ಕಾಂಗ್ರೆಸ್​ ಶಾಸಕರ ರಾಜೀನಾಮೆ ಹಿಂದೆ ಮೋದಿ-ಅಮಿತ್​ ಶಾ ಇಲ್ಲ; ಬಿಜೆಪಿ ಪರ ಸಚಿವ ಜಿಟಿಡಿ ಭರ್ಜರಿ ಬ್ಯಾಟಿಂಗ್​​

ಮೋದಿ ಹಾಗೂ ಅಮಿತ್ ಶಾ ಬಜೆಟ್ ಹಾಗೂ ಅಧಿವೇಶನ ಕಡೆ ಗಮನ ಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕಾ, ಚೈನಾ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಪರ ಮಾತನಾಡಿದರು.

Latha CG | news18
Updated:July 2, 2019, 1:30 PM IST
ಕಾಂಗ್ರೆಸ್​ ಶಾಸಕರ ರಾಜೀನಾಮೆ ಹಿಂದೆ ಮೋದಿ-ಅಮಿತ್​ ಶಾ ಇಲ್ಲ; ಬಿಜೆಪಿ ಪರ ಸಚಿವ ಜಿಟಿಡಿ ಭರ್ಜರಿ ಬ್ಯಾಟಿಂಗ್​​
ಜಿ.ಟಿ. ದೇವೇಗೌಡ
  • News18
  • Last Updated: July 2, 2019, 1:30 PM IST
  • Share this:
ಮೈಸೂರು,(ಜು.02): ರಾಜ್ಯದ ಮೈತ್ರಿ ಸರ್ಕಾರದಲ್ಲಿ ಟೆನ್ಶನ್​ ವಾತಾವರಣ ಮನೆಮಾಡಿದೆ. ಒಂದೆಡೆ ಆಪರೇಷನ್ ಕಮಲ ಇನ್ನೊಂದೆಡೆ ರಾಜೀನಾಮೆ ಪರ್ವ. ಇದರಿಂದ ದೋಸ್ತಿ ನಾಯಕರಲ್ಲಿ ಆತಂಕ ಶುರುವಾಗಿದೆ. ಆದರೆ ಮೈಸೂರಿನಲ್ಲಿ ಜೆಡಿಎಸ್​-ಬಿಜೆಪಿ ನಾಯಕರು ಮಾತ್ರ ಕೂಲ್​ ಆಗಿ ಒಟ್ಟೊಟ್ಟಿಗೆ ನಗರ ಪ್ರದಕ್ಷಿಣೆ ಹಾಕಿದ್ಧಾರೆ.  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿ ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ ಜೊತೆ ಕ್ಷೇತ್ರ ಸಂಚಾರ ನಡೆಸಿದ್ದಾರೆ. ಈ ವೇಳೆ ಉನ್ನತ ಶಿಕ್ಷಣ ಸಚಿವ ಸಚಿವ ಜಿ.ಟಿ.ದೇವೇಗೌಡ ಮೋದಿ-ಅಮಿತ್​ ಶಾ ಪರ ಮಾತನಾಡಿ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರು ಇಲ್ಲ

ಕಾಂಗ್ರೆಸ್​ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರು ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಯಾರ ರಾಜೀನಾಮೆಯನ್ನು ಕೊಡಿಸಲು ಹೋಗಿಲ್ಲ.  ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರ ಬೀಳಿಸುವುದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮಿತ್​ ಶಾ ಹಾಗೂ ಮೋದಿಯವರ ಕೈಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ಇದ್ದರೆ ಬಿಜೆಪಿ ಸರ್ಕಾರ ರಚನೆ ಮಾಡುವ ನಿರ್ಧಾರ. ಬೇರೆ ಯಾರ ನಿರ್ದೇಶನ ಇದ್ದರೂ ಅದು ಅಧಿಕೃತ ಅಲ್ಲ.  ಬಿಜೆಪಿಯವರ ಮೇಲೆ ಯಾರು ಕೆಸರು ಎರಚುವ ಹಾಗಿಲ್ಲ. ಮೋದಿ ಹಾಗೂ ಅಮಿತ್ ಶಾ ಬಜೆಟ್ ಹಾಗೂ ಅಧಿವೇಶನ ಕಡೆ ಗಮನ ಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕಾ, ಚೈನಾ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಪರ ಮಾತನಾಡಿದರು.

ಶಾಸಕರ ರಾಜೀನಾಮೆ ಅಧಿಕೃತವಲ್ಲ

ಜೆಡಿಎಸ್‌ನಲ್ಲಿ ಯಾರು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದಲ್ಲ. ಆನಂದ್‌ ಸಿಂಗ್ ರಾಜೀನಾಮೆ ಪಾಪ ಅವರಿಗೇನು ಕಷ್ಟ ಇತ್ತೋ ಗೊತ್ತಿಲ್ಲ. ಯಾರು ಯಾರ ಮೇಲೂ ಕೆಸರೆರಚುವ ಪ್ರಶ್ನೆಯೇ ಇಲ್ಲ. ಶಾಸಕರು ಸ್ಪೀಕರ್​​ಗೆ ರಾಜೀನಾಮೆ ನೀಡಬೇಕು‌. ರಾಜೀನಾಮೆ ನೀಡಿರುವ ಇಬ್ಬರು ಸ್ಪೀಕರ್‌ಗೆ ನೀಡಿಲ್ಲ. ಹೀಗಾಗಿ ಶಾಸಕರ ರಾಜೀನಾಮೆ ಅಧಿಕೃತ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲ, ನಮ್ಮ ಪಾಡು ಕೇಳೊರಿಲ್ಲ; ಶಾಸಕ ತನ್ವೀರ್ ಸೇಠ್ ಅಸಮಾಧಾನ

ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕುಮಾರಸ್ವಾಮಿ ಇಬ್ಬರು ನಾಯಕರ ಮೇಲೂ ನನಗೆ ಪ್ರೀತಿ ಇದೆ. ಅವರಿಬ್ಬರು ಮಹಾನ್​ ನಾಯಕರು. ನನಗೆ ಎಲ್ಲಾ ಪಕ್ಷದ ನಾಯಕರ ಮೇಲೆ ಪ್ರೀತಿ ಇದೆ. ನಾನು ಎಲ್ಲೂ ಹೋಗಲ್ಲ, ಜೆಡಿಎಸ್​​ನಲ್ಲೇ ಇರುತ್ತೇನೆ. ನಾನು ಬಿಜೆಪಿಗೆ ಹೋಗಿದ್ದು ಅಧಿಕಾರದಲ್ಲಿ ಇಲ್ಲದಿದ್ದಾಗ.  ಅದರ ಪ್ರತಿಫಲವಾಗಿ ಗೃಹಮಂಡಳಿ ಅಧ್ಯಕ್ಷರನ್ನಾಗಿ‌ ಮಾಡಿದ್ದರು. ಆದರೆ ಈಗ ನಾನು ಬಿಜೆಪಿ ನಾಯಕರ ಜೊತೆ ಓಡಾಡ್ತಿರೋದು ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ  ಎಂದು ನ್ಯೂಸ್18ಗೆ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
Loading...

ಇದೇ ವೇಳೆ, ಬಿಜೆಪಿಯವರ ಯಾವ ಪ್ರಯತ್ನಗಳೂ ನಡೆಯಲ್ಲ. ಬಿಜೆಪಿ ತಂತ್ರ ನಡೆದಿದ್ದರೆ 6 ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ಅವರ ಯಾವ ಪ್ರಯತ್ನಗಳೂ ಫಲ ಕೊಟ್ಟಿಲ್ಲ ಎಂದರು.

First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...