ಸೈನಿಕರ ಭದ್ರತೆಯಲ್ಲಿ ನಾರಾಯಣಗೌಡ ಹೌಸ್​ ಅರೆಸ್ಟ್​..? ಹೊರಟ್ಟಿಗೆ ಫೋನ್​ ಮಾಡಿ ಹೇಳಿದ್ರಾ ಕೆ.ಆರ್​.ಪೇಟೆ ಶಾಸಕ

ನಾರಾಯಣಗೌಡರ ಜೊತೆ ಬಿಜೆಪಿ ನಾಯಕರೂ ಸಹ ಇದ್ದಾರಂತೆ. ನೀನು ಏನಾದರೂ ಮಾತನಾಡಿದರೆ ನಿನ್ನ ಕಥೆ ಅಷ್ಟೇ ಅಂತಾ ಬೆದರಿಕೆ ಹಾಕುತ್ತಿದ್ದಾರಂತೆ. ಯಾವುದೇ ಪಕ್ಷ ಆದರೂ ಸರಿ ಒಬ್ಬ ಶಾಸಕನನ್ನು ಈ ರೀತಿ ಬಂಧನದಲ್ಲಿ ಇಡೋದು ಎಷ್ಟು ಸರಿ..? ಎಂದು ಬಿಜೆಪಿ ನಾಯಕರ ವಿರುದ್ಧ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latha CG | news18
Updated:February 12, 2019, 5:39 PM IST
ಸೈನಿಕರ ಭದ್ರತೆಯಲ್ಲಿ ನಾರಾಯಣಗೌಡ ಹೌಸ್​ ಅರೆಸ್ಟ್​..? ಹೊರಟ್ಟಿಗೆ ಫೋನ್​ ಮಾಡಿ ಹೇಳಿದ್ರಾ ಕೆ.ಆರ್​.ಪೇಟೆ ಶಾಸಕ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • News18
  • Last Updated: February 12, 2019, 5:39 PM IST
  • Share this:
ಬೆಂಗಳೂರು,(ಫೆ.12): ಗೃಹಬಂಧನದಲ್ಲಿರುವ ಜೆಡಿಎಸ್​ ಶಾಸಕ ನಾರಾಯಣಗೌಡರನ್ನು100 ಮಂದಿ ಸೈನಿಕರ ಭದ್ರತೆಯಲ್ಲಿ ಮುಂಬೈ ಹೋಟೆಲ್​ನಿಂದ ಬೇರೆಡೆಗೆ ಶಿಫ್ಟ್​ ಮಾಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.

ಶಾಸಕ ನಾರಾಯಣಗೌಡ ಬಿಜೆಪಿ ಬಂಧನದಲ್ಲಿದ್ದಾರೆ ಎಂಬ ಆರೋಪ ಹಿನ್ನೆಲೆ ಬಸವರಾಜ ಹೊರಟ್ಟಿ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈಗ ತಾನೇ ನಾರಾಯಣಗೌಡ ಜೆಡಿಎಸ್​ ಪಕ್ಷದ ಶಾಸಕರೊಬ್ಬರಿಗೆ ಫೋನ್​ ಮಾಡಿ, 'ಬಿಡ್ತಿಲ್ಲ ಇವರು, ಇವಾಗ ಎಲ್ಲೋ ಕರೆದುಕೊಂಡು ಬಂದಿದ್ದಾರೆ' ಎಂದು ಅಳುತ್ತಿದ್ದಾರಂತೆ ಎಂದು ಬೇಸರ ವ್ಯಕ್ತಪಡಿಸಿದರು.

ನಾರಾಯಣಗೌಡರ ಜೊತೆ ಬಿಜೆಪಿ ನಾಯಕರೂ ಸಹ ಇದ್ದಾರಂತೆ. ನೀನು ಏನಾದರೂ ಮಾತನಾಡಿದರೆ ನಿನ್ನ ಕಥೆ ಅಷ್ಟೇ ಅಂತಾ ಬೆದರಿಕೆ ಹಾಕುತ್ತಿದ್ದಾರಂತೆ. ಯಾವುದೇ ಪಕ್ಷ ಆದರೂ ಸರಿ ಒಬ್ಬ ಶಾಸಕನನ್ನು ಈ ರೀತಿ ಬಂಧನದಲ್ಲಿ ಇಡೋದು ಎಷ್ಟು ಸರಿ..? ಎಂದು ಬಿಜೆಪಿ ನಾಯಕರ ವಿರುದ್ಧ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುತಾತ್ಮ ಯೋಧನ ನೆನಪು; ತೊದಲು ನುಡಿಯಲ್ಲೇ ಆರ್ಮಿಯನ್ನು ಗುಣಗಾನ ಮಾಡಿದ ವೀರಕನ್ನಡಿಗನ ಮಗಳು..!

ಜೆಡಿಎಸ್​ ಮಾಸ್ಟರ್​ ಪ್ಲಾನ್​ ಏನು?

ಬಿಜೆಪಿ ನಾಯಕರು ಜೆಡಿಎಸ್​ ಶಾಸಕ ನಾರಾಯಣಗೌಡರನ್ನು ಮುಂಬೈನಲ್ಲಿ ಬಂಧಿಸಿಟ್ಟಿದ್ದಾರೆ ಎಂಬ ಆರೋಪ ಹಿನ್ನೆಲೆ, ಜೆಡಿಎಸ್​ ನಾಯಕರು ತಮ್ಮ ಶಾಸಕರನ್ನು ಬಂಧನದಿಂದ ಮುಕ್ತಗೊಳಿಸಲು ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಮನೆ ಮುಂದೆ ಪ್ರತಿಭಟನೆ ನಡೆಸಲು ಯೋಜನೆ ಹಾಕಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಮಾಡಲು ಪ್ಲಾನ್​ ಹಾಕಿದೆ.

ನಾರಾಯಣಗೌಡರನ್ನು ಸೆಳೆಯಲು ಬಿಜೆಪಿ ಆಪರೇಷನ್​ ಕಮಲ ಮಾಡಲು ಯತ್ನಿಸುತ್ತಿದೆ. ಈಗಾಗಲೇ ಕಮಲ ಪಾಳಯದ ನಾಯಕರು ಶಾಸಕ ನಾರಾಯಣಗೌಡರನ್ನು ಮುಂಬೈನಲ್ಲಿ ಇರಿಸಿಕೊಂಡಿದ್ದಾರೆ. ಜೊತೆಗೆ ಅವರನ್ನು ಸಂಪರ್ಕಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅರಿತಿರುವ ಜೆಡಿಎಸ್​ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ.ಎರಡು ದಿನ ಹಾಳಾಯ್ತು ಸಮಯ; ಜನರಿಗೆ ಉಪಯೋಗವಿಲ್ಲದ ಪರಿಷತ್ ಕಲಾಪ – ಒಂದು ಪ್ರಶ್ನೆಗೆ ಆಗುವ ವೆಚ್ಚವೆಷ್ಟು ಗೊತ್ತಾ?

ಇಲ್ಲಿನ ಬಿಜೆಪಿ ನಾಯಕರಿಗೆ ನೇರವಾಗಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸಾಥ್ ನೀಡುತ್ತಿದೆ. ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಈ ಎಲ್ಲಾ ವಿಚಾರದ ಬಗ್ಗೆ ಅರಿವಿದೆ. ನಾವು ಶಾಸಕರನ್ನು ಬಂಧನ ಮುಕ್ತಗೊಳಿಸಬೇಕೆಂದರೆ ಮಹಾರಾಷ್ಟ್ರಕ್ಕೆ ಹೋಗಬೇಕು. ಅಲ್ಲಿ ಸಿಎಂ ದೇವೇಂದ್ರ ಫಡ್ನವಿಸ್‌ರ ಮನೆಯ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಪ್ಲಾನ್​ ಮಾಡಿದ್ದಾರೆ.

ಮಹಾರಾಷ್ಟ್ರ ಸಿಎಂ ಮನೆ ಮುಂದೆ ಪ್ರತಿಭಟಿಸಿದರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಆಡಿಯೋ ಪ್ರಕರಣದಿಂದ ಬಿಜೆಪಿ ಮುಜುಗರಕ್ಕೊಳಗಾಗಿದೆ. ದೇವೇಂದ್ರ ಫಡ್ನವಿಸ್ ನಿವಾಸದ ಮುಂದೆ ಪ್ರತಿಭಟಿಸಿದರೆ, ಬಿಜೆಪಿ ಮತ್ತಷ್ಟು ಮುಜುಗರಕ್ಕೆ ಒಳಗಾಗುತ್ತಿದೆ ಎಂಬುದನ್ನು ಅರಿತಿರುವ ಜೆಡಿಎಸ್ ಶಾಸಕರು ಈ ಹೊಸ ಮಾಸ್ಟರ್​ ಪ್ಲಾನ್ ಮಾಡಿದ್ದಾರೆ.

First published: February 12, 2019, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading