ತುಮಕೂರಿನಲ್ಲಿ ದೇವೇಗೌಡರ ಸ್ಪರ್ಧೆ ಪಕ್ಕಾ? ನಾಳೆಯ ಜೆಡಿಎಸ್​ ವರಿಷ್ಠರ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಾಳೆ ನಡೆಯಲಿರುವ ಸಭೆಯಲ್ಲಿ ದೇವೇಗೌಡರು ನಿರ್ಧರಿಸಲಿದ್ದಾರೆ. ಇದರಿಂದಾಗಿ ನಾಳೆ ತುಮಕೂರು ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ನಡೆಯುವ ಸಭೆ ಬಹಳ ಕುತೂಹಲ ಮೂಡಿಸಿದೆ.

Latha CG | news18
Updated:March 20, 2019, 5:37 PM IST
ತುಮಕೂರಿನಲ್ಲಿ ದೇವೇಗೌಡರ ಸ್ಪರ್ಧೆ ಪಕ್ಕಾ? ನಾಳೆಯ ಜೆಡಿಎಸ್​ ವರಿಷ್ಠರ ಸಭೆಯಲ್ಲಿ ನಿರ್ಧಾರ ಸಾಧ್ಯತೆ
ಎಚ್​.ಡಿ. ದೇವೇಗೌಡ
  • News18
  • Last Updated: March 20, 2019, 5:37 PM IST
  • Share this:
ಬೆಂಗಳೂರು,(ಮಾ.20): ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಬೆಂಗಳೂರು ಉತ್ತರ ಬಿಟ್ಟು ತುಮಕೂರಿನತ್ತ ಮುಖ ಮಾಡಿದ್ದಾರಾ ಎಂಬ ಅನುಮಾನಗಳು ಹುಟ್ಟಿವೆ. ಏಕೆಂದರೆ, ನಾಳೆ ದೊಡ್ಡಗೌಡರು ತುಮಕೂರು ಕ್ಷೇತ್ರದ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ತುಮಕೂರು ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಪರಿಷತ್​​ ಸದಸ್ಯರು, ಮಾಜಿ ಸಂಸದರು ಭಾಗಿಯಾಗಲಿದ್ದಾರೆ.

ನಾಳೆ  ನಡೆಯಲಿರುವ ಜನಪ್ರತಿನಿಧಿಗಳ ಸಭೆಯಲ್ಲಿ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರು ಉತ್ತರದಿಂದಲೂ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​​ ಶಾಸಕರು ಹಾಗೂ ಸ್ಥಳೀಯ ಮುಖಂಡರು ಜೆಡಿಎಸ್​​ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೇವೇಗೌಡರನ್ನು ಸೋಲಿಸಲು ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ವೀಳ್ಯ

ಈ ನಡುವೆ ತುಮಕೂರು ಕ್ಷೇತ್ರದ ಶಾಸಕರಿಂದಲೂ ದೇವೇಗೌಡರಿಗೆ ಒತ್ತಡ ಹೆಚ್ಚಿದೆ. ಹೀಗಾಗಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಿದ್ದಾರೆ. ಇದರಿಂದಾಗಿ ನಾಳೆ ತುಮಕೂರು ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ನಡೆಯುವ ಸಭೆ ಬಹಳ ಕುತೂಹಲ ಮೂಡಿಸಿದೆ.

ಇನ್ನು, ತೂಮಕೂರಿನಲ್ಲಿ ಮಾಜಿ ಎಂಎಲ್​ಸಿ ರಮೇಶ್​ ಬಾಬು ಕೂಡ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ.
ಇಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಅಪೇಕ್ಷೆಯಿದೆ. ಸ್ಥಳೀಯ ನಾಯಕರು ತುಮಕೂರಿನಲ್ಲಿ ನಿಲ್ಲುವಂತೆ ಮನವಿ ಮಾಡಿದ್ದೇವೆ. ದೇವೇಗೌಡರು ನನ್ನ ಹೆಸರನ್ನು ಕೂಡ ಸೂಚಿಸಿದ್ದರು. ಇಲ್ಲಿ ಯಾವುದೇ ಗಿಮಿಕ್ ಪ್ರಶ್ನೆಯಿಲ್ಲ ಎಂದು ರಮೇಶ್ ಬಾಬು ಹೇಳಿದರು.ಮಗನ ಗೆಲುವಿಗಾಗಿ ರಹಸ್ಯ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಕೆಲ ಮುಖಂಡರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ದೇವೇಗೌಡರಿಗೆ ಮನವಿ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಅಂತ ಮುದ್ದಹನುಮೇಗೌಡರು ಹೇಳಿದ್ದಾರೆ. ಸದ್ಯ ಅವರು ಪ್ರಯತ್ನ ಮುಂದುವರೆಸಿದ್ದಾರೆ. ಪರ್ಯಾಯವಾಗಿ ಅವರ ಪಕ್ಷದಲ್ಲಿ ಅವರಿಗೆ ಒಳ್ಳೆ ಸ್ಥಾನ ಸಿಗಲಿದೆ. ನಮಗೆ ಜಿ. ಪರಮೇಶ್ವರ್, ಕೆ.ಎನ್ ರಾಜಣ್ಣ, ರಫೀಕ್ ಅಹಮದ್ ಕೂಡ ಬೆಂಬಲ ನೀಡಲಿದ್ದಾರೆ ಎಂದು ಜೆಡಿಎಸ್ ಮುಖಂಡರೂ ಆಗಿರುವ ರಮೇಶ್ ಬಾಬು ವಿಶ್ವಾಸ ವ್ಯಕ್ತಪಡಿಸಿದರು.

First published: March 20, 2019, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading