗೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಜನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಳೆದ ಬಾರಿಯೂ ಸಹ ಪರಿಶೀಲನೆ ನಡೆಸಲಾಗಿತ್ತು. ಸಮಸ್ಯೆ ಬಗೆಹರಿಸುವ ಬಗ್ಗೆ ಸೂಚನೆ ಕೊಡಲಾಗಿತ್ತು. ಈವರೆಗೂ ಏನು ಮಾಡಿಲ್ಲ, ಮತ್ತೆ ಯಡವಟ್ಟು ಆಗಿದೆ. ಬೇಜವಾಬ್ದಾರಿ ಅಧಿಕಾರಿಗಳ ಜೊತೆ ಹೋರಾಟ ಮಾಡಿ ಸಾಕಾಗಿದೆ.


ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಬರ್ತಾರೆ


ಲೆಟರ್ ಕೂಡ ಬರೆದಿದ್ದೇನೆ, ಯಾವ ಸ್ಪಂದನೆ ಇಲ್ಲ. ಯಾವ ಅಧಿಕಾರಿ ಬಂದಿಲ್ಲ, ಯಾರನ್ನೋ ಕಳುಹಿಸಿದ್ದಾರೆ. ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಅಧಿಕಾರಿಗಳು ಬರ್ತಾರೆ. ಅಪ್ರೂವಲ್ ಗೆ ಕಳುಹಿಸಿದ್ದೇವೆ ಎಂದು ಬರೀ ನೆಪ ಹೇಳ್ತಾರೆ. ನಮ್ಮ ಕರ್ತವ್ಯ ಮಾಡ್ತಿದ್ದೇವೆ. ಮುಂದೆ ಜನ ರೊಚ್ಚಿಗೆಳ್ತಾರೆ. ರೈತರು ಬೆಸತ್ತಿ ಹೋಗಿದ್ದಾರೆ. ಮಳೆ ಬಂದರೆ ಸಂಕಷ್ಟ ಅನುಭವಿಸುತ್ತಿರುವರು ರೈತರು. ಸಾವಿರಾರು ಕೋಟಿ ಕಾಮಗಾರಿ ಈ ಗತಿಯಾಗಿದೆ. ಸಿಎಂ ಜೊತೆ ಚರ್ಚಿಸಿ ಪತ್ರ ಕೊಟ್ಟಿದ್ದೇನೆ. ಸಭೆ ಕರೆದು ಸೂಚನೆ ಕೊಡುವುದಾಗಿ ತಿಳಿಸಿದ್ದಾರೆ ಎಂದಿದ್ರು.


ಅಧಿಕಾರಿಗಳ ವಿರುದ್ಧ ಗುಡುಗಿದ ಸುಮಲತಾ


ಇನ್ನೂ ಮುಂದುವರೆದು ಮಾತನಾಡಿದ ಅವರು, ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ. ಅಧಿಕಾರಿಗಳು ಸರಿಯಾಗಿ ಬರ್ತಿಲ್ಲ, ಗೌರವ ಕೊಡ್ತಿಲ್ಲ. 3 ತಿಂಗಳಲ್ಲಿ ಕೂಡ ಆಗಲ್ಲ. ಕಮಿಷನ್ ಯಾರ್ ಯಾರಿಗೆ ತಲುಪಬೇಕೊ ಗೊತ್ತಿಲ್ಲ. ಅವೈಜ್ಞಾನಿಕ ಕೆಲಸ ಇದು. ಮಂಡ್ಯ ಜನಕ್ಕೆ ಅನುಕೂಲವಾಗುತ್ತೆ ಅನ್ಕೊಂಡಿದ್ದೆ. ನನಗೆ ಹುಚ್ಚು ಅನ್ಕೊಂಡಿದ್ರು, ಅವೈಜ್ಞಾನಿಕದ ಬಗ್ಗೆ ಮಾತನಾಡಿದ್ದೆ. ಮೊದಲೇ ಕ್ರಮ ತೆಗೆದುಕೊಂಡಿದ್ರೆ, ಸಮಸ್ಯೆ ಆಗುತ್ತಿರಲಿಲ್ಲ.


ಇದನ್ನೂ ಓದಿ: Mandya: ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಬಾಲಕಿ ಕುಟುಂಬಕ್ಕೆ 10 ಲಕ್ಷ ನೆರವು


ಶಾಲಾ ಮಕ್ಕಳಿಗೆ ತೊಂದರೆಯಾಗ್ತಿದೆ, ಎಂಟ್ರಿ, ಎಕ್ಸಿಟ್, ಪುಟ್ಟಪಾತ್, ಸರ್ವಿಸ್ ರೋಡ್ ಮಾಡಿಲ್ಲ. ಅವೈಜ್ಞಾನಿಕವಾಗಿದೆ ಹೆದ್ದಾರಿ ಕಾಮಗಾರಿ. ಹೆದ್ದಾರಿ ಮೈಸೂರು, ಬೆಂಗಳೂರಿನವರಿಗೆ ಮಾತ್ರನಾ, ಉಳಿದವರ ಗತಿ ಏನು? ಎಂದು ಪ್ರಶ್ನಿಸಿ ಗುಡುಗಿದ್ದರು. 

Published by:ಪಾವನ ಎಚ್ ಎಸ್
First published: