ಭದ್ರಕೋಟೆ ಕಳೆದುಕೊಂಡಿದ್ದು ಹೇಗೆ? ಉಪಸಮರ ಸೋಲಿನ ಆತ್ಮಾವಲೋಕನ ನಡೆಸಿದ ಜೆಡಿಎಸ್​

ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯಿದ್ದರೂ, ಸೋತಿದ್ದು ಎಲ್ಲಿ? ಈ ಸೋಲಿಗೆ ಕಾರಣವೇನು ಎಂಬ ಕುರಿತು ಚರ್ಚೆ ನಡೆಸಿದರು. ಅಷ್ಟೇ ಅಲ್ಲದೇ ತಮ್ಮ ಭದ್ರಕೋಟೆಯಾಗಿದ್ದ ಕೆ.ಆರ್​ ಪೇಟೆ ಕೈ ತಪ್ಪಿದ್ದಕ್ಕೆ ಅತೀವ ಬೇಸರ ವ್ಯಕ್ತಪಡಿಸಿದರು.

Seema.R | news18-kannada
Updated:December 10, 2019, 2:49 PM IST
ಭದ್ರಕೋಟೆ ಕಳೆದುಕೊಂಡಿದ್ದು ಹೇಗೆ? ಉಪಸಮರ ಸೋಲಿನ ಆತ್ಮಾವಲೋಕನ ನಡೆಸಿದ ಜೆಡಿಎಸ್​
ದೇವೇಗೌಡ- ಕುಮಾರಸ್ವಾಮಿ
  • Share this:
ಬೆಂಗಳೂರು (ಡಿ.10): ಉಪಚುನಾವಣೆಯಲ್ಲಿ ಕನಿಷ್ಠ 3 ಸ್ಥಾನಗಳಲ್ಲಿ ಗೆಲುವಿನ ಕನಸು ಕಂಡ ಜೆಡಿಎಸ್​ಗೆ ಫಲಿತಾಂಶ ದೊಡ್ಡ ಆಘಾತ ನೀಡಿದೆ. ತಮ್ಮ ಪ್ರಾಬಲ್ಯ ಹೊಂದಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಮೂಲಕ 15ರಲ್ಲಿ 1 ಕಡೆ ಖಾತೆ ತೆರೆಯುವಲ್ಲಿ ಕೂಡ ವಿಫಲವಾಯಿತು. 

ಈ ಸೋಲಿಗೆ ಕಾರಣ ಏನು ಎಂಬ ಕುರಿತು ಇಂದು ಜೆಡಿಎಸ್​ ನಾಯಕರು ಪರಾಮರ್ಶೆ ನಡೆಸಿದರು. ತಮ್ಮ ಕ್ಷೇತ್ರವಾದ ಕೆಆರ್​ ಪೇಟೆ, ಹುಣಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಹೇಗೆ ಪಕ್ಷ ಸೋತಿತು ಎಂಬುದರ ಕುರಿತು ದೇವೇಗೌಡರೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಿದರು.

ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯಿದ್ದರೂ, ಸೋತಿದ್ದು ಎಲ್ಲಿ? ಈ ಸೋಲಿಗೆ ಕಾರಣವೇನು ಎಂಬ ಕುರಿತು ಚರ್ಚೆ ನಡೆಸಿದರು. ಅಷ್ಟೇ ಅಲ್ಲದೇ ತಮ್ಮ ಭದ್ರಕೋಟೆಯಾಗಿದ್ದ ಕೆ.ಆರ್​ ಪೇಟೆ ಕೈ ತಪ್ಪಿದ್ದಕ್ಕೆ ಅತೀವ ಬೇಸರ ವ್ಯಕ್ತಪಡಿಸಿದರು.

ತಮ್ಮ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಾರಾಯಣಗೌಡ ಗೆಲುವು ಹೇಗೆ ಸಾಧ್ಯವಾಯಿತು. ನಮ್ಮ ಪ್ರಚಾರ ತಂತ್ರ ಸರಿಯಾಗಿರಲಿಲ್ಲವಾ ಎಂಬ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಕೆಆರ್​ ಪೇಟೆ ಕೈ ತಪ್ಪಿದ್ದಕ್ಕೆ ದೇವೇಗೌಡ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ 7 ಸ್ಥಾನಗಳನ್ನು ಕಳೆದ ವಿಧಾನಸಭೆಯಲ್ಲಿ ಗೆದ್ದಿದ್ದ ನಾವು ಕಳೆದ ಲೋಕಸಭೆಯಲ್ಲಿ ಒಮ್ಮೆ ಎಡವಿದೆವು. ಈಗ ಮತ್ತೆ ಅದೇ ತಪ್ಪು ಆಗಿದೆ. ಇದರಿಂದ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ತಗ್ಗಿದ್ದಂತೆ ಆಗಿದೆ ಎಂದು ಬೇಸರಿಸಿಕೊಂಡರು.

ಇದನ್ನು ಓದಿ: ಪಕ್ಷದೊಳಗಿನ ಹಿತಶತ್ರುಗಳ ವಿರುದ್ಧ ಹೋರಾಡಲು ನನ್ನಿಂದ ಅಸಾಧ್ಯ; ರಾಜೀನಾಮೆ ಹಿಂದಿನ ಕಾರಣ ತಿಳಿಸಿದ ಸಿದ್ದರಾಮಯ್ಯ

ಇನ್ನು ಈ ತಪ್ಪಿಗೆ ನಮ್ಮಲ್ಲಿನ ಒಡಕೇ ಕಾರಣ. ಜೆಡಿಎಸ್​ ಶಾಸಕರು ಸರಿಯಾಗಿ ಕೆಲಸ ಮಾಡಲಿಲ್ಲ . ನಮ್ಮ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ ಇದರಿಂದಾಗಿಯೇ ಈ ಪ್ರಮಾದ ನಡೆದಿದೆ ಎಂದು ಹೆಚ್​ಡಿಕೆ ಆರೋಪಿಸಿದರು.ಇದನ್ನೆಲ್ಲವನ್ನೂ ಆಲಿಸಿದ ಗೌಡರು, ಪಕ್ಷವನ್ನು ಮತ್ತೆ ಸಬಲೀಕರಣಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿಯೂ ಇದೆ. ಇದಕ್ಕಾಗಿ ಹೋರಾಡೋಣ. ಸೋಲಿಗೆ ಕಾರಣ ಹುಡುಕಿ  ಸರಿಪಡಿಸೋಣ ಎಂದು ಸಮಾಧಾನ ಪಡಿಸಿದರು.


First published: December 10, 2019, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading