ಟಿಕೆಟ್​ಗಾಗಿ ಜೆಡಿಎಸ್​​ನಲ್ಲಿ ನಡೆಯುತ್ತಿದೆ ಫೈಟ್: ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಟಿಕೆಟ್​ಗಾಗಿ ಪೈಪೋಟಿ


Updated:January 14, 2018, 9:42 AM IST
ಟಿಕೆಟ್​ಗಾಗಿ ಜೆಡಿಎಸ್​​ನಲ್ಲಿ ನಡೆಯುತ್ತಿದೆ ಫೈಟ್: ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಟಿಕೆಟ್​ಗಾಗಿ ಪೈಪೋಟಿ

Updated: January 14, 2018, 9:42 AM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜ.14): ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೆಡಿಎಸ್​ನಲ್ಲಿ ಟಿಕೆಟ್​ಗಾಗಿ ಫೈಪೋಟಿ ಶುರುವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್ ಶುರುವಾಗಿದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಪ್ಪ, ಸಾವ್ಕಾರ್ ರಂಗಪ್ಪ , ಈ ಕೃಷ್ಣಪ್ಪ ನಡುವೆ ಟಿಕೆಟ್​ಗಾಗಿ ಪೈಪೋಟಿ ಶುರುವಾಗಿದೆ. ಇತ್ತ ಪ್ರಜ್ವಲ್ ರೇವಣ್ಣ ಹೆಸರು ಕೇಳಬಂದಿದ್ದ ಆರ್ ಆರ್ ನಗರ ಕ್ಷೇತ್ರದ ಟಿಕೆಟ್ ಕೂಡಾ ಇನ್ನೂ ಫೈನಲ್ ಆಗಿಲ್ಲ. ಸದ್ಯ ಕೃಷ್ಣಮೂರ್ತಿ,ಆರ್ ಪ್ರಕಾಶ್ ನಡುವೆ ಹಗ್ಗಜಗ್ಗಾಟ ಶುರುವಾಗಿದೆ. ರಾಜಾಜಿನಗರದಲ್ಲಿ ಬಿಎಲ್ ತಿಮ್ಮೇಗೌಡ ಹಾಗೂ ಆನಂದ್ ನಡುವೆ ಟಫ್ ಫೈಟ್ ಇದೆ. ಸಭೆಗಳ ಮೇಲೆ ಸಭೆಗಳು ನಡೆದರೂ ಟಿಕೆಟ್ ಫೈನಲ್ ಮಾಡಲು ಜೆಡಿಎಸ್ ವರಿಷ್ಟರಿಗೆ ಸಾಧ್ಯವಾಗುತ್ತಿಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ ದೇಶದಾದ್ಯಂತ ಕುತೂಹಲ ಕೆರಳಿಸಿದ್ದು, ಯಾರು ಗೆಲ್ಲುತ್ತಅರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಹೀಗಿರುವಾಗ ಜೆಡಿಎಸ್​ ಪಕ್ಷದ ನಾಯಕರು ತಮ್ಮೊಳಗೇ ಕಚ್ಚಾಡಿಕೊಳ್ಳುತ್ತಿರುವುದು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ