ಕಡೂರು(ಡಿ.14): ಕಡೂರು ಕ್ಷೇತ್ರದ ಮಾಜಿ ಶಾಸಕ ಜೆಡಿಎಸ್ (JDS) ಹಿರಿಯ ನಾಯಕ ವೈಎಸ್‌ವಿ ದತ್ತ (YSV Datta) ಜೆಡಿಎಸ್‌ನಿಂದ ದೂರ ಸರಿಯುವ ಸುಳಿವು ನೀಡಿದ್ದಾರೆ. ಜನತಾ ದಳಕ್ಕೆ ರಾಜೀನಾಮೆ ನೀಡಿ ಡಿಸೆಂಬರ್ 17 ರಂದು ಕಾಂಗ್ರೆಸ್‌ಗೆ (Congress) ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಬಗ್ಗೆ ಅವರ ಆಪ್ತರ ಆಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಈ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ. ಈ ಹಿಂದೆಯೂ ಒಂದು ಬಾರಿ ದತ್ತ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರವಾಗಿ ಆಡಿಯೋ ಒಂದು ವೈರಲ್ ಆಗಿತ್ತು.
ಹೌದು ವೈಎಸ್‌ವಿ ದತ್ತ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆಂಬ ವಿಚಾರವಾಗಿ ಅವರ ಆಪ್ತ ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಯಟಗೇರಿ ಅವರ ಆಡಿಯೋ ಒಂದು ವೈರಲ್ ಆಗಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಇನ್ನು ದತ್ತ ಕಾಂಗ್ರೆಸ್ ಸೇರಿದ್ರೆ ಕಡೂರು ಕ್ಷೇತ್ರದಲ್ಲಿ ನೇರಾನೇರ ಹಣಾಹಣಿಯಾಗಲಿದೆ ಎನ್ನಲಾಗಿದ್ದು, ಜೆಡಿಎಸ್ಗೆ ಭಾರೀ ಹಿನ್ನಡೆಯಾಗಲಿದೆ.
ವೈರಲ್ ಆಡಿಯೋದಲ್ಲಿ ಏನಿದೆ?
ವೈರಲ್ ಆದ ಆಡಿಯೋದಲ್ಲಿ ಈಗ ತಾನೇ ದೂರವಾಣಿ ಮೂಲಕ ಶುಭ ಸಂದೇಶ ಕಳಿಸಿದ್ದಾರೆ. ಈಗಾಗಲೇ ನಿಮ್ಮೆಲ್ಲರ, ಜೆಡಿಎಸ್‌ನ ಮುಖಂಡರು, ಮತದಾರರು ಹಾಗೂ ಕಾಂಗ್ರೆಸ್ ಮುಖಂಡರ ವಿಶ್ವಾಸದ ಜೊತೆಯಲ್ಲಿ ಸಿದ್ದರಾಮಯ್ಯ ಅವರನ್ನು ಡಿಸೆಂಬರ್ 15ರಂದು ಭೇಟಿಯಾಗುತ್ತೇನೆ. ಅಂದೇ ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸುತ್ತೇನೆ ಎಂದಿರುವ ವೈಎಸ್‌ವಿ ದತ್ತಾ, ಡಿಸೆಂಬರ್ 17ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ದತ್ತಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ