ನಾನು ಜೆಡಿಎಸ್​ ಬಿಡಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ; ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ರವೀಂದ್ರ ಶ್ರೀಕಂಠಯ್ಯ

ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಕುಮಾರಸ್ವಾಮಿ  ನೇತೃತ್ವದ ಜೆಡಿಎಸ್ ಪಕ್ಷದ ಶಾಸಕ. ಈ ಅವಧಿ ಮುಗಿಯುವವರೆಗೆ ನಾನು ಪ್ರಾಮಾಣಿಕವಾಗಿ ಇರುವುದು ನನ್ನ ಕರ್ತವ್ಯ. ಕೆಲವು ಮಂಡ್ಯ ಜಿಲ್ಲೆ ಮುಖಂಡರು ಅದನ್ನು ಹಾಳುಮಾಡಿಟ್ಟಿದ್ದಾರೆ ಎಂದು ಕಿಡಿಕಾರಿದರು.

Latha CG | news18-kannada
Updated:December 17, 2019, 4:16 PM IST
ನಾನು ಜೆಡಿಎಸ್​ ಬಿಡಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ; ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ರವೀಂದ್ರ ಶ್ರೀಕಂಠಯ್ಯ
ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ
  • Share this:
ಮಂಡ್ಯ(ಡಿ.17): ಕೆಲ ದಿನಗಳ ಹಿಂದೆ ಜೆಡಿಎಸ್​ ಶಾಸಕ ರವೀಂದ್ರ ಶೀಕಂಠಯ್ಯ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಸ್ಪಷ್ಟನೆ ನೀಡಿರುವ ಶ್ರೀಕಂಠಯ್ಯ, ನಾನು ಜೆಡಿಎಸ್​ ಬಿಡುವ  ಪ್ರಶ್ನೆಯೇ ಇಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, "ಯಾರೋ ಸ್ವಂತ ಹಿತಾಸಕ್ತಿಗೆ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಮಂಡ್ಯ ರಾಜಕಾರಣದಲ್ಲಿ ನಮ್ಮದು ಹಳೆ ಮನೆತನದ ಕುಟುಂಬ. 1952ರಿಂದ ನನ್ನ ಕುಟುಂಬ ರಾಜಕಾರಣದಲ್ಲಿದೆ.  ನಾನು ರಾಜಕಾರಣದಲ್ಲಿ ಅನೇಕ ಏರಿಳಿತಗಳನ್ನ ನೋಡಿದ್ದೇನೆ. ಇವೆಲ್ಲ ಸಂಪೂರ್ಣ ಊಹಾಪೋಹ. ಜೆಡಿಎಸ್ ಬಿಡುವ ಪ್ರಶ್ನೆ ಇಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ," ಎಂದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ನಿಮ್ಮ ಭುಜದ ನೆರವಿನಿಂದ ಗುಂಡು ಹಾರಿಸಲು ಅರ್ಬನ್ ನಕ್ಸಲ್​ಗಳಿಗೆ ಅವಕಾಶ ನೀಡಬೇಡಿ; ವಿದ್ಯಾರ್ಥಿಗಳಿಗೆ ಪ್ರಧಾನಿ ಮನವಿ

ಮುಂದುವರೆದ ಅವರು, ಅಧಿಕಾರದ ಹಿಂದೆ ಹೋಗುವುದಾಗಿದ್ದರೆ, 2008ರಲ್ಲೇ ನಾನು ಶಾಸಕ ಆಗುತ್ತಿದ್ದೆ.  ಈ ಚುನಾವಣೆಯಲ್ಲಿ ನಾನು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಗೆದ್ದಿದ್ದೇನೆ. ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ. ಈ ಅವಧಿ ಮುಗಿಯುವವರೆಗೆ ಯಾರು ಏನೇ ಹೇಳಿದರೂ ಹಾಗೂ ಅಪಪ್ರಚಾರ ಮಾಡಿದರೂ ಕೂಡ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಕುಮಾರಸ್ವಾಮಿ  ನೇತೃತ್ವದ ಜೆಡಿಎಸ್ ಪಕ್ಷದ ಶಾಸಕ. ಈ ಅವಧಿ ಮುಗಿಯುವವರೆಗೆ ನಾನು ಪ್ರಾಮಾಣಿಕವಾಗಿ ಇರುವುದು ನನ್ನ ಕರ್ತವ್ಯ. ಕೆಲವು ಮಂಡ್ಯ ಜಿಲ್ಲೆ ಮುಖಂಡರು ಅದನ್ನು ಹಾಳುಮಾಡಿಟ್ಟಿದ್ದಾರೆ ಎಂದು ಕಿಡಿಕಾರಿದರು.‘

ಮೋದಿಯೇ ನಮ್ಮ ನಾಯಕ, ಅರ್ಹ ಶಾಸಕರೂ ಇದನ್ನು ಒಪ್ಪಿ ನಡೆಯಲೇಬೇಕು; ಈಶ್ವರಪ್ಪ ತಿರುಗೇಟು

ಮಂಡ್ಯದಲ್ಲಿ ಯಾವ ಶಾಸಕರೂ ಬೇರೆ ಹೋಗುವ ಅಭಿಪ್ರಾಯದಲ್ಲಿಲ್ಲ. ನಾವೆಲ್ಲರೂ ಕುಮಾರಸ್ವಾಮಿರವರ ಜೆಡಿಎಸ್ ಪಕ್ಷದಲ್ಲೇ ಇದ್ದೇವೆ. ಈ ಚುನಾವಣೆ ಗೆದ್ದಿರುವುದು ಜೆಡಿಎಸ್ ಪಕ್ಷದ ಮುಖಂಡರಿಗೆ. ಹೀಗಾಗಿ ನಾನು ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಲ್ಲ ಎಂದು ಸ್ಪಷ್ಟಪಡಿಸಿದರು.
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ