ಕುಮಾರಸ್ವಾಮಿ ದ್ವಿಪತ್ನಿತ್ವ (ಬೈಗಮಿ) ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದ ಬಿಜೆಪಿ ವಿರುದ್ಧ ಕಿಡಿಕಾರಿದ ಟಿಎ ಶರವಣ

ಬೈಗಮಿ ಬಗ್ಗೆ ಮಾತನಾಡಿರುವುದು ತಪ್ಪು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹಿಡಿದಿರುವುದು ಸರಿಯಲ್ಲ. ಇತ್ತೀಚಿಗೆ ಸಚಿವರ ದಂಡು ಕೋರ್ಟ್ ಗೆ ಹೋಗಿ ಸಿಡಿ ಬಿಡುಗಡೆ ಬಗ್ಗೆ ಸ್ಟೆ ಪಡೆಯಿತು? ರಾಜ್ಯದ ಪ್ರಭಾವಿ ಮಂತ್ರಿಗಳು, ಕೇಂದ್ರ ದ ಮಂತ್ರಿಗಳು, ಬಂಡಾಯ ನಾಯಕರು ಎಲ್ಲರದ್ದೂ ಒಂದೇ ಯೋಗ್ಯತೆ ಎಂದು ಕಿಡಿಕಾರಿದ್ದಾರೆ.

ಟಿಎ ಶರವಣ

ಟಿಎ ಶರವಣ

 • Share this:


  ಬೆಂಗಳೂರು: ಅಕ್ಟೋಬರ್ 30ರಂದು ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಮತದಾನ ನಡೆಯಲಿದೆ. ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ, ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಟೀಕಿಸುವ ಭರದಲ್ಲಿ ರಾಜಕೀಯ ನಾಯಕರಿಗೆ ತಾವೇನು ಮಾತನಾಡುತ್ತಿದ್ದೇವೆ, ಹೇಳುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದಂತೆ ಕಂಡುಬರುತ್ತಿದೆ. ಟ್ವೀಟ್ ಗಳ ಮೂಲಕ ವೈಯಕ್ತಿಕ ಮಟ್ಟಕ್ಕೂ ಇಳಿದು ಟೀಕಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಬಹಿರಂಗವಾಗಿ ಪರಸ್ಪರ ಟೀಕೆ, ಆರೋಪ ಮಾಡುವುದಲ್ಲದೆ ಟ್ವೀಟ್​ಗಳ ಮೂಲಕ ವೈಯಕ್ತಿ ಟೀಕೆಗಳಿಗೂ ಇಳಿದಿವೆ.

  ನಿನ್ನೆ ವಿಜಯಪುರದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ನಾನು ಆರ್ ಎಸ್ ಎಸ್ ಶಾಖೆಯಿಂದ ಕಲಿಯಬೇಕಾದ್ದು ಏನೂ ಇಲ್ಲ. ಆರ್​ಎಸ್​ಎಸ್​ನಲ್ಲಿ ತರಬೇತಿ ಪಡೆದು ಬಂದವರು ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ನೀಲಿ ಚಿತ್ರ ವೀಕ್ಷಣೆ ಮಾಡುತ್ತಾರೆ. ಇದೆನಾ? ಆರೆಸ್ಸೆಸ್​ ನಲ್ಲಿ ಹೇಳಿಕೊಡೋದು? ಇದನ್ನು ಕಲಿಯಲು ಆರ್​ಎಸ್​ಎಸ್ ಶಾಖೆಗೆ ಬರಬೇಕಾ? ​ ಎಂದು ಕಟುವಾಗಿ ಹೇಳಿದ್ದರು. ಅದಕ್ಕೆ ಬಿಜೆಪಿ ಟ್ವಿಟ್ಟರ್ ಪೇಜ್ ನಲ್ಲಿ ಇಂದು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಲಾಗಿದೆ. ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಬೇಕಲ್ಲವೇ, ನಿಮ್ಮ ಬಗ್ಗೆ ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವೆಲ್ಲ ತಪ್ಪುಗಳನ್ನು ಮಾಡಿರುವ ನೀವು ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ(ದ್ವಿ ಪತ್ನಿತ್ವ)ಯಲ್ಲವೇ ಎಂದು ಪ್ರಶ್ನೆ ಮಾಡಿ ಟೀಕಿಸಿದೆ.

  ಇದಕ್ಕೆ ಜೆಡಿಎಸ್​ ಹಾಗೂ ಜೆಡಿಎಸ್​ ನಾಯಕರು ಬಿಜೆಪಿ ವಿರುದ್ಧ ಕಿಡಿಕಾರಿದೆ. ವಿಶ್ವಾಸ ದ್ರೋಹದಲ್ಲಿ ಬಿಜೆಪಿ ಎತ್ತಿದ ಕೈ. ಪಕ್ಷ ಕಟ್ಟಿ ಬೆಳೆಸಿದ , ಬಿಎಸ್ವೈ ಅವರನ್ನೇ ಅವಮಾನ ಮಾಡಿ . ಅವರಿಂದ ಹೀನಾಯವಾಗಿ ರಾಜೀನಾಮೆ ಪಡೆದು, ಪಕ್ಷ ಕಟ್ಟಿದ ನಾಯಕನನ್ನು ದ್ರೋಹ ಮಾಡಿದ್ದು ದೊಡ್ಡ ವಿಶ್ವಾಸ ದ್ರೋಹ. ವಿಶ್ವಾಸ ದ್ರೋಹ ದ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಟಿ.ಎ. ಶರವಣ ಕಿಡಿ ಕಾರಿದ್ದಾರೆ.

  ಫೇಸ್​ಬುಕ್​ನಲ್ಲಿ ಈ ವಿಷಯವಾಗಿ ಬರೆದಿರುವ ಟಿ.ಎ. ಶರವಣ ಅವರು, ನಾಡಿನ ಜನ ಈ ಬಿಜೆಪಿ ಸಿಡಿಗಳನ್ನು ಕಣ್ಣಾರೆ ಕಂಡಿದ್ದರು. ಒಬ್ಬ ಅಲ್ಲ ಬೇಕಾದಷ್ಟು ನಾಯಕರು ಸಿಡಿಗಳಲ್ಲಿ ರಾಸಲೀಲೆಯಲ್ಲಿ ರಾರಾಜಿಸಿದ ನಾಯಕರ ಪಕ್ಷದಿಂದ ಕುಮಾರಣ್ಣ ನೈತಿಕತೆಯ ಪಾಠ ಕಲಿಯಬೇಕಾಗಿಲ್ಲ. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಪಾಠದ ಬಗ್ಗೆ ಬಿಜೆಪಿ ಮಾತನಾಡುವುದು ಜೋಕ್. ಹಾಸ್ಯಾಸ್ಪದ. ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಿಎಂ ಆಪ್ತ ಸಿಬ್ಬಂದಿ, ಗುತ್ತಿಗೆದಾರ ಮೇಲೆ ಬಿಜೆಪಿ ಅವರೇ ಐಟಿ ದಾಳಿ ಮಾಡಿಸಿದ್ದಾರೆ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ಸಣ್ಣ ಯೋಗ್ಯತೆ ಕೂಡ ಇಲ್ಲ ಎಂದು ಹೇಳಿದ್ದಾರೆ. 

  ಬೈಗಮಿ ಬಗ್ಗೆ ಮಾತನಾಡಿರುವುದು ತಪ್ಪು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹಿಡಿದಿರುವುದು ಸರಿಯಲ್ಲ. ಇತ್ತೀಚಿಗೆ ಸಚಿವರ ದಂಡು ಕೋರ್ಟ್ ಗೆ ಹೋಗಿ ಸಿಡಿ ಬಿಡುಗಡೆ ಬಗ್ಗೆ ಸ್ಟೆ ಪಡೆಯಿತು? ರಾಜ್ಯದ ಪ್ರಭಾವಿ ಮಂತ್ರಿಗಳು, ಕೇಂದ್ರ ದ ಮಂತ್ರಿಗಳು, ಬಂಡಾಯ ನಾಯಕರು ಎಲ್ಲರದ್ದೂ ಒಂದೇ ಯೋಗ್ಯತೆ. ಹೆಸರಗಳನ್ನು ಹೇಳುವುದಾದರೆ. *ಜಾರಕಿಹೊಲೀ, ಸದಾನಂದ ಗೌಡ, ಯತ್ನಾಳ್*.ಇನ್ನು ಬಿಡುಗಡೆಗೆ ಕಾದಿರುವ ಸಿಡಿ ಬಗ್ಗೆ ಬಿಜೆಪಿ ಏನು ಹೇಳುತ್ತದೆ. ಸಿಎಂ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದವರು ಎಂದು ನಾನಲ್ಲ ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಇಂಥ ಹೀನ, ನಾಚಿಕೆ ಗೆಟ್ಟ ಹಿನ್ನಲೆಯ ಬಿಜೆಪಿ ನಾಯಕರು ಕುಮಾರಸ್ವಾಮಿ ಬಗ್ಗೆ ಹೇಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

  ಇದನ್ನು ಓದಿ: RSS ಕೆಲಸ ಸಮಾಜ ಸೇವೆಯೋ? ರಾಜಕೀಯವೋ? ಹಣ ಮಾಡುವುದೋ?; JDS ಪ್ರಶ್ನೆ  ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಿ 750 ಕೋಟಿ ಅಕ್ರಮ ಆಸ್ತಿ ಪಾಸ್ತಿ ಪತ್ತೆ ಹಚ್ಚಿದರಲ್ಲ ಅದು ಯಾರದ್ದು? ಗುತ್ತಿಗೆದಾರರ ಹಣ ಎಲ್ಲಿಗೆ ಹೋಗುತ್ತಿತ್ತು? ಯಾರ್ಯಾರು ಶಾಮೀಲಾಗಿದ್ದಾರೆ ಎಂದು ಪತ್ತೆ ಹಚ್ಚಲೀ. ಇವರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು ಆಗುತ್ತದೆ. ಮಾಜಿ ಸಿಎಂ ಆಪ್ತ ಉಮೇಶ ಹತ್ತಿರ ಸುಮಾರು ಎರಡು ಸಾವಿರ ಕೋಟಿ ಆಸ್ತಿ ಎಲ್ಲಿಂದ ಬಂತು. ಅದು ಯಾರ ದುಡ್ಡು. KSRTC ಕಂಡಕ್ಟರ್ ಇಷ್ಟು ಹೇಗೆ ದುಡಿದ? ಅದು ಯಾರ ಅಕ್ರಮ ಹಣ?? ಉತ್ತರ ಕೊಡಿ ಬಿಜೆಪಿ ನಾಯಕರೇ ಎಂದು ಶರವಣ ಸವಾಲು ಹಾಕಿದ್ದಾರೆ.

  Published by:HR Ramesh
  First published: