ಬಸವನಾಡಿನಲ್ಲಿ ಜೆಡಿಎಸ್ ಶಾಸಕನಿಗೆ ಜೀವ ಬೆದರಿಕೆ; ತಮಗೆ ಜೀವಹಾನಿಯಾದರೆ ಸರ್ಕಾರವೇ ಹೊಣೆ ಎಂದ ಚವ್ಹಾಣ

ಮಾತಿಗೆ ಮಾತು ಬೆಳೆದು ಕೊನೆಗೆ ಆವರು ನಿನಗೆ ಗುಂಡು ಹಾಕಿ ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದರು

ದೇವಾನಂದ ಎಫ್. ಚವ್ಹಾಣ

ದೇವಾನಂದ ಎಫ್. ಚವ್ಹಾಣ

  • Share this:
ವಿಜಯಪುರ (ನ. 18): ಜಿಲ್ಲೆಯ ಜೆಡಿಎಸ್ ದಲಿತ ಶಾಸಕನಿಗೆ ಜೀವ ಬೆದರಿಕೆ ಹಾಕಲಾಗಿದೆ.  ಈ ಕುರಿತು ಸ್ವತಃ ಈ ಬಗ್ಗೆ ಮಾಹಿತಿ ನೀಡಿರುವ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ, ತಮಗೆ ಹಾಕಲಾಗಿರುವ ಜೀವ ಬೆದರಿಕೆಯ ಕುರಿತು ಎಳಎಳೆಯಾಗಿ ಮಾಹಿತಿ ನೀಡಿದ್ದಾರೆ.  ಮೊನ್ನೆ ದೀಪಾವಳಿ ಅಮವಾಸ್ಯೆ ದಿನ ಬೆಳಗಿನ ಜಾವ 3 ಗಂಟೆಗೆ ಮನೆಯ ಹೊರಗಡೆ ಗಲಾಟೆ ನಡೆಯುತ್ತಿತ್ತು.  ಬಾಗಿಲು ತೆಗೆದು ನೋಡಿದಾಗ ನಮ್ಮ ಹಳೆಯ ಶೆಡ್ ಮೇಲೆ ಒಬ್ಬರು, ಕಂಪೌಂಡ್ ಮೇಲೆ ಒಬ್ಬರು, ವಾಲಿಯವರ ಕಂಪೌಂಡ್ ಕಡೆ ಒಬ್ಬರು, ಶ್ರೀಗಂಧದ ಮರ ಕಡಿದ ಜಾಗದ ಬಳಿ ಒಬ್ಬರು ನಿಂತಿದ್ದರು.  ಆಗ ನಾನು ಯಾಕೆ ಏನು ಮಾಡ್ತಿದ್ದೀರಾ ಎಂದು ಕೇಳಿದೆ.  ಯಾಕೆ ಬಂದಿದ್ದೀರಿ ಎಂದಾಗ ನಿನಗ ನೋಡಾಕ ಬಂದಿವಿ ಎಂದು ಹೇಳಿದರು.  ಮಾತಿಗೆ ಮಾತು ಬೆಳೆದು ಕೊನೆಗೆ ಆವರು ನಿನಗೆ ಗುಂಡು ಹಾಕಿ ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದರು.  ಆಗ ನಾನು ಕೂಡಲೇ ಮೊಬೈಲ್ ನಿಂದ ಗ್ರಾಮೀಣ ಪೊಲೀಸರಿಗೆ ಮಾತನಾಡಿದೆ. ಪೋಲೀಸರು ಬರುವಷ್ಟರಲ್ಲಿ ಅವರು ಓಡಿ ಹೋದರು ಎಂದು ತಿಳಿಸಿದರು.

ಈ ಹಿಂದೆ ತಮ್ಮ ತಾಂಡಾದಲ್ಲಿ ಗಂಧದ ಮರ ಕಳ್ಳತನ ಮಾಡಿದಾಗ ಯಾರೂ ಶಬ್ದ ಕೂಡ ಮಾಡಿರಲಿಲ್ಲ.  ಶಬ್ದ ಬಂದರೆ ಕಳ್ಳರು ಓಡಿ ಹೋಗುತ್ತಾರೆ.  ಆದರೆ, ಇಲ್ಲಿ ಆದದ್ದೇ ಬೇರೆ.  ವಿಜಯಪುರ ನಗರದ ಮಧ್ಯದಲ್ಲಿ ಜನವಸತಿ ಪ್ರದೇಶದಲ್ಲಿ ಇಷ್ಟೇಲ್ಲ ಕೃತ್ಯ ಎಸಗುವ ಧೈರ್ಯ ಯಾರಿಗೂ ಇರಲಿಲ್ಲ.   ಅಂದು ನಮ್ಮ ಮನೆಯ ಬಾಲ್ಕನಿ ಆ್ಯಂಗಲ್, ಸೆಕ್ಯೂರಿಟಿ ಇಲ್ಲದಿದ್ದರೆ ತಮ್ಮನ್ನು ಹತ್ಯೆ ಮಾಡಲು ಹಿಂಜರಿಯುತ್ತಿರಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಮುಂಚೆಯೂ ಇಂಥ ಘಟನೆ ನಡೆದಿದೆ.  15-20 ದಿನಗಳ ಹಿಂದೆ ಹಿಟ್ನಳ್ಳಿ ತಾಂಡಾದ ದೇಸು ಎಂಬುವರು ಮಿಂಚನಾಳಗೆ ಎಂಗೇಜಮೆಂಟ್ ಗೆ ಬಂದಿದ್ದರು.  ಅಂದು ಆತನನ್ನು ಕರೆದು ತಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅವನ್ನು ಖಲಾಸ್ ಮಾಡುತ್ತೇವೆ.  ಗುಂಡು ಹಾಕುವುದಾಗಿ ಬೆದರಿಸಿದ್ದರು.  ಅಲ್ಲದೇ, ನ. 2 ರಂದು ಉಮರಾಣಿಯ ಡಾ. ಭೈರಗೊಂಡ ಸಾಹುಕಾರ ಮೇಲೆ ಗುಂಡಿನ ಧಾಳಿ ನಡೆದಿದೆ.  ಈ ಘಟನೆ ನಡೆದ 10-15 ದಿನಗಳ ನಂತರ ತಮ್ಮ ಮನೆಯ ಬಳಿ ಬೆದರಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆ ಬಳಿಕ ಕರ್ನಾಟಕದಿಂದ ಮಹಾರಾಷ್ಟ್ರ್ಕಕೆ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಮರಳು, ಅಫೀಮು, ಗಾಂಜಾ, ಮಾವಾ ಸಾಗಾಟಕ್ಕೆ ಕಡಿವಾಣ ಹಾಕಿದ್ದೆ.  ಆಗ ಆ ಮಾಫಿಯಾದವರೂ ಕೂಡ ಜೀವ ಬೆದರಿಕೆ ಹಾಕಿದ್ದರು.  ಸರಕಾರ ಬದಲಾದ ನಂತರ ಸರಕಾರದ ಅಣತಿಯಂದೆ ಬಂದ ಅಧಿಕಾರಿಗಳು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿರಲಿಲ್ಲ.  ಆಗ ತಾವು ಧ್ವನಿ ಎತ್ತಿದಾಗಲೂ ಜೀವ ಬೆದರಿಕೆ ಬಂದಿದ್ದವು.  ಈ ಹಿಂದೆ ಅಕ್ರಮ ಮರಳು ಸಾಗಾಟದ ಲಾರಿಗಳು, ಅಕ್ರಮ ಮರಳು ಸಂಗ್ರಹ ಸ್ಥಳಗಳನ್ನು ಹಿಡಿದು ಕೊಟ್ಟಿದ್ದೆ.  ಆದರೆ, ಯಾವುದೇ ಕೇಸ್ ಆಗಲಿಲ್ಲ.  ಅಧಿಕಾರಿಗಳೇ ಅದರಲ್ಲಿ ಶಾಮೀಲಾಗಿ ಕೆಲಸ ಮಾಡಿದಾಗ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.  ಇದಕ್ಕೆ ಯಾರು ರಕ್ಷಣೆ ಕೊಡಬೇಕು? ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಕು? ನಮ್ಮಂಥವರ ಪರಿಸ್ಥಿತಿ ಹೀಗಾದರೆ ಉಳಿದವರ ಪರಿಸ್ಥಿತಿ ಹೇಗೆ? ಎಂದು ಜೆಡಿಎಸ್ ಶಾಸಕರು ಪ್ರಶ್ನಿಸಿದರು.

ಇದನ್ನು ಓದಿ: ಕೊರೋನಾಗೆ ಫಿಜರ್​ ಶೇ 95ರಷ್ಟು ಪರಿಣಾಮಕಾರಿ ಲಸಿಕೆ; ತುರ್ತು ಅನುಮೋದನೆ ಪಡೆಯಲು ಸಿದ್ಧತೆ

ತಾವು ಯಾರ ಮೇಲೆ ಸಂಶಯ ಪಡುವ ಪ್ರಶ್ನೆಯಿಲ್ಲ.  ಮರಳು ಮಾಫಿಯಾದಲ್ಲಿ ಸಾಕಷ್ಟು ಜನರಿದ್ದಾರೆ.  ಅಲ್ಲಿ ಬಹಳಷ್ಟು ಜನ ಭಾಗಿಯಾಗಿದ್ದಾರೆ.  ಅಲ್ಲಿಯವರು ಇದರಲ್ಲಿದ್ದಾರೋ ಅಥವಾ ಇಲ್ಲಿಯವರು ಶೋಕಿಗಾಗಿ ಹೀಗೆ ಮಾಡಿದ್ದಾರೋ ಎಂಬುದರ ಕುರಿತು ತನಿಖೆಯಾಗಬೇಕು.  ಯಾವುದೇ ಒತ್ತಡಕ್ಕೆ ಒಳಗಾಗದೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಎಸ್ಪಿಯವರಿಗೆ ಈ ಕುರಿತು ದೂರು ನೀಡುತ್ತೆೇವೆ.  ಅವರು ಏನು ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇನೆ.  ನನ್ನ ರಕ್ಷಣೆಯ ನನ್ನ ಕುಟುಂಬದ ರಕ್ಷಣೆಯಾಗಬೇಕು.  ಇಲ್ಲಿ ಯಾವುದೇ ಜೀವಹಾನಿಯಾದರೆ ವಿಜಯಪುರ ಜಿಲ್ಲಾಡಳಿತ ಮತ್ತು ಸರಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ ಶಾಸಕರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
Published by:Seema R
First published: