ಕೊರೋನಾ ಭೀತಿ; ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯಿಂದಲೇ ಔಷಧಿ ಸಿಂಪಡಣೆ

ಜೆಡಿಎಸ್ ಶಾಸಕರು ಸ್ವತಃ ಔಷಧಿ ಸಿಂಪಡಿಸಿ ಕರೋನಾ ಹರಡದಂತೆ  ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರ ವಿತರಣೆಯ ಕೆಲಸವನ್ನೂ ಮಾಡಿದರು.

news18
Updated:March 30, 2020, 7:20 AM IST
ಕೊರೋನಾ ಭೀತಿ; ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯಿಂದಲೇ ಔಷಧಿ ಸಿಂಪಡಣೆ
ಹೆಚ್ ಕೆ ಕುಮಾರಸ್ವಾಮಿ
  • News18
  • Last Updated: March 30, 2020, 7:20 AM IST
  • Share this:
ಹಾಸನ: ಕರೋನಾ ಭೀತಿ ಹಿನ್ನೆಲೆ ಸಕಲೇಶಪುರ ಪಟ್ಟಣದಾದ್ಯಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರೇ ಗನ್ ಹಿಡಿದು ಔಷಧಿ ಸಿಂಪಡಿಸಿದ ಘಟನೆ ನಡೆಯಿತು. ಸಕಲೇಶಪುರದ ವಿವಿಧ ಬಡಾವಣೆಗಳಲ್ಲಿ ಪುರಸಭೆಯಿಂದ ಔಷಧಿ ಸಿಂಪಡಿಸಲಾಯಿತು. ಈ ವೇಳೆ ಶಾಸಕ ಹೆಚ್,ಕೆ,ಕುಮಾರಸ್ವಾಮಿಯವರೇ  ನಗರದ ಹಲವೆಡೆ ಔಷಧಿ ಸಿಂಪಡಿಸಿ ಜನಪ್ರತಿನಿಧಿಗಳಿಗೆ ಮಾದರಿಯಾದರು.

ಜೆಡಿಎಸ್ ಶಾಸಕರು ಸ್ವತಃ ಔಷಧಿ ಸಿಂಪಡಿಸಿ ಕರೋನಾ ಹರಡದಂತೆ  ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರ ವಿತರಣೆಯ ಕೆಲಸವನ್ನೂ ಮಾಡಿದರು.

ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಹಲವೆಡೆ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದ್ದರಿಂದ ಶಾಸಕರೇ ಬಡವರಿಗೆ ಆಹಾರ ವಿತರಿಸುತ್ತಿದ್ದಾರೆ. ಪ್ರತಿನಿತ್ಯ ಕ್ಷೇತ್ರದಲ್ಲಿ ಸಂಚರಿಸುತ್ತಾ ಕರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 83ಕ್ಕೇರಿಕೆ

ಹೆಚ್.ಕೆ. ಕುಮಾರಸ್ವಾಮಿಯವರು ತಾಲೂಕು ಆಡಳಿತದೊಂದಿಗೆ ಪ್ರತಿನಿತ್ಯ ಸಂಪರ್ಕದಲ್ಲಿದ್ದು, ಕರೋನಾ ತಡೆಗಟ್ಟುವಲ್ಲಿ ತಮ್ಮದೇ ರೀತಿಯಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ನಿನ್ನೆ ರಾತ್ರಿಯವರೆಗೂ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿದೆ. ಹಾಸನದಲ್ಲಿ ಸದ್ಯಕ್ಕೆ ಒಂದು ಪ್ರಕರಣವೂ ಬೆಳಕಿಗೆ ಬಂದಿಲ್ಲ.

ವರದಿ: ಡಿಎಂಜಿ ಹಳ್ಳಿ ಅಶೋಕ್ಇದನ್ನೂ ಓದಿ: ಗಡಿಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಿ: ಸಚಿವ ಜೆ.ಸಿ ಮಾಧುಸ್ವಾಮಿ

First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading