ಕಾಂಗ್ರೆಸ್​ ಶಾಸಕರ ವಿರುದ್ಧ ಹರಿಹಾಯ್ದ ಜೆಡಿಎಸ್​ ಸಚಿವರು; ದೋಸ್ತಿ ಪಕ್ಷಗಳ ನಾಯಕರಲ್ಲಿ ಮತ್ತೆ ಅಪಸ್ವರ

ಕಾಂಗ್ರೆಸ್​ ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಹೀಗೆ ಮಾತಾಡಿದ್ರೆ ಏನು ಮಾಡೋದು? ಅದೇ ಕಾರಣಕ್ಕೆ ಅಜಯ್ ಧರ್ಮಸಿಂಗ್ ಪದಗ್ರಹಣ ಕಾರ್ಯಕ್ರಮದಿಂದ ಜೆಡಿಎಸ್​ ದೂರ ಉಳಿಯಿತು ಎಂದು ಹರಿಹಾಯ್ದರು.  ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೆಚ್ಯುರಿಟಿ ಇಲ್ಲ ಎಂದಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರುದ್ದವೂ ಪುಟ್ಟರಾಜು ಕೆಂಡಾಮಂಡಲರಾದರು.

HR Ramesh | news18
Updated:January 30, 2019, 12:03 PM IST
ಕಾಂಗ್ರೆಸ್​ ಶಾಸಕರ ವಿರುದ್ಧ ಹರಿಹಾಯ್ದ ಜೆಡಿಎಸ್​ ಸಚಿವರು; ದೋಸ್ತಿ ಪಕ್ಷಗಳ ನಾಯಕರಲ್ಲಿ ಮತ್ತೆ ಅಪಸ್ವರ
ಸಚಿವರಾದ ಸಿ.ಎಸ್​.ಪುಟ್ಟರಾಜು ಮತ್ತು ಬಂಡೆಪ್ಪ ಕಾಶಂಪೂರ್
HR Ramesh | news18
Updated: January 30, 2019, 12:03 PM IST
ಬೆಂಗಳೂರು: ಸಿಎಂ ಎಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್​  ಸಚಿವರು ಹಾಗೂ ಶಾಸಕರ ಬಗ್ಗೆ ಕಾಂಗ್ರೆಸ್​ ಶಾಸಕರು ಇಷ್ಟು ದಿನ ಹರಿಹಾಯುತ್ತಿದ್ದರು. ಇದೀಗ ಜೆಡಿಎಸ್​ ಸಚಿವರು ಕಾಂಗ್ರೆಸ್​ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ದೋಸ್ತಿ ಪಕ್ಷಗಳ ನಾಯಕರಲ್ಲಿ ಆರೋಪ-ಪ್ರತ್ಯಾರೋಪ ಬೀದಿಜಗಳವಾಗಿ ಮಾರ್ಪಟ್ಟಿದೆ.

ಜೆಡಿಎಸ್​ ಕಾರ್ಯಕಾರಣಿಯಲ್ಲಿ  ಮಾತನಾಡಿರುವ ಸಣ್ಣ ನೀರಾವರಿ ಸಚಿವ ಪುಟ್ಟರಾಜು,  ಕಾಂಗ್ರೆಸ್ ಶಾಸಕರು ಹಾದಿ ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಪ್ರತಿಕ್ರಿಯಿಸುವುದಕ್ಕೆ ಮೊದಲು ಕಡಿವಾಣ ಹಾಕಬೇಕು. ಸಮನ್ವಯ ಸಮಿತಿ ಅಧ್ಯಕ್ಷರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಚಿವರು, ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಹೀಗೆ ಮಾತಾಡಿದ್ರೆ ಏನು ಮಾಡೋದು? ಅದೇ ಕಾರಣಕ್ಕೆ ಅಜಯ್ ಧರ್ಮಸಿಂಗ್ ಪದಗ್ರಹಣ ಕಾರ್ಯಕ್ರಮದಿಂದ ಜೆಡಿಎಸ್​ ದೂರ ಉಳಿಯಿತು ಎಂದು ಹರಿಹಾಯ್ದರು.  ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೆಚ್ಯುರಿಟಿ ಇಲ್ಲ ಎಂದಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರುದ್ದವೂ ಪುಟ್ಟರಾಜು ಕೆಂಡಾಮಂಡಲರಾದರು.

ಇದನ್ನು ಓದಿ: ‘ಬಿಜೆಪಿ ಜೊತೆ ಇದ್ದಾಗ ತಲೆನೋವು ಇರಲಿಲ್ಲ’ – ಸಿಎಸ್ ಪುಟ್ಟರಾಜು ಹೇಳಿಕೆ ತೆರೆದಿಟ್ಟಿದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹುಳುಕು

ಇನ್ನು ವಿಧಾನಸೌಧದಲ್ಲಿ ಮಾತನಾಡಿರುವ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್,  ಕಾಂಗ್ರೆಸ್​ನ ಕೆಳಹಂತದ ಶಾಸಕರನ್ನು ಮೊದಲು ಹದ್ದುಬಸ್ತಿನಲ್ಲಿಡಬೇಕು. ಮನಸ್ಸಿಗೆ ಬಂದಂತೆ ಮಾತನಾಡಬಾರದು. ಸರ್ಕಾರದ ಯಾವುದೇ ಬೆಳವಣಿಗೆಗೆ ಸಂಬಂಧಿಸಿದಂತೆ ಮಾತನಾಡಲು ದೇವೇಗೌಡರು, ರಾಹುಲ್ ಗಾಂಧಿ, ಕುಮಾರಸ್ವಾಮಿ, ಪರಮೇಶ್ವರ್ ಇದ್ದಾರೆ. ತಮ್ಮ ನಾಯಕರನ್ನು ಖುಷಿ ಪಡಿಸಲು ಕಾಂಗ್ರೆಸ್ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೊನ್ನೆ ಸೋಮಶೇಖರ್ ಅವರು ಬೆಂಗಳೂರಿಗೆ ಯಾವುದೇ ಅಭಿವೃದ್ದಿ ಅನುದಾನ ನೀಡೇ ಇಲ್ಲ ಎಂದಿದ್ದಾರೆ. ಮೆಟ್ರೋ ಎರಡನೆ ಹಂತಕ್ಕೆ ಕ್ಲಿಯರೆನ್ಸ್ ಕೊಟ್ಟಿದ್ದು ಯಾರು? ಎಲಿವೇಟೆಡ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಯಾರು? ದೇಶದಲ್ಲೇ ಕುಮಾರಸ್ವಾಮಿ ಅತ್ಯುತ್ತಮ ಮುಖ್ಯಮಂತ್ರಿ ಅಂತಾ ಹೊಗಳುತ್ತಿರುವಾಗ ಇವರು ಏನೇನೋ ಹೇಳಿಕೆ ಕೊಡೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

 

First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626