ಬಡವರ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ; ಅನಿತಾ ಕುಮಾರಸ್ವಾಮಿ ಹೇಳಿಕೆ
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರೆಲ್ಲರೂ ನಮ್ಮ ಮನೆಯವರು. ಅವರು ಯಾರೂ ಕೂಡ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
news18-kannada Updated:November 24, 2020, 2:24 PM IST

ಅನಿತಾ ಕುಮಾರಸ್ವಾಮಿ
- News18 Kannada
- Last Updated: November 24, 2020, 2:24 PM IST
ರಾಮನಗರ (ನ. 24): ರಾಮನಗರದ ರಾಜೀವ್ ಗಾಂಧಿಪುರದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಧ್ಯಮದವರ ವಿರುದ್ಧ ಅಸಮಾಧಾನ ಹೊರಹಾಕಿದರು. ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜಸೇವೆ ಮಾಡಲು ಬಂದಿದ್ದೇನೆ. ಬಡವರು ಅಂದರೆ ನಾನು ಪಕ್ಷ ನೋಡದೆ ಸಹಾಯ ಮಾಡಿದ್ದೇನೆ. ರಾಜಕಾರಣದ ಸಮಯದಲ್ಲಿ ರಾಜಕೀಯ, ಆದರೆ ಬಡವರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಸುಮ್ಮನೆ ನಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಬೇಡಿ. ನನಗೆ ಸಹಕಾರ ನೀಡಿ ಎಂದರು.
ಕೊರೋನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್ ಜೊತೆಗೆ ಸೊಸೆಯೂ ರಾಮನಗರಕ್ಕೆ ಬಂದಿದ್ದರು. ಬಡವರಿಗೆ ಫುಡ್ ಕಿಟ್ ಜೊತೆಗೆ ಹೆಲ್ತ್ ಕಿಟ್ ಕೂಡ ಕೊಟ್ಟಿದ್ದೇವೆ. ರಾಮನಗರದ APMC, ರೇಷ್ಮೆ ಮಾರ್ಕೆಟ್ ನಲ್ಲಿ ಸ್ಯಾನಿಟೈಜರ್ ಟನಲ್ ಹಾಕಿಸಿದ್ದೆವು. ಇಷ್ಟೆಲ್ಲ ಕೆಲಸ ಬೇರೆ ಯಾವ ತಾಲೂಕಿನಲ್ಲಿ ಆಗಿದೆ ಹೇಳಿ? ಎಂದು ಶಾಸಕಿ ಅನಿತಾ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: KAS ಅಧಿಕಾರಿ ಸುಧಾಗೆ ಮತ್ತೆ ಸಂಕಷ್ಟ; ಬೆಂಗಳೂರಿನ 6 ಕಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರೆಲ್ಲರೂ ನಮ್ಮ ಮನೆಯವರು. ಅವರು ಯಾರೂ ಕೂಡ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಸದ್ಯ ರಾಮನಗರ ಕ್ಷೇತ್ರದಲ್ಲಿ ಸಂಸದ ಡಿ.ಕೆ. ಸುರೇಶ್ ಜೆಡಿಎಸ್ ನ ಕಾರ್ಯಕರ್ತರು, ಮುಖಂಡರನ್ನು ತಮ್ಮತ್ತ ಸೆಳೆಯುತ್ತಿದ್ದಾರೆಂದು ಚರ್ಚೆಗಳು ನಡೆಯುತ್ತಿವೆ. ಇದೇ ಕಾರಣಕ್ಕಾಗಿ ಡಿಕೆಶಿ-ಕುಮಾರಸ್ವಾಮಿ ನಡುವಿನ ಸಂಬಂಧ ಕೆಟ್ಟಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ರಾಮನಗರದ ಜೊತೆಗೆ ಚನ್ನಪಟ್ಟಣದಲ್ಲಿಯೂ ಸಹ ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನ ಬಿಟ್ಟುಕೊಡದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಜೊತೆಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ರಾಮನಗರ ಕ್ಷೇತ್ರದಾದ್ಯಂತ ಪ್ರವಾಸ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.(ವರದಿ : ಎ.ಟಿ. ವೆಂಕಟೇಶ್)
ಕೊರೋನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್ ಜೊತೆಗೆ ಸೊಸೆಯೂ ರಾಮನಗರಕ್ಕೆ ಬಂದಿದ್ದರು. ಬಡವರಿಗೆ ಫುಡ್ ಕಿಟ್ ಜೊತೆಗೆ ಹೆಲ್ತ್ ಕಿಟ್ ಕೂಡ ಕೊಟ್ಟಿದ್ದೇವೆ. ರಾಮನಗರದ APMC, ರೇಷ್ಮೆ ಮಾರ್ಕೆಟ್ ನಲ್ಲಿ ಸ್ಯಾನಿಟೈಜರ್ ಟನಲ್ ಹಾಕಿಸಿದ್ದೆವು. ಇಷ್ಟೆಲ್ಲ ಕೆಲಸ ಬೇರೆ ಯಾವ ತಾಲೂಕಿನಲ್ಲಿ ಆಗಿದೆ ಹೇಳಿ? ಎಂದು ಶಾಸಕಿ ಅನಿತಾ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.