ಕೋಲಾರ: ಅವಿಭಜಿತ ಚಿಕ್ಕಬಳ್ಳಾಪುರ-ಕೋಲಾರ (Chikkaballapura-Kolar) ಜಿಲ್ಲೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಜೆಡಿಎಸ್ (JDS) ನಾಯಕರು, ಎರಡು ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕೋಲಾರದಲ್ಲಿ ಸ್ಪರ್ಧೆ ಮಾಡ್ತಾರಾ ಎಂಬ ಚರ್ಚೆ ಜೋರಾದ ಬಳಿಕ ದಳಪತಿಗಳು ಕೋಲಾರ ಜಿಲ್ಲೆಯಲ್ಲೇ ಹೆಚ್ಚಿನ ಪ್ರಚಾರ ನಡೆಸಿದ್ದಾರೆ. ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ನೂಗಲಬಂಡೆ ಬಡಾವಣೆಯ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಎಂ ಇಬ್ರಾಹಿಂ ಆಗಮಿಸಿದ್ದರು.
ಹಣ ಎಸೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕಾರ್ಯಕ್ರಮದ ಬಳಿಕ ತೆರೆದ ವಾಹನದಲ್ಲಿ ರ್ಯಾಲಿ ನಡೆಸಲಾಯಿತು. ಈ ವೇಳೆ ಜೆಡಿಎಸ್ ಮುಖಂಡರೊಬ್ಬರು ಸಿಎಂ ಇಬ್ರಾಹಿಂ ಗೆ ದೃಷ್ಟಿ ತೆಗೆದು ಕಂತೆ ಕಂತೆ ಹಣವನ್ನು ಜೆಡಿಎಸ್ ಕಾರ್ಯಕರ್ತ ಮೇಲೆ ಎಸೆದಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ರೋಷನ್ ಬೆಂಬಲಿಗರು ಹಣ ಚೆಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: BS Yediyurappa: ಶಾಸಕಿಯ ಹೆಗಲ ಮೇಲೆ ಕೈಹಾಕಿ 'ನನ್ನ ಜೊತೆಗಿದ್ದಾರೆ' ಎಂದ ಮಾಜಿ ಸಿಎಂ ಬಿಎಸ್ವೈ
ತೆರೆದ ವಾಹನ ಮೇಲಕ್ಕೆ ತೆರಳಿದ್ದ ಜೆಡಿಎಸ್ ಮುಖಂಡ 10 ರೂಪಾಯಿ ಮುಖ ಬೆಲೆಯ ನಾಲ್ಕು ಕಂತೆ ನೋಟುಗಳನ್ನು ಎಸೆದಿದ್ದಾರೆ. ಹಣ ಎಸೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇಂದು ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಪರ ಇಬ್ರಾಹಿಂ ಮತಯಾಚನೆ ಮಾಡಿದ್ದಾರೆ.
ಕೋಲಾರದಿಂದಲೇ ಸ್ಪರ್ಧೆಗೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹ
ಇನ್ನು, ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತುಗಳ ಬೆನ್ನಲ್ಲೇ ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆಗೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲು ನಾಳೆ ಸಿದ್ದರಾಮಯ್ಯ ಅವರ ನಿವಾಸದ ಬಳಿ ತೆರಳಲು ಕಾರ್ಯಕರ್ತರು ಮುಂದಾಗಿದ್ದಾರೆ. ನಾಳೆ ಸಿದ್ದು ನಿವಾಸ ಬಳಿ 8ರಿಂದ 10 ಸಾವಿರ ಮಂದಿ ಜಮಾಯಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Operation Temple Land: ಅನ್ಯರ ವಶದಲ್ಲಿದ್ದ ಸ್ಥಳವನ್ನು ಕುಕ್ಕೆ ದೇವಸ್ಥಾನಕ್ಕೆ ಒಪ್ಪಿಸಿದ ಹಿಂದೂ ಜಾಗರಣ ವೇದಿಕೆ
ಕೋಲಾರ ಕ್ಷೇತ್ರದ ಒಕ್ಕಲಿಗ, ದಲಿತ, ಕುರುಬ ಸಮಾಜಗಳ ನಾಯಕರ ನೇತೃತ್ವದಲ್ಲಿ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದ ಬಳಿ ಆಗಮಿಸಲಿದ್ದಾರೆ. ಬೈಕ್ ಜಾಥಾ ಮೂಲಕ ತೆರಳಿರುವ ಕಾರ್ಯಕರ್ತರು ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ಆಗ್ರಹಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ