Rajya Sabha Election: ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ನಿಯೋಗ; ರಾಜ್ಯಸಭಾ ಚುನಾವಣೆಗೆ ರಣತಂತ್ರ

ಭೇಟಿ ಬಳಿಕ ಮಾತನಾಡಿದ ಜೆಡಿಎಸ್​ ಮುಖಂಡ ಟಿಎ ಶರವಣ, ನಾವು ಹಾಗೂ ಕಾಂಗ್ರೆಸ್ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಚಿಂತನೆ ಇಟ್ಟುಕೊಂಡಿದೆ. ಇನ್ನೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಎರಡು ದಿನ ಇದೆ. ಸಿದ್ದರಾಮಯ್ಯನವರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ ಎಂದರು.

ಸಿದ್ದರಾಮಯ್ಯರನ್ನ ಭೇಟಿಯಾದ ಜೆಡಿಎಸ್​ ನಿಯೋಗ

ಸಿದ್ದರಾಮಯ್ಯರನ್ನ ಭೇಟಿಯಾದ ಜೆಡಿಎಸ್​ ನಿಯೋಗ

  • Share this:
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಾಜ್ಯಸಭೆ ಚುನಾವಣೆಯ (Rajya Sabha Election) ಭರಾಟೆ ದಿನೇ ದಿನೇ ಬಿರುಸು ಪಡೆದುಕೊಂಡಿದೆ. ಜೆಡಿಎಸ್​ (JDS) ತನ್ನದೇ ರೀತಿಯಲ್ಲಿ ರಣತಂತ್ರ ರೂಪಿಸಿದೆ. ಇಂದು ಜೆಡಿಎಸ್ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು (Siddaramaiah) ಭೇಟಿ ಮಾಡಿತು. ಟಿಎ ಶರವಣ ಹಾಗೂ ಬಿಎಂ ಫಾರೂಖ್ ನೇತೃತ್ವದ ನಿಯೋಗ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬೆಂಬಲಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ಜೆಡಿಎಸ್​ ಮುಖಂಡ ಟಿಎ ಶರವಣ, ನಾವು ಹಾಗೂ ಕಾಂಗ್ರೆಸ್ ಕೋಮುವಾದಿ ಪಕ್ಷ ಅಧಿಕಾರದಿಂದ ದೂರ ಇಡಬೇಕು ಎಂಬ ಚಿಂತನೆ ಇಟ್ಟುಕೊಂಡಿದೆ. ಇನ್ನೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಎರಡು ದಿನ ಇದೆ. ಸಿದ್ದರಾಮಯ್ಯನವರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ನಾವು ಜ್ಯಾತ್ಯಾತೀತ ಚಿಂತನೆಗೆ ಅನುಗುಣವಾಗಿ ಮಾತುಕತೆ ಮಾಡಿದ್ದೇವೆ. ಪಕ್ಷದ ಪರವಾಗಿ ನಾನು ಫಾರೂಖ್ ಬಂದು ಭೇಟಿಯಾಗಿದ್ದೇವೆ. ಜೆಡಿಎಸ್ ಪಕ್ಷದ ಪರವಾಗಿ ನಾನು ಬಂದು ಮಾತನಾಡಿದ್ದೇನೆ. ನಾವು ಹಾಗೂ ಕಾಂಗ್ರೆಸ್ ಒಂದಾಗದಿದ್ದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತೆ. ಕುಮಾರಸ್ವಾಮಿಗೆ ಈ ಬಗ್ಗೆ ಗಮನಕ್ಕೆ ಇರಬಹುದು, ನಾನು ದೇವೇಗೌಡರ ಸೂಚನೆ ಮೇರೆಗೆ ಬಂದಿದ್ದೇನೆ. ಈಗ ಹೋಗಿ ಕುಮಾರಸ್ವಾಮಿಯವರಿಗೆ ಮಾಹಿತಿ ಕೊಡ್ತೇನೆ ಎಂದರು.

ದೇವೇಗೌಡರನ್ನು ಭೇಟಿ ಮಾಡಿ ಮನವಿ

ಇದಕ್ಕೂ ಮೊದಲು ಇಂದು ಬೆಳಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಿದ ಕೆ. ರಹಮಾನ್ ಖಾನ್, ತಮ್ಮ ಪುತ್ರ ಹಾಗೂ ಕಾಂಗ್ರೆಸ್​​ನ 2ನೇ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಬೆಂಬಲಿಸುವಂತೆ ಮನವಿ ಮಾಡಿದ್ರು. ನಾನು ಸಹ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ದೇನೆ. ಜಾತ್ಯತೀತ ಪಕ್ಷಗಳು ಒಂದಾಗಬೇಕು ಸಪೋರ್ಟ್ ಮಾಡಿ ಎಂದು ಮನವಿ ಮಾಡಿದ್ದೇನೆ. ಆದ್ರೆ ಅವರು ನಾವೇ ಅಭ್ಯರ್ಥಿ ಹಾಕ್ತೀವಿ ಸಪೋರ್ಟ್ ಮಾಡಿ ಅಂದ್ರು. ನಮ್ಮ ಸಂಖ್ಯಾಬಲ ಹೆಚ್ಚಿದೆ,  ಹೀಗಾಗಿ ನಮ್ಮ ಶಾಸಕರು ಕೇಳುವುದಿಲ್ಲ. ಇನ್ನೂ ನಾಮಪತ್ರ ವಾಪಸು ಪಡೆಯಲು ಎರಡು ದಿನ ಬಾಕಿ ಇದೆ ನೋಡೋಣ. ಎಲ್ಲರ ಜತೆ ಮಾತುಕತೆ ನಡೆಸುತ್ತೇನೆ ಎಂದು ಕೆ. ರಹಮಾನ್ ಖಾನ್ ಅವರಿಗೆ ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ; ಯಾರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ಕಾಂಗ್ರೆಸ್​​ನಿಂದ ಬಿಜೆಪಿಗೆ ಅನುಕೂಲ ಆಗ್ತಿದೆ

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಬಂಡೆಪ್ಪ ಖಾಶೆಂಪುರ್, ಈಗ ರಾಜ್ಯದಲ್ಲಿ ಹೆಚ್ಚುವರಿ ಕ್ಯಾಂಡಿಡೇಟ್ ಹಾಕಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿದ್ದಾರೆ. ನಮ್ಮ ವರಿಷ್ಠರು ದೇವೇಗೌಡರು ಹಾಗೂ ಸೋನಿಯಾ ಗಾಂಧಿ ಇಬ್ಬರೂ ಮಾತಾಡಿದ್ದಾರೆ. ಅವರ ಬಳಿ ಸಂಖ್ಯೆ ಇಲ್ಲ, ಆದ್ರೂ ಅಭ್ಯರ್ಥಿ ಹಾಕಿ ಗೊಂದಲ ಮಾಡಿದ್ದಾರೆ. ಬಿಜೆಪಿಗೆ ಅನುಕೂಲ ಮಾಡ್ತಿರೋದು ಕಾಂಗ್ರೆಸ್ ಎಂದುನ ಆರೋಪಿಸಿದ ಅವರು ಈಗಲೂ ಕಾಲ ಮಿಂಚಿಲ್ಲ ಟೈಮ್ ಇದೆ. ಸೆಕ್ಯುಲರ್‌ಗೆ ಸಪೋರ್ಟ್ ಮಾಡಿ ಎಂದರು.

ಹಾರ್ಸ್ ರೈಡಿಂಗ್ ಏನಿಲ್ಲ

ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಬಂಡೆಪ್ಪ ಖಾಶೆಂಪುರ್, ಈ ಬಗ್ಗೆ ರೇವಣ್ಣ ಏನು ಹೇಳ್ತಾರೆ ನೋಡೋಣ. ಪಕ್ಷ ಏನು ಹೇಳುತ್ತೆ ಅದರಂತೆ ನಡೀತೀವಿ. ಸಂಖ್ಯಾ ಬಲದಲ್ಲಿ ಎಲ್ಲರಿಗಿಂತ ನಮ್ಮದು ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದಲ್ಲಿ ಗೆಲ್ಲೋ ಸಾಧ್ಯತೆ ಇದೆ. ಹಾರ್ಸ್ ರೈಡಿಂಗ್ ಏನಿಲ್ಲ. ಅವರ ಪಕ್ಷದ ನಾಯಕ ಒಬ್ರು ಹೇಳ್ತಿದ್ರು ಪಕ್ಷ ನಿಷ್ಠೆ ಅಂತ. ಗೆಲ್ಲೋದು ಒಂದು ಕಡೆ, ಇರೋದು ಒಂದು ಕಡೆ ಎಂದು ತಿರುಗೇಟು ಕೊಟ್ಟರು.

ಜಮೀರ್ ಕಾಂಟ್ಯಾಕ್ಟ್ ವಿಚಾರವಾಗಿ ಮಾತನಾಡಿ, ಒಬ್ಬರು ಅವರ ಜೊತೆ ಇರಬಹುದು. ಯಾವುದೂ ಪ್ರತಿಷ್ಠೆ ತೆಗೆದುಕೊಳ್ಳೋದು ಬೇಡ. ಬಿಜೆಪಿಗೆ ಇನ್ನೊಂದು ಸೀಟು ಗೆಲ್ಲೋದು ಬೇಡ. ಈಗಲೂ ಕಾಲ ಮಿಂಚಿಲ್ಲ, ಕಾಂಗ್ರೆಸ್ ಜೆಡಿಎಸ್‌ನ ಬೆಂಬಲಿಸಲಿ. ಹಿಂದೆ ಮಾಡಿದವರ ಪರಿಸ್ಥಿತಿ ಏನಾಗಿದೆ ಈಗ ನೀವೇ ನೋಡ್ತಿದ್ದೀರಾ. ಕುಮಾರಸ್ವಾಮಿ ಅವರು ಬರ್ತಾರೆ. ಬಂದ ಬಳಿಕ ರಣತಂತ್ರ ರೂಪಿಸಲಿದ್ದಾರೆ ಎಂದರು.
Published by:Kavya V
First published: